Asianet Suvarna News Asianet Suvarna News

ಫುಟ್ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ರೌಡಿಶೀಟರ್‌ ಹತ್ಯೆ

*  2 ತಿಂಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ರೌಡಿ
*  ಕೋಣೆ ಬಾಗಿಲು ಹಾಕಿಕೊಂಡರೂ ಬಿಡದೆ ಕೊಲೆ
*  ಮಹಿಳೆಯರ ‘ಎ’ ಡಿವಿಜನ್‌ ಪಂದ್ಯ ಮುಂದೂಡಿಕೆ
 

Rowdysheeter Murder in Bengaluru grg
Author
Bengaluru, First Published Sep 13, 2021, 9:41 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.13): ರೌಡಿಯೊಬ್ಬನನ್ನು ಅಟ್ಟಾಡಿಸಿ ಹತ್ಯೆಗೈದಿರುವ ಘಟನೆ ಅಶೋಕ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಅರವಿಂದ್‌ (30) ಎಂಬಾತನೇ ಮೃತ ರೌಡಿಶೀಟರ್‌.

ಅರವಿಂದ್‌ ಸ್ಥಳೀಯ ಫುಟ್ಬಾಲ್‌ ತಂಡವೊಂದರ ಮ್ಯಾನೇಜರ್‌ ಆಗಿದ್ದ. ಕೆ.ಜಿ.ಹಳ್ಳಿ ಮತ್ತು ಭಾರತೀ ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದ ಅರವಿಂದ್‌ ವಿರುದ್ಧ ದರೋಡೆ, ಕೊಲೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿದ್ದವು. ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಅರವಿಂದ್‌ ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.

ಹಾಸನ; ಕಾರಿನಲ್ಲಿ ಬಂದ ಹಂತಕರು ಒಂಟಿ ಮಹಿಳೆಯ ಕೊಚ್ಚಿ ಹೋದರು!

ಅಶೋಕ್‌ ನಗರದಲ್ಲಿ ಇರುವ ಕೆಎಸ್‌ಎಫ್‌ಎ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಟೂರ್ನಿಮೆಂಟ್‌ ಇದ್ದ ಕಾರಣ ಅರವಿಂದ್‌ ಭಾನುವಾರ ಸಂಜೆ ತನ್ನ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದ. ಈ ವೇಳೆ ನಾಲ್ಕೈದು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳನ್ನು ಹಿಡಿದು ಅರವಿಂದ್‌ ಮೇಲೆ ಎರಗಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಅರವಿಂದ್‌ ಫುಟ್ಬಾಲ್‌ ಕ್ರೀಡಾಂಗಣದಲ್ಲಿದ್ದ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ. ಆದರೂ ಬಿಡದ ದುಷ್ಕರ್ಮಿಗಳು ಬಾಗಿಲು ಮುರಿದು ಒಳಗೆ ನುಗ್ಗಿ ಅರವಿಂದ್‌ನನ್ನು ಹತ್ಯೆ ಮಾಡಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಸಾಧ್ಯತೆ ಇದೆ. ಕೊಲೆ ಆರೋಪಿಗಳ ಬಂಧನಕ್ಕೆ ಎರಡು ತಂಡವನ್ನು ರಚಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

ಮಹಿಳೆಯರ ‘ಎ’ ಡಿವಿಜನ್‌ ಪಂದ್ಯಕ್ಕೆ ಅಡ್ಡಿ, ಮುಂದೂಡಿಕೆ

ಭಾನುವಾರ ನಡೆದ ಆಘಾತಕಾರಿ ಘಟನೆಯಿಂದಾಗಿ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ‘ಎ’ ಡಿವಿಜನ್‌ ಪಂದ್ಯಕ್ಕೆ ಅಡ್ಡಿಯಾಯಿತು. ದಿ ರೂಟ್ಸ್‌ ಎಫ್‌ಸಿ ಹಾಗೂ ಜಿಆರ್‌ಕೆ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಮುಂದೂಡಿಕೆಯಾಯಿತು. ಈ ಘಟನೆಯಿಂದಾಗಿ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆಯ ಲೋಪದ ಬಗ್ಗೆ ಇದ್ದ ಆರೋಪಗಳು ಸಾಬೀತಾಗಿದೆ. ಮುಂದಿನ ತಿಂಗಳು ಇದೇ ಕ್ರೀಡಾಂಗಣದಲ್ಲಿ ಐ-ಲೀಗ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಬೇಕಿದ್ದು, ಈ ಘಟನೆಯು ಆಯೋಜಕರು ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
 

Follow Us:
Download App:
  • android
  • ios