ನವಲಗುಂದ: ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ತಂದೆಯನ್ನೇ ಕೊಂದ ಮಗ
* ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಭೋಗಾನೂರು ಗ್ರಾಮದಲ್ಲಿ ನಡೆದ ಘಟನೆ
* ಕುಡಿದುಬಂದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ತಂದೆ
* ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ದಾಖಲು
ನವಲಗುಂದ(ಸೆ.02): ತಾಲೂಕಿನ ಭೋಗಾನೂರು ಗ್ರಾಮದಲ್ಲಿ ತಂದೆಯನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ
ಕಲ್ಲಪ್ಪ ರುದ್ರಪ್ಪ ಕುಲಕರ್ಣಿ(50) ಮನೆಗೆ ದಿನಂಪ್ರತಿ ಕುಡಿದುಬಂದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಗ ಈರಪ್ಪ ಕಲ್ಲಪ್ಪ ಕುಲಕರ್ಣಿ (28) ತಂದೆಗೆ ಕೊಡಲೆ ಕಾವಿನಿಂದ ಹೊಡೆದಿದ್ದು, ತೀವ್ರ ಗಾಯಗೊಂಡ ಕಲ್ಲಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ, ಗ್ರಾಮಸ್ಥರು ಕಲ್ಲಪ್ಪನಿಗೆ ಇನ್ನೂ ಜೀವವಿದೆ ಎಂದು ನವಲಗುಂದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಅದಾಗಲೆ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರು ಸಹೋದರರ ಬರ್ಬರ ಹತ್ಯೆ
ಪ್ರಕರಣವು ನವಲಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಈರಪ್ಪ ಕಲ್ಲಪ್ಪ ಕುಲಕರ್ಣಿಯನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಸಿಪಿಐ ಸಿ.ಜಿ. ಮಠಪತಿ ತಿಳಿಸಿದ್ದಾರೆ.