ಜೈಪುರ (ಮೇ  26)  ಭಿಕ್ಷೆ ಬೇಡಲು ಬಂದ ಮಹಿಳೆ ಮೇಲೆ ಆಂಬುಲೆನ್ಸ್ ಚಾಲಕರು ಅತ್ಯಾಚಾರ ನಡೆಸಿದ್ದಾರೆ.  ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಚಾಲಕರನ್ನು ಬಂಧಿಸಲಾಗಿದೆ.

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮಹಿಳೆ ಮೋತಿ ಡುಂಗ್ರಿ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಿದ್ದವಳು. ಭಿಕ್ಷೆ ಕೇಳಲು ಆಂಬುಲನ್ಸ್ ಚಾಳಕರ ಬಳಿಯೂ ಬಂದಿದ್ದಾಳೆ.

ಜಾಮೂನು ನೀಡುತ್ತೇನೆ ಎಂದು ನಂಬಿಸಿ ಬಾಲಕನಿಂದ ಕುಕೃತ್ಯ

ಹಸಿವಾಗ್ತಿದೆ, ಆಹಾರವಿಲ್ಲ ದಯವಿಟ್ಟು ನೆರವು ನೀಡಿ ಎಂದು ಕೇಳಿಕೊಂಡಿದ್ದಾಳೆ.  ಗಾಂಧಿ ಸರ್ಕಲ್ ಬಳಿ ನಿಂತಿದ್ದ ಆಂಬುಲೆನ್ಸ್ ಬಳಿ ಬಂದಿದ್ದಾಳೆ.  ಆಹಾರ ನೀಡುತ್ತೇವೆ ಎನ್ನುವ ನೆಪದಲ್ಲಿ ಆಕೆಯನ್ನು ಕಿರಾತಕರು ಆಂಬುಲೆನ್ಸ್ ಗೆ  ಹತ್ತಿಸಿಕೊಂಡಿದ್ದಾರೆ.   ಚಲಿಸುತ್ತಿರುವ ವಾಹನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಘಟನೆಯ ನಂತರ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಇಳಿಸಿ ತೆರಳಿದ್ದಾರೆ.  ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳಿಬ್ಬರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.