Asianet Suvarna News Asianet Suvarna News

ಕಲಬುರಗಿಯಲ್ಲಿ ಹಿಟ್ ಆ್ಯಂಡ್​ ರನ್ ಕೇಸ್; ಕಾಂಗ್ರೆಸ್ ಎಂಎಲ್​ಸಿ ತಾಯಿ ಸಾವು!

ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಬಲಿಯಾಗಿದ್ದಾರೆ.  ಇಂದು ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಈ ಅಪಘಾತ ಸಂಭವಿಸಿದ್ದು, ಅರವಿಂದ ಅರಳಿ ಅವರ ತಾಯಿ ಸುಮಿತ್ರಾಬಾಯಿ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. 

Hit and run case in Kalaburagi; Congress MLCs mother is dead rav
Author
First Published Dec 14, 2023, 5:50 AM IST

ಕಲಬುರಗಿ (ಡಿ.14): ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಬಲಿಯಾಗಿದ್ದಾರೆ.  ಇಂದು ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಈ ಅಪಘಾತ ಸಂಭವಿಸಿದ್ದು, ಅರವಿಂದ ಅರಳಿ ಅವರ ತಾಯಿ ಸುಮಿತ್ರಾಬಾಯಿ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. 

ಬೈಕ್​ ಗುದ್ದಿದ ರಭಸಕ್ಕೆ ಸುಮೀತ್ರಾಬಾಯಿ(75) ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಮಿತ್ರಾಬಾಯಿ ಅವರು ಬೀದರ್ ನಿಂದ ಕಲಬುರಗಿಯ ಬಿದ್ದಾಪುರ ಕಾಲೋನಿಯಲ್ಲಿರುವ ಅಳಿಯನ ಮನೆಗೆ ಆಗಮಿಸಿದ್ದ ವೇಳೆ ಅಪಘಾತ ನಡೆದಿದೆ. 

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್‌ ಪ್ರಕರಣ ದಾಖಲಾಗಿದೆ.

ಅಪ್ರಾಪ್ತರಿಗೆ ವಾಹನ ಕೊಡೋ ಮಾಲೀಕರೇ ಎಚ್ಚರ!;ಕೊಟ್ರೆ ಏನಾಗುತ್ತೆ ಅಂತೀರಾ? ಇಲ್ಲಿ ನೋಡಿ!

ಅಪಘಾತಕ್ಕೆ ಕುರಿಗಾಯಿ ಮಹಿಳೆ, ಬೈಕ್‌ ಸವಾರ ಬಲಿ

 ಗುಡಿಬಂಡೆ: ಬೈಕ್ ನಲ್ಲಿದ್ದ ಯುವಕ ಹಾಗೂ ಕುರಿಗಾಹಿ ಮಹಿಳೆಯ ಮೇಲೆ ಲಾರಿ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಡಿಬಂಡೆ ಹೊರವಲಯದ ಗೌರಬಿದನೂರು ತಾಲೂಕಿನ ಚಿಮಕಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಗುಡಿಬಂಡೆ ಗೌರಿಬಿದನೂರು ಮಾರ್ಗದ ಚಿಮಕಲಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ಕುರಿಗಾಹಿ ತುಳಸಿಭಾಯಿ (50) ಮತ್ತು ಬೈಕ್ ನಲ್ಲಿದ್ದ ನಂದೀಶ್ ನಾಯಕ್ (16) ಎಂದು ಗುರ್ತಿಸಲಾಗಿದೆ.

ರಸ್ತೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಸ್ಕೂಟಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿ ಕುರಿ ಮೇಯಿಸುತ್ತಿದ್ದ ಮಹಿಳೆಗೂ ಸಹ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಗೊಂಡ ಬೈಕ್ ಸವಾರರನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.

ಬೆಂಗಳೂರು ವಾಹನ ಸವಾರರ ಮೇಲೆ 68 ಲಕ್ಷ ಟ್ರಾಫಿಕ್‌ ರೂಲ್ಸ್ ಉಲ್ಲಂಘನೆ ಕೇಸ್‌ ಹಾಕಿದ ಸಂಚಾರಿ ಪೊಲೀಸರು!

ಭೀಕರ ರಸ್ತೆ ಅಪಘಾತದಲ್ಲಿ ತಾಂಡಾ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟ ಸುದ್ಧಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಏಕಾಏಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಭೀಕರ ರಸ್ತೆ ಅಪಘಾತದಲ್ಲಿ ತಾಂಡಾ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟ ಸುದ್ಧಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಏಕಾಏಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

Follow Us:
Download App:
  • android
  • ios