Asianet Suvarna News Asianet Suvarna News

ಶೀಲ ಶಂಕಿಸಿ ಪತ್ನಿಯ ಬರ್ಬರ್ ಹತ್ಯೆ; ಪತಿ‌ ನೇಣಿಗೆ ಶರಣು!

  • ಶೀಲ ಶಂಕಿಸಿ ಪತ್ನಿಯ ಬರ್ಬರ್ ಕೊಲೆ; ಪತಿ‌ ನೇಣಿಗೆ ಶರಣು!
  •  ವಿದ್ಯಾಕಾಶಿ ಧಾರವಾಡದಲ್ಲೊಂದು ಕೊಲೆ..! 
  •  ಕೊಲೆ‌ ಮಾಡಿದ್ದಾರೋ? ಅಥವಾ ಪತ್ನಿ ಕೊಂದು ನೇಣಿಗೆ ಶರಣಾದನಾ?
  •  ಎಸ್ಪಿ ಲೋಕೇಶ್ ಜಗಲಾಸರ್ ಅವರ ತನಿಖೆಯಿಂದ‌ ಹೊರಬರಬೇಕಿದೆ‌ ಸತ್ಯ..! 
Husband surrendered to hanging after killing his wife at dharwad
Author
First Published Oct 12, 2022, 1:43 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಅ.12) : ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ‌ ಮಾಡಿ, ತಾನೂ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಿನ್ನೆ‌ ತಡರಾತ್ರಿ ನಡೆದಿದೆ. ಈ ಪ್ರಕರಣವನ್ನ ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಪೋಲಿಸರು ತನಿಖೆ‌ ತೀವ್ರಗೊಳಿಸಿದ್ದಾರೆ.ಚಿಕ್ಕಮಲ್ಲಿಗವಾಡ(Chikkamalligawada) ಗ್ರಾಮದ ರಾಜು ರಾಮಾಪೂರ(Raju Ramapur) ಎಂಬವನು ತನ್ನ‌ ಹೆಂಡತಿ ಶ್ರಿದೇವಿ(Shridevi) ಎಂಬುವರನ್ನ ಕೊಲೆ ಮಾಡಿ ತಾನು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾನೆ. ಇನ್ನು ಸ್ಥಳಕ್ಕೆ‌ ಬೇಟಿ ನೀಡಿದ ಎಸ್ಪಿ ಲೋಕೇಶ ಜಗಲಾಸರ್ ಅವರು ಸ್ಥಳ ಪರಿಶಿಲನೆ ಮಾಡಿ, ಅಲ್ಲಿರುವ ಮಾರಕಾಸ್ತ್ರಗಳನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಪಿಐ ಅವರಿಗೆ ತನಿಖೆಗೆ ಸೂಚಿಸಿದ್ದಾರೆ.

ಚಿಕ್ಕ ಮಲ್ಲಿಗವಾಡ ಗ್ರಾಮದಲ್ಲಿ ಈ ರಾಜು ತಾನಾಯ್ತು, ತನ್ನ ಕುಟುಂಬವಾಯ್ತು ಎಂದು ಜೀವನ ನಡೆಸುತ್ತಿದ್ದ. ಆಗಾಗ ಸ್ವಲ್ಪ ಡ್ರಿಂಕ್ಸ್ ಕೂಡ ಮಾಡ್ತಾ ಇದ್ದಾ ಎಂದು ಹೇಳಲಾಗುತ್ತಿದೆ. ಆದರೆ‌ ಆತ ಏಕಾಏಕಿ ದುಡುಕಿನ ನಿರ್ಧಾರದಿಂದ ತನ್ನ‌ ಹೆಂಡತಿ ಶೀಲ ಶಂಕಿಸಿ ಬರ್ಬರ ವಾಗಿ ಕೊಲೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಕೊಲೆಯ ಹಿನ್ನೆಲೆ ಭೇದಿಸಲು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆ ಯಾವ ರೀತಿ ನಡೆಸುತ್ತಾರೆಂಬುದು ಕಾದು ನೋಡಬೇಕಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಎಸ್‌ಪಿ ಲೋಕೇಶ ಜಗಲಾಸರ್ ಅವರು ಕೊಲೆಯಾದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅವನು ಪತ್ನಿಯ  ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ. ಹೊಡೆದ ರೀತಿಗೆ ಮುಖ ಮುಖ ಗುರುತು ಸಿಗದಷ್ಟು ವಿಕಾರವಾಗಿದೆ. ಈ ಪ್ರಕರಣ ಅನೈತಿಕ ಸಂಬಂಧದಿಂದಾದ ಕೊಲೆಯೋ, ಈ ಕೊಲೆಯ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೋ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ‌ ಸಂಬಂಧಪಟ್ಟಂತೆ ದೂರು ದಾಖಲಾಗಿದೆ. 

Murder: 50 ವರ್ಷವಾದ್ರೂ ಶೀಲ ಶಂಕೆ, ದಾರುಣವಾಗಿತ್ತು ಹೆಂಡತಿಯನ್ನು ಕೊಂದವನ ಸಾವು

ಮಹಿಳೆಯ ಗಂಡ‌ ತಾನಾಗಿ‌ ನೇಣಿಗೆ‌ ಶರಣಾಗಿದ್ದಾನೆ. ಕೊಲೆ ಮಾಡಿದ ಬಳಿಕ ನೇಣಿಗೆ ಶರಣಾಗಿರುವುದು ಕೂಡ ಅನುಮಾನಾಸ್ಪದವಾಗಿದ್ದು ಎಲ್ಲ ಆಯಾಮದಲ್ಲೂ  ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ. ಇನ್ನು ಮರಣೋತ್ತರ ಪರೀಕ್ಷೆ ಬಂದ‌ ಬಳಿಕವೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತಿಳಿಯುತ್ತದೆ. ಮರಣೋತ್ತರ ಪರೀಕ್ಷೆ ವರದಿ ಆಧಾರಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios