Dharwad: ಕಲಬುರ್ಗಿ ಹತ್ಯೆ ಆರೋಪಿಗಳು ಕೋರ್ಟ್‌ಗೆ ಹಾಜರ್: ಇಂದೇ ತೀರ್ಪು ಪ್ರಕಟ ಸಾಧ್ಯತೆ
* ಮುಂಬಯಿಂದ ಧಾರವಾಡದ ನ್ಯಾಯಾಲಯಕ್ಕೆ ಹಾಜರ್
* 2015 ರ ಆ. 30 ರಂದು ನಡೆದಿದ್ದ ಕಲಬುರ್ಗಿ ಹತ್ಯೆ
* ನ್ಯಾಯಾಲಯಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿಕೊಂಡು ಬಂದ ಆರೋಪಿಗಳು
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ(ಏ.08): ಧಾರವಾಡದ(Dharwad) ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ(Dr MM Kalburgi) ಹತ್ಯೆ ಆರೋಪಿಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ ಮಧ್ಯೆ ಮುಂಬಯಿಂದ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯಕ್ಕೆ ಇಂದು(ಶುಕ್ರವಾರ) ಹಾಜರುಪಡಿಸಿದ್ದಾರೆ. ಇಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿ ಕೇಳಿ ಬರುತ್ತಿದೆ. ಆರೋಪಿಗಳಾದ ಅಮೋಲ್ ಕಾಳೆ, ಪ್ರವೀಣ ಚತುರ್, ಗಣೇಶ ಮಿಸ್ಕಿನ್, ಅಮಿತ್ ಬುದ್ಧಿ, ವಾಸುದೇವ ಸೂರ್ಯವಂಶಿ ಹಾಗೂ ಶರತ್ ಕಲಾಸ್ಕರ್ ಎಂಬ ಆರು ಜನ ಆರೋಪಿಗಳನ್ನು(Accused) ಪೊಲೀಸರು(Police) ನ್ಯಾಯಾಲಯಕ್ಕೆ(Court) ಕರೆತಂದಿದ್ದಾರೆ. ಈ ಆರೂ ಜನ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿಕೊಂಡು ಬಂದಿದ್ದು ಗಮನ ಸೆಳೆದಿದೆ.
ಇಂದು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಸುದೀರ್ಘವಾದ ವಿಚಾರಣೆ ನಡೆಯಿತು. 2015ರ ಆ. 30ರಂದು ಬೆಳಗಿನ ಜಾವ ಕಲಬುರ್ಗಿಯವರು ಕಲ್ಯಾಣ ನಗರದಲ್ಲಿನ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಮನೆಗೆ ಬಂದ ಆಗಂತುಕರು ಬಾಗಿಲು ಬಡೆದಿದ್ದರು. ಆಗ ಹೊರಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ಕಲಬುರ್ಗಿಯವರ ತಲೆಗೆ ಗುಂಡು ಹೊಡೆದು ಆರೋಪಿಗಳು ಬೈಕ್ ಮೇಲೆ ಪರಾರಿಯಾಗಿದ್ದರು.
MM Kalburgi Murder Case: ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರ್
ಈ ಪ್ರಕರಣದಲ್ಲಿ ಗುಂಡು ಹೊಡೆದವರು ಹುಬ್ಬಳ್ಳಿ(Hubballi) ಮೂಲದ ಗಣೇಶ ಮಿಸ್ಕಿನ್ ಆನ್ನೋದು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮನೆಯಲ್ಲಿದ್ದ ಕಲಬುರ್ಗಿಯವರ ಪುತ್ರಿ ರೂಪದರ್ಶಿಯವರಿಗೆ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಲಾಯಿತು. ಇದಕ್ಕೂ ಮೊದಲು ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಪುತ್ರಿ ರೂಪದರ್ಶಿ,ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು. ಇನ್ನೂ ಅಂದು ಗುಂಡು ಹೊಡೆದು ಹೋಗಿದ್ದ ಗಣೇಶ ಮಿಸ್ಕಿನ್‌ನನ್ನು ಗುರುತಿಸುವ ವೇಳೆಯೂ ರೂಪದರ್ಶಿ ಕಣ್ಣೀರು ಹಾಕಿದರು. ಕಣ್ಣೀರು ಹಾಕುತ್ತಲೇ ಆಕ್ರೋಶದಿಂದ ಇವನೇ ಗುಂಡು ಹೊಡೆದಿದ್ದು ಅಂತ ಹೇಳಿದರು. ಇನ್ನು ಅಂದು ಮಿಸ್ಕಿನ್ ಗುಂಡು ಹೊಡೆದಿದ್ರೆ, ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ಮತ್ತೋರ್ವ ಆರೋಪಿ ಪ್ರವೀಣ ಚತುರ ಇದ್ದರು. ಆತನೇ ಮಿಸ್ಕಿನ್‌ನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದನು. ಅದನ್ನೂ ಸಹ ರೂಪದರ್ಶಿ ಗುರುತಿಸಿದ್ರು. ಈ ವಿಚಾರದ ಕುರಿತು ಸಮಗ್ರವಾದ ವಾದ-ವಿವಾದ ನಡೆದ ಬಳಿಕ ಕಲಬುರ್ಗಿಯವರ ಪತ್ನಿ ಉಮಾದೇವಿಯವರ ಸಾಕ್ಷ್ಯದ ವಿಚಾರಣೆಯನ್ನೂ ಸಹ ನಡೆಸಲಾಯಿತು.
Hubballi Accident: ಮತ್ತೊಂದು ಭೀಕರ ಅಪಘಾತ: XUV ಕಾರಲ್ಲಿದ್ದ ತಾಯಿ-ಮಗ ದಾರುಣ ಸಾವು
ಈ ವೇಳೆ ಅರೋಪಿ ಪರ ವಕೀಲರು ಸಾಕ್ಷಿಗಳನ್ನು ಏಕಕಾಲಕ್ಕೆ ಕ್ರಾಸ್ ಮಾಡಲು ತಮಗೆ ಸಿಆರ್‌ಪಿಸಿ 231 ಸೆಕ್ಷನ್ ಅಡಿಯಲ್ಲಿ ಅನುವು ಮಾಡಿಕೊಡುವಂತೆ ಅರ್ಜಿ ಸಹ ಸಲ್ಲಿಸಿದರು. ಈ ಮಧ್ಯೆ ವಿಚಾರಣೆಯಲ್ಲಿ ಕಲಬುರ್ಗಿಯವರು ಕೊಲೆ ನಡೆದ ಸಮಯದಲ್ಲಿ ಹಾಕಿಕೊಂಡಿದ್ದ ಶರ್ಟ್, ಬನಿಯನ್, ಪ್ಯಾಂಟ್, ಗುಂಡುಗಡಿಗೆ ಸೇರಿದಂತೆ ಅಂದಿನ ಕೆಲವೊಂದು ವಸ್ತುಗಳನ್ನು ಸಹ ನ್ಯಾಯಾಧೀಶರ ಮಧ್ಯೆ ಹಾಜರುಪಡಿಸಲಾಯಿತು.
2015 ರ ಆ. 30 ರಂದು ಧಾರವಾಡ ಕಲ್ಯಾಣನಗರದಲ್ಲಿ ಆರೋಪಿಗಳು ಕಲಬುರ್ಗಿ ಅವರ ಹಣೆಗೆ ಗುಂಡಿಟ್ಟು ಹತ್ಯೆ(Murder) ಮಾಡಿದ್ದರು. ಸದ್ಯ ಈ ಕೊಲೆ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳಿಗೆ ನ್ಯಾಯಾಲಯ ಯಾವ ಪ್ರಮಾಣದ ಶಿಕ್ಷೆ ವಿಧಿಸಲಿದೆ ಎಂಬುದು ಮಾಹಿತಿ ಕೇಳಿ ಬಂದಿದೆ.