Mangaluru Crime: ಕಾಟಿಪಳ್ಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು: ಜಲೀಲ್ ಮೃತ ದೇಹವನ್ನಿಟ್ಟು ಧರಣಿ
ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿನ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 27ರ ಮುಂಜಾನೆವರೆಗೆ ಪೊಲೀಸ್ ಕಮಿಷನರ್ ಅವರು ಸೆಕ್ಷನ್ ಜಾರಿಗೊಳಿಸಿದ್ದಾರೆ. ಜೊತೆಗೆ, ಜಲೀಲ್ ಮೃತದೇಹವನ್ನಿಟ್ಟು ಜಿಲ್ಲಾಧಿಕಾರಿ ಆಗಮನಕ್ಕಾಗಿ ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದು, ಮತ್ತಷ್ಟು ಪಕ್ಷುಬ್ದ ವಾತಾವರಣ ನಿರ್ಮಾಣ ಆಗುವ ಸೂಚನೆ ಕಂಡುಬರುತ್ತಿದೆ.
ಮಂಗಳೂರು (ಡಿ.25): ಸುರತ್ಕಲ್ ನಲ್ಲಿ ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿನ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 27ರ ಮುಂಜಾನೆವರೆಗೆ ಪೊಲೀಸ್ ಕಮಿಷನರ್ ಅವರು ಸೆಕ್ಷನ್ ಜಾರಿಗೊಳಿಸಿದ್ದಾರೆ. ಜೊತೆಗೆ, ಜಲೀಲ್ ಮೃತದೇಹವನ್ನಿಟ್ಟು ಜಿಲ್ಲಾಧಿಕಾರಿ ಆಗಮನಕ್ಕಾಗಿ ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದು, ಮತ್ತಷ್ಟು ಪಕ್ಷುಬ್ದ ವಾತಾವರಣ ನಿರ್ಮಾಣ ಆಗುವ ಸೂಚನೆ ಕಂಡುಬರುತ್ತಿದೆ.
ಜಲೀಲ್ ಹತ್ಯೆಯ ನಂತರ ಸುರತ್ಕಲ್ ಮೂಲಕ ಕಾಟಿಪಳ್ಳಕ್ಕೆ ಜಲೀಲ್ ಮೃತ ದೇಹ ರವಾನೆ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಮೃತದೇಹ ರವಾನೆಯಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಭದ್ರತೆ ಒದಗಿಸಲಾಗಿತ್ತು. ಸುರತ್ಕಲ್ ನಿಂದ ಕಾಟಿಪಳ್ಳಕ್ಕೆ ಯಾವುದೇ ಅನ್ಯ ವಾಹನಗಳು ತೆರಳದಂತೆ ತಡೆಯಲಾಗಿತ್ತು. ಜಲೀಲ್ ಮನೆಯ ಬಳಿ ಮೃತದೇಹ ಇಟ್ಟ ನಂತರ ಸಂಬಂಧಿಕರು ಹಾಗೂ ಮುಸ್ಲಿಂ ಸೇರಿ ವಿವಿಧ ಸಮುದಾಗಳ ಜನರು ಮೃತದೇಹ ನೋಡಲು ಸೇರಿದ್ದರು.
Mangaluru: ಜಲೀಲ್ ಹತ್ಯೆ ಪ್ರಕರಣ: ಸುರತ್ಕಲ್ ಸುತ್ತಾಮುತ್ತಾ 144 ಸೆಕ್ಷನ್ ಜಾರಿ
ಅಂತಿಮ ದರ್ಶನಕ್ಕೆ ವ್ಯವಸ್ಥೆ: ಕಾಟಿಪಳ್ಳದ ನಾಲ್ಕನೇ ಬ್ಲಾಕ್ ನಲ್ಲಿರುವ ಜಲೀಲ್ ಮನೆಗೆ ಮೃತಶರೀರ ಮನೆ ತಲುಪಿದ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿರುವ ಜಲೀಲ್ ಬಂದುಗಳು. ಸುಮಾರು ಒಂದು ಗಂಟೆಗಳ ಕಾಲ ಅಂತಿಮ ದರ್ಶನ ಪಡೆಯಲು ಅವಕಾಶ. ಅಂತಿಮ ದರ್ಶನದ ಬಳಿಕ ಕುಳೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಂತ್ಯಕ್ರಿಯೆಗೂ ಮೊದಲೇ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಆಗಮನಕ್ಕಾಗು ಪಟ್ಟು ಹಿಡಿದಿದ್ದಾರೆ.
ಧರಣಿ ಆರಂಭಿಸಿದ ಕುಟುಂಬಸ್ಥರು: ಕಾಟಿಪಳ್ಳ ಬಳಿಯ ನಿವಾಸದ ಬಳಿ ಮೃತದೇಹ ಇಟ್ಟು ಕುಟುಂಬಸ್ಥರು ಮತ್ತು ಸಮುದಾಯದವರು ಧರಣಿ ಆರಂಭಿಸಿದ್ದಾರೆ. ಸ್ಥಳಕ್ಕೆ ದ.ಕ ಜಿಲ್ಲಾಧಿಕಾರಿ ಆಗಮಿಸುವಂತೆ ಆಗ್ರಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಬರೋವರೆಗೆ ಮೃತದೇಹ ಸಾಗಿಸಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಸದ್ಯ ಧರಣಿ ನಿರತರ ಜೊತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತುಕತೆ ನಡೆಸಿದರೂ ಪ್ರಯೋಜನ ಆಗುತ್ತಿಲ್ಲ. ಆದರೆ, ಧರಣಿ ಪ್ರದೇಶದಲ್ಲಿ ಸಾವಿರಾರು ಜನರು ಜಮಾವಣೆ ಆಗಿದ್ದಾರೆ.
Mangaluru: ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ: ಅಶ್ರಫ್ ಕಿನಾರ
ಹತ್ಯೆಗಳನ್ನು ನಿಯಂತ್ರಿಸದಿದ್ದರೆ ಅಧಿಕಾರ ಬಿಟ್ಟು ತೊಲಗಲಿ: ಮಂಗಳೂರಿನ ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬೊಮ್ಮಾಯಿ ಅವರು ಇಡೀ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಅವರು ತಾವು ಸಿಎಂ ಅನ್ನುವುದನ್ನ ಮರೆತಿದ್ದಾರೆ. ಏನೂ ರಿಯಾಕ್ಷನ್ ಆಯ್ತು, ಯಾರೂ ಏನೂ ತಪ್ಪು ಮಾಡಿದ್ದಾರೆ ಎನ್ನುತ್ತಾರೆ. ಇವರು ಇರೋದ್ಯಾಕೆ...? ನೈತಿಕ ಪೊಲೀಸ್ ಗಿರಿಯಲ್ಲಿ ಇವರು ಹೇಳಿಕೆ ಕೊಡ್ತಾ ಇದ್ದಾರೆ. ಸಂವಿಧಾನದ ವಿರುದ್ಧವಾಗಿ ಸಿಎಂ ನಡೆದುಕೊಳ್ಳುತ್ತಿದ್ದಾರೆ. ಈ ರೀತಿ ಪರಿಸ್ಥಿತಿಯಿಂದಲೇ ರಾಜ್ಯಕ್ಕೆ ಯಾರೂ ಇನ್ವೆಸ್ಟರ್ ಬರ್ತಾ ಇಲ್ಲಾ. ರಾಜ್ಯದಲ್ಲಿ ಏನೂ ಅಭಿವೃದ್ದಿ ಕಾರ್ಯಗಳು ಅಗ್ತಾಯಿಲ್ಲ ಆರ್ಥಿಕ ಬಿಕ್ಕಟ್ಟು ಆಗ್ತಾ ಇದೆ. ನಿರುದ್ಯೋಗ ಜಾಸ್ತಿ ಆಗ್ತಾ ಇದೆ ಇದಕ್ಕೆಲ್ಲ ಸಿಎಂ ಕಾರಣ. ಇವರ ಕಾಲದಲ್ಲಿ ನೈತಿಕ ಪೊಲೀಸ್ ಗಿರಿಗೆ ಎನ್ಕ್ರೆಜ್ ಮಾಡ್ತಾ ಬೇಜಾಬ್ದಾರಿ ಹೇಳಿಕೆ ನೀಡ್ತಾ ಇದ್ದಾರೆ. ರಾಜ್ಯಕ್ಕೆ ದೊಡ್ಡ ಅವಮಾನ. ಎಲ್ಲಿ ತನಕ ಇದೇ ರೀತಿ ನಡೆದುಕೊಳ್ತಾರೆ ಅನ್ನೊದನ್ನ ಹೇಳಲಿ. ಇವರಿಗೆ ಕಂಟ್ರೋಲ್ ಮಾಡೋಕೆ ಆಗಲಿಲ್ಲ ಅಂದ್ರೆ ಅಧಿಕಾರ ಬಿಟ್ಟು ತೊಲಗಲಿ. ಜನರ ಪ್ರಾಣ ತೆಗೆದುಕೊಳ್ಳೋದಲ್ಲ ಎಂದು ಕಿಡಿಕಾರಿದರು.
ಇದು ಸರ್ಕಾರ ಪ್ರಾಯೋಜಿತ ಹತ್ಯೆ: ಜಲೀಲ್ ಹತ್ಯೆಯ ಕುರಿತು ಮಾತನಾಡಿದ ಮಾಜಿ ಶಾಸಕ ಮೊಯಿದ್ದಿನ್ ಬಾವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರಿಯೆಗೆ ಪ್ರತಿಕ್ರಿಯೆ ಅಥವಾ ಪ್ರಚೋದನೆ ಬಳಿಕ ಈ ಘಟನೆಗಳಾಗುತ್ತಿವೆ. ಇದು ಸರ್ಕಾರ ಪ್ರಾಯೋಜಿತ ಹತ್ಯೆಯಾಗಿದೆ. ರಾಜಕೀಯಕ್ಕಾಗಿ ಇನ್ನೆಷ್ಟು ಹತ್ಯೆ ನಡೆಯಬೇಕು. ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ. ಆರೋಪಿಗಳಿಗೆ ಜಾಮೀನು ನೀಡಿ ಅವರಿಗೆ ರಕ್ಷಣೆ ಮಾಡಲಾಗುತ್ತಿದೆ. ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜಕೀಯಕ್ಕಾಗಿ ಬಡಪಾಯಿ ಜೀವ ಬಲಿ ಬೇಡ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ನಿಮ್ಮ ರಾಜಕೀಯಕ್ಕೆ ಬಡಪಾಯಿ ಜೀವ ಬಲಿ ತೆಗೆದುಕೊಳ್ಳಬೇಡಿ. ಮುಂದಿನ ಮೂರು ತಿಂಗಳಲ್ಲಿ ಇನ್ನಷ್ಟು ಹತ್ಯೆಗಳು ನಡೆಯಲಿವೆ? ಸುರತ್ಕಲ್ ,ಕೃಷ್ಣಾಪುರ , ಕಾಟಿಪಳ್ಳ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಈ ಭಾಗದಲ್ಲಿ ಮತ್ತಷ್ಟು ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.