Asianet Suvarna News Asianet Suvarna News

ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ಕವಿ

* ದೃಶ್ಯಂ ಸಿನಿಮಾ ರೀತಿಯದ್ದೇ ನೈಜ ಘಟನೆ
* ಪತ್ನಿ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ ಕವಿ
* ಸುಳ್ಳು ದಾಖಲೆ ಸೃಷ್ಟಿ ಮಾಡಲು ತೀರ್ಥಯಾತ್ರೆಗೆ ಹೋದ

Poet chops wife's body into pieces in Meerut's Sardhana Uttar Pradesh mah
Author
Bengaluru, First Published Sep 16, 2021, 9:23 PM IST
  • Facebook
  • Twitter
  • Whatsapp

ಮೀರತ್(ಸೆ. 16)  ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ಧನ ಪಟ್ಟಣದ ಮಹಿಳೆಯ ನಿಗೂಢ ಕಣ್ಮರೆ ಹಿಂದಿನ ಸತ್ಯವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಲಕ್ನೋದ ಪ್ರಮುಖ ವರ್ತಕನ  ಮಗಳು ರೂಬಿ ಗುಪ್ತಾ ಎಂದು ಗುರುತಿಸಲಾಗಿದೆ. ಆಕೆ ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು.

ಮೂರು ವಾರಗಳ ಹಿಂದೆ ಸರ್ಧನದಲ್ಲಿರುವ ತನ್ನ ಪತಿಯ ಮನೆಯಿಂದ ನಾಪತ್ತೆಯಾಗಿದ್ದಳು.   ಈ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.  ಪ್ರಕರಣದಲ್ಲಿಮ ಕೊಲೆ ಆರೋಪಿಯನ್ನಾಗಿ ರೂಬಿ ಪತಿ  ಕವಿ ದೀಪಕ್ ನಿರಾಲನನ್ನು ಬಂಧಿಸಿದ್ದಾರೆ.  ವರ್ಷಗಳ ಹಿಂದೆ ಇಬ್ಬರು ಪ್ರೇಮಿಸಿ ಮದುವೆಯಾಗಿದ್ದರು.

ಸೆಕ್ಸ್ ಬೇಕು ಎಂದು ಕೇಳಿದರೆ ಸಾಯುವಂತೆ ಬಡಿಯುತ್ತಿದ್ದ ಪತಿರಾಯ!

ಹಣದ ವಿಚಾರಕ್ಕೆ ಉಂಟಾದ ಗಲಾಟೆಯಲ್ಲಿ ಪತ್ನಿ ಹತ್ಯೆ ಮಾಡಿರುವುದನ್ನು ದೀಪಕ್ ಒಪ್ಪಿಕೊಂಡಿದ್ದಾನೆ.  ಪತ್ನಿಯನ್ನು ಕಬ್ಬಿಣದ ರಾಡ್  ನಿಂದ ಹೊಡೆದು ಸಾಯಿಸಿದ ನಂತ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತಿರಿಸಿದ್ದ.  ನಂತರ ಚೀಲದಲ್ಲಿ ತುಂಬಿ ಶವದ ಭಾಗಗಳನ್ನು ಕಾಲುವೆಗೆ ಬಿಸಾಡಿದ್ದ ಎಂದು ಪೊಲೀಸರು ವಿವರ ತಿಳಿಸಿದ್ದಾರೆ.

ಹತ್ಯೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.  ಪತ್ನಿ ರೂಬಿ ಮತ್ತು ನಿರಾಲಾ ನಡುವೆ 20 ಲಕ್ಷ ರೂ.ಗೆ ಸಂಬಂಧಿಸಿ ವಿವಾದ ಎದ್ದಿತ್ತು ಎಂದು ಸರ್ಧನ ಎಸ್‌ಎಚ್‌ಒ ಬ್ರಿಜೇಶ್ ಕುಮಾರ್ ಹೇಳಿದ್ದಾರೆ. ಈ ವಿಚಾರವಾಗಿ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು.

ಆಗಸ್ಟ್ 22  ರಂದು ಪತ್ನಿ ರೂಬಿಗೆ ಟೀ ಮಾಡಿಕೊಡಲು ಗಂಡ ಕೇಳಿದ್ದಾನೆ. ಆಕೆ ಆಗಲ್ಲ ಎಂದಿದ್ದಾಳೆ. ಸಿಟ್ಟಿಗೆದ್ದವ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.  ಕಾಲುವೆಗೆ ಶವ ಎಸದೆ ಗಂಡ ತೀರ್ಥಯಾತ್ರೆಗೆಂದು ಹರಿದ್ವಾರಕ್ಕೆ ತೆರಳಿದ್ದ.  ದೃಶ್ಯಂ ಸಿನಿಮಾ ತರ ಕೊಲೆಯಾದ ದಿನ ತಾನು ಅಲ್ಲಿ ಇರಲೇ ಇಲ್ಲ ಎಂದು ದಾಖಲೆ ಸೃಷ್ಟಿ ಮಾಡುವುದಕ್ಕೂ ನೋಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

 

 

Follow Us:
Download App:
  • android
  • ios