ಥಾಣೆ(ಜು. 26)  40  ವರ್ಷದ ವ್ಯಕ್ತಿ ಬೀದಿ ಬದಿಯ ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಾಗ್ಲೆ ಎಸ್ಟೇಟ್ ಪಾದಚಾರಿ ಮಾರ್ಗದ ಬಳಿ ಮಂಗಳವಾರ ಸಂಜೆ 4.30ರ ವೇಳೆ ನಡೆದ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

ಅದಿತಿ ನಾಯರ್ ಎಂಬ ಪ್ರಾಣಿ ಹೋರಾಟಗಾರ್ತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಕಿರುತೆರೆ ನಟಿಯ ಮೇಲೆ ರೇಪ್..ಬ್ಲಾಕ್ ಮೇಲ್

ಮ್ಯಾನ್ ಹೋಲ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅತ್ಯಾಚಾರದ ಆರೋಪಿ.  ಮಾಮೂಲಿಯಂತೆ ಹುಡುಗರ ತಂಡವೊಂದು ಬೀದಿ ಬದಿ ನಾಐಇಗಳಿಗೆ ಆಹಾರ ನೀಡುತ್ತಿತ್ತು. ಮಂಗಳವಾರ ಆಹಾರ ನೀಡಲು ಹೋದಾಗ ಈ ವ್ಯಕ್ತಿ ಹೆಣ್ಣು ನಾಯಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದುದನ್ನು ಕಂಡಿದ್ದಾರೆ.  ತಕ್ಷಣವೇ ಅವರು  ಹೋರಾಟಗಾರ್ತಿ ನಾಯರ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಅನೈಸರ್ಗಿಕ ಸೆಕ್ಸ್ ಮತ್ತು ಪ್ರಾಣಿ ದಯಾ ಕಾನೂನಿನ ಅನ್ವಯ ದೂರು ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಡಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಈ ಹಿಂದೆಯೂ ಇತರ ಪ್ರಾಣಿಗಳಿಗೆ ಲೈಂಗಿಕ ಕಿರುಕುಳ ನೀಡಿರಬಹುದು ಎಂದು ಹೇಳಲಾಗಿದೆ.