2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ!
2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ| ದಿನಕ್ಕೆ ಸರಾಸರಿ 28 ಆತ್ಮಹತ್ಯೆ: ಎನ್‌ಸಿಆರ್‌ಬಿ ವರದಿ
ನವದೆಹಲಿ[ಜ.12]: 2018ರಲ್ಲಿ ಪ್ರತಿ ದಿನ ಸರಾಸರಿ 28 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ಬಿಡುಗಡೆ ಮಾಡಿರುವ ವರದಿಯಲ್ಲಿದೆ. 2018ರಲ್ಲಿ ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಇದು ಕಳೆದ ಒಂದು ದಶಕದಲ್ಲೇ ಅತ್ಯಧಿಕ ಎನಿಸಿಕೊಂಡಿದೆ.
ವರದಕ್ಷಿಣೆ ಕಿರುಕುಳದಲ್ಲಿ ದೇಶಕ್ಕೇ ಬೆಂಗಳೂರು ನಂ.1!
2009 ಜ.1ರಿಂದ 2018ರ ಡಿ.31ರ ಅವಧಿಯಲ್ಲಿ 81,758 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಶೇ.57ರಷ್ಟುಮಂದಿ ಕಳೆದ 5 ವರ್ಷದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 2018ರಲ್ಲಿ ನಡೆದ 10,159 ವಿದ್ಯಾರ್ಥಿಗಳ ಆತ್ಮಹತ್ಯೆ ಅತ್ಯಧಿಕ ಎನಿಸಿಕೊಂಡಿದೆ. ಇನ್ನು 2018ರಲ್ಲಿ ಒಟ್ಟಾರೆ 1.3 ಲಕ್ಷ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇದರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಶೇ.8ರಷ್ಟಿದೆ. ಇದು ರೈತಾಪಿ ವರ್ಗದ ಆತ್ಮಹತ್ಯೆಗೆ ಸಮನಾಗಿದೆ. ಆತ್ಮಹತ್ಯೆ ಪ್ರಕರಣದಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ.10ರಷ್ಟಿದೆ.
ಆತ್ಮಹತ್ಯೆಗೆ ಕಾರಣಗಳೇನು?
ಪರೀಕ್ಷೆ ವೈಫಲ್ಯ ನಾಲ್ಕರಲ್ಲಿ ಒಂದರಷ್ಟು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಕಾರಣವಾಗಿದ್ದರೆ, ಡಗ್ಸ್ ಸೇವನೆ, ಖಿನ್ನತೆ, ಕೌಟುಂಬಿಕ ಸಮಸ್ಯೆಗಳಿಂದಲೂ ವಿದ್ಯಾರ್ಥಿಗಳು ಆತ್ಮಹತ್ಯೆಯ ಮಾರ್ಗ ಹಿಡಿಯುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.