ಹಗರಿಬೊಮ್ಮನಹಳ್ಳಿ(ಫೆ.13): ವರ​ದ​ಕ್ಷಿಣೆ ಸಂಬಂಧಿ​ಸಿ​ದಂತೆ ಪತಿ-ಪತ್ನಿ ಜಗಳ ತಾರ​ಕಕ್ಕೇರಿ ಪತ್ನಿ ಸಾವಿ​ನಲ್ಲಿ ಅಂತ್ಯ​ವಾದ ಘಟನೆ ಪಟ್ಟ​ಣದಲ್ಲಿ ಗುರು​ವಾರ ನಡೆ​ದಿ​ದೆ.

ಪಟ್ಟ​ಣದ ನಿವಾಸಿ ಶಫಿ​ಉಲ್ಲಾ ತನ್ನ ಪತ್ನಿ ಮನ್ಸೂರ್‌ (30) ಅವ​ರನ್ನು ವೇಲ್‌​ನಿಂದ ಬಿಗಿದು ಕೊಲೆ ಮಾಡಿ​ದ್ದಾನೆ. ಶಫಿಉಲ್ಲಾ 6 ತಿಂಗಳ ಹಿಂದೆ ಹೂವಿ​ನಹಡಗಲಿಯ ಜಿಪಂ ಉಪಾ​ವಿ​ಭಾ​ಗ​ಕಾರಿ ಕಚೇ​ರಿ​ಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಕಾರ್ಯನಿರ್ವಹಿಸುತ್ತಿದ್ದ ಮನ್ಸೂರ್‌ ಅವರನ್ನು ಮದುವೆಯಾಗಿದ್ದ. 

ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು

ವರದಕ್ಷಿಣೆ ತರು​ವಂತೆ ಪೀಡಿ​ಸಿ​ದ್ದ​ರಿಂದ ಕೆಲ ದಿನಗಳ ಹಿಂದೆ ಜಗಳವಾಗಿ ಪತ್ನಿ ತವರು ಮನೆಗೆ ಹೋಗಿ​ದ್ದಳು. ಪಾಲ​ಕರು ಬುದ್ಧಿ ಹೇಳಿ ಮರಳಿ ಗಂಡನ ಮನೆಗೆ ಕಳಿ​ಸಿ​ದ್ದರು. ಇದೀಗ ಮತ್ತೊಮ್ಮೆ ಜಗ​ಳ​ವಾಗಿ ಕೊಲೆ​ಯಲ್ಲಿ ಅಂತ್ಯ​ವಾ​ಗಿದೆ. ಈ ಕುರಿತು ಸ್ಥಳೀಯ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದ್ದು ಆರೋ​ಪಿ​ಯನ್ನು ಪೊಲೀ​ಸರು ಬಂಧಿ​ಸಿ​ದ್ದಾ​ರೆ.