ಮನೆ ಮಾಲಕಿ ಹತ್ಯೆಗೆ ಟ್ವಿಸ್ಟ್; ದೆವ್ವಕ್ಕೆ ಹೆದರಿದ್ದಾಗ ಸಿಕ್ಕಿದ್ದು ಪಾಷಾ!
ಬೆಂಗಳೂರಿನಲ್ಲಿ ಮನೆ ಮಾಲಕಿ ಹತ್ಯೆ ಪ್ರಕರಣ/ ಎರಡೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್/ ದೆವ್ವಕ್ಕೆ ಹೆದರಿ ಬಾಡಿಗೆ ಕೊಟ್ಟಿದ್ದರಂತೆ/ ಗಾಂಜಾ ಮತ್ತಿನಲ್ಲಿ ಕತ್ತು ಸೀಳಿದ್ದ
ಬೆಂಗಳೂರು(ಫೆ. 05) ಮನೆ ಬಾಡಿಗೆ ನೀಡಿದ್ದ ನಿವೃತ್ತ ಉಪ ತಹಶಿಲ್ದಾರ್ ರಾಜೇಶ್ವರಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ನಾಲ್ವರನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ದಾಖಲಾದ ಎರಡೇ ದಿನದಲ್ಲಿ ಆರೋಪಿಗಳನ್ನ ಇನ್ಸ್ಪೆಕ್ಟರ್ ಮಿರ್ಜಾಅಲಿ ಬಂಧಿಸಿದ್ದಾರೆ. ಆಲಿಂ ಪಾಷಾ,ಇಬ್ರಾಹಾಂ, ಜಿಲಾನ್ ಹಾಗೂ ಅಜ್ಜಿ ಅಶ್ರಫ್ ಉನ್ನಿಸ್ಸಾ ಬಂಧಿತರು.
ಏನಿದು ಘಟನೆ : ಎರಡನೆ ಮಹಡಿಯಲ್ಲಿ ವಾಸವಿದ್ದ ಅಲಿಂ ಪಾಷ ಬಳಿ ರಾಜೇಶ್ವರಿ ಬಾಡಿಗೆ ಕೇಳಿದ್ದರು 7 ತಿಂಗಳ ಬಾಡಿಗೆ ಬಾಕಿ ಉಳಿದುಕೊಂಡಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ರಾಜೇಶ್ವರಿ ಕತ್ತನ್ನು ಗಾಂಜಾ ಮತ್ತಿನಲ್ಲಿಒದ್ದ ಪಾಷ ಸೀಳಿದ್ದಾನೆ.
ಗಾಂಜಾ ಮತ್ತಿನಲ್ಲಿ ಮನೆ ಮಾಲಕಿಯ ಹೆಣ ಬಿತ್ತು
ಈ ವೇಳೆ ಮೂರನೇ ಮಹಡಿಯಲ್ಲಿದ್ದ ಆಲಿಂ ಪಾಷಾ ಅಜ್ಜಿ ಅಶ್ರಫ್ ಉನ್ನಿಸಾ ಓಡಿ ಬಂದಿದ್ದಾರೆ. ಘಟನೆ ನೋಡುತ್ತಿದ್ದ ಅಜ್ಜಿ ಅಶ್ರಫ್ ಉನ್ನಿಸಾ ಶಾಕ್ ಆಗಿದ್ದಾರೆ. ಅಜ್ಜಿ ಮುಂದೆ ಆಲಿಂ ಪಾಷಾ ನಾನು ಪೊಲೀಸ್ ಶರಣಾಗುತ್ತೇನೆ ಎಂದಿದ್ದ. ಈ ವೇಳೆ ಅಜ್ಜಿ ಬೇಡ ಮೃತ ದೇಹವನ್ನ ಸುಟ್ಟುಹಾಕಿ ಬಿಡೋಣ ಎಂದಿದ್ದಾಳೆ ಮನೆಯಲ್ಲಿದ್ದ ಅಲಿಂ ಪಾಷಾ ಚಿಕ್ಕಪ್ಪ ಇಬ್ರಾಹಿಂ ಹಾಗೂ ಜಿಲಾನ್ ಗೆ ವಿಷಯ ಮುಟ್ಟಿಸಿದ್ದಾರೆ. ನಂತರ ರಾಜೇಶ್ವರಿ ದೇಹವನ್ನ ಗುರುತು ಸಿಗದಂತೆ ಬೆಡ್ ಶೀಟ್ ಹಾಗೂ ಚೀಲದಲ್ಲಿ ಕಟ್ಟಿದ್ದಾರೆ. ಅಲಿಂ ಪಾಷ ಬಳಿ ಇದ್ದ ಗೂಡ್ಸ್ ಆಟೋ ಹಿಂಬದಿಯಲ್ಲಿ ಹಾಕಿ ನಾಲ್ವರೂ ಬಿಡಿದಿ ಕಡೆ ಪ್ರಯಾಣ ಬೆಳೆಸಿದ್ದಾರೆ.
ಸಾಗುವ ದಾರಿಯಲ್ಲಿ ಅಂದ್ರೆ ಗಿರಿನಗರ ಬಿಡಿಎ ಪಾರ್ಕ್ ಬಳಿ ರಾಜೇಶ್ವರಿ ಮೊಬೈಲ್ ಎಸೆದಿದ್ದಾರ ನಂತರ ಬಿಡಿದಿ ಹೈವೆ ಪಕ್ಕದ ನಿರ್ಜನ ಪ್ರದೇಶದಲ್ಲಿ ಮೃತ ರಾಜೇಶ್ವರಿ ದೇಹ ಬಿಸಾಡಿದ್ದಾರೆ. ನಂತರ ಗುರುತು ಸಿಗದಂತೆ ದೇಹಕ್ಕ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಎಲ್ಲವನ್ನು ಒಪ್ಪಿಕೊಂಡಿದ್ದಾರೆ
ಇದರ ಜತೆಗೆ ಇನ್ನೊಂದು ಸಂಗತಿಯೂ ಬಯಲಾಗಿದೆ. ದೆವ್ವಕ್ಕೆ ಹೆದರಿ ಮನೆಯನ್ನು ರಾಜೆಶ್ವರಿ ಬಾಡಿಗೆ ನೀಡಿದ್ದರು. ಪಾರ್ವತಿ ಪುರಂನಲ್ಲಿ ರಾಜೇಶ್ವರಿ ವಾಸವಿದ್ದರು. ರಾಜೇಶ್ವರಿ ಎರಡನೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ದ್ವೀತಿಯ ಪಿಯುಸಿ ಯಲ್ಲಿ ಕಡಿಮೆ ಅಂಕ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಳು.
ಇದೇ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಮಗನೊಂದಿಗೆ ಕೊರಮಂಗಲಕ್ಕೆ ರಾಜೇಶ್ವರಿ ಕುಟುಂಬ ಶಿಫ್ಟ್ ಆಗಿತ್ತು ಎನ್ನಲಾಗಿದೆ. ಪಾರ್ವತಿ ಪುರಂ ನಲ್ಲಿದ್ದ ಮನೆಯನ್ನ ಬಾಡಿಗೆ ನೀಡಲು ಮುಂದಾಗಿದ್ದ ರಾಜೇಶ್ವರಿಗೆ ಪಾಷಾ ಸಿಕ್ಕಿದ್ದ. ಪಾಷಾ ಗಾಂಜಾ ವ್ಯಸನಿಯಾಗಿದ್ದ ಎಂಬುದು ಬಹಿರಂಗವಾಗಿದೆ.