ಡಕಾಯಿತಿ ಆರೋಪಿಯನ್ನೇ ಕಿಡ್ನಾಪ್ ಮಾಡಿ ಹಣ ಕೇಳಿದ ಪೊಲೀಸ್!

* ಡಕಾಯಿತಿ  ಪ್ರಕರಣದ ಆರೋಪಿಯನ್ಗನೇ  ಇಟ್ಟುಕೊಂಡೇ ಹಣ ಮಾಡಲು ಇಳಿದ ಪೊಲೀಸ್ 
* ಕಾನೂನು ಬಾಹಿರವಾಗಿ ಆರೋಪಿಯನ್ನು ಠಾಣೆಯಲ್ಲಿ ಇರಿಸಿಕೊಂಡರು
* ಕಿಡ್ನಾಪರ್ ರೀತಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟರು

Police Head constable dismissed, 2 others held for kidnapping accused in dacoity case mah

ನವದೆಹಲಿ (ಮೇ  26) ಡಕಾಯಿತಿ ಪ್ರಕರಣದ ಆರೋಪಿಗಳನ್ನೇ ಕಿಡ್ನಾಪ್ ಮಾಡಿ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ  ಪೊಲೀಸ್  ಕಾನ್ ಸ್ಟೇಬಲ್  ಒಬ್ಬನನ್ನು ಅಮಾನತು ಮಾಡಲಾಗಿದೆ.

ಆಗ್ನೇಯ ದೆಹಲಿಯ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಆರೋಪಿಗಳನ್ನು ಅಡಗಿಸಿ ಇಡಲಾಗಿತ್ತು ಎಂಬ ಆರೋಪ  ಕೇಳಿಬಂದಿತ್ತು.

ಪೊಲೀಸರ  ವಶದಲ್ಲಿ ಕಾನೂನು ಬಾಹಿರವಾಗಿ ಇದ್ದ 25 ವರ್ಷದ ವರುಣ್  ನ್ನು ರಕ್ಷಣೆ ಮಾಡಲಾಗಿದೆ.    ಆರೋಪಿಯನ್ನು ತಂದು ಠಾಣೆಯಲ್ಲಿ ಇಟ್ಟುಕೊಂಡಿರುವುದು ಉಳಿದ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ರಾಕೇಶ್ ಕುಮಾರ್ ಎನ್ನುವ ಪೇದೆಯುನ್ನು ಅಮಾನತು ಮಾಡಲಾಗಿದೆ. ಎಂದು  ಆಗ್ನೇಯ ವಿಭಾಗದ ಎಸ್‌ಪಿ ಆರ್‌ಪಿ ಮೀನಾ ತಿಳಿಸಿದ್ದಾರೆ.

ಬೇಕಾಬಿಟ್ಟಿ ಓಡಾಡುತ್ತಿದ್ದವರ ಹೆಡೆಮುರಿ ಕಟ್ಟಿದಾಗ  ಗೊತ್ತಾದ ಬೈಕ್ ರಾಬರಿ ಸ್ಟೋರಿ

ರಾಕೇಶ್ ಕುಮಾರ್  ಅಮೀರ್ ಖಾನ್ ಮತ್ತು ಮುಕೇಶ್ ಕುಮಾರ್ ಎನ್ನುವರ ಜತೆ ಸೇರಿಕೊಂಡು ಕೃತ್ಯ ಎಸಗಿದ್ದ. ಆರೋಪ ಕೇಳಿ ಬರುತ್ತಿದ್ದಂತೆ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಮೀರ್ ಖಾನ್ ಮತ್ತು ಮುಕೇಶ್ ಕುಮಾರ್  ಎಂಬುವರನ್ನು ಬಂಧಿಸಲಾಗಿದೆ. ಅಮೀರ್ ಖಾನ್ ಪೊಲೀಸ್ ಇನ್ ಫಾರ್‌ಮರ್ ಆಗಿ  ಕೆಲಸ ಮಾಡುತ್ತಿದ್ದರೆ ಮುಕೇಶ್ ಕುಮಾರ್   ಹೋಂ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

 ಈ ಪ್ರಕರಣ ಬೆಳಕಿಗೆ  ಬಂದಿದ್ದೆ ವಿಚಿತ್ರ. ಮಹಿಳೆಯೊಬ್ಬರು ಒಂದು ಲಕ್ಷ ರೂ. ಹಣದೊಂದಿಗೆ  ಯಾರಿಗೋ ಕಾಯುತ್ತಿದ್ದಾರೆ  ಎನ್ನುವ  ಮಾಹಿತಿ ಬಂದಾಗ ಪೊಲೀಸರು ಅಲರ್ಟ್ ಆಗಿದ್ದಾರೆ. ತನ್ನ ಸಹೋದರನನ್ನು ಕಿಡ್ನಾಪ್ ಮಾಡಲಾಗಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳೆ ಭಯದಿಂದಲೇ ಹೇಳಿದ್ದಾಳೆ. ಇದೆಲ್ಲ ಮೂಲ ಪತ್ತೆ ಹಚ್ಚಿದ ಮೇಲೆ  ಪೊಲೀಸಪ್ಪನ ಕಳ್ಳಾಟ ಬಯಲಾಗಿದೆ .

 

 

Latest Videos
Follow Us:
Download App:
  • android
  • ios