Asianet Suvarna News Asianet Suvarna News

ಧಾರವಾಡ: ಮಾರಕಾಸ್ತ್ರಗಳಿಂದ ಕೊಚ್ಚಿ ಹೆಸ್ಕಾಂ ಬಿಲ್ ಕಲೆಕ್ಟರ್‌ ಬರ್ಬರ ಹತ್ಯೆ

ಕೊಲೆಯಾದ ರಜಾಕ್ ಹೆಸ್ಕಾಂ ಬಿಲ್ ಕಲೆಕ್ಟರ್ ಆಗಿದ್ದರು. ಕೆಲಸ‌ ಮುಗಿಸಿ ಬೈಕ್ ಮೇಲೆ ವಾಪಸ್ ಹೋಗುವಾಗ ದಾಳಿ ಮಾಡಿ ಕೊಲೆಗೈದ ದುಷ್ಕರ್ಮಿಗಳು. 

Hescom Bill Collector Murder in Dharwad grg
Author
First Published Oct 14, 2023, 9:30 AM IST

ಧಾರವಾಡ(ಅ.14):  ಹೆಸ್ಕಾಂ ಬಿಲ್ ಕಲೆಕ್ಟರ್‌ನೊಬ್ಬನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆಗೈದ ಘಟನೆ ಧಾರವಾಡ ಹೊರವಲಯದ ಹಳಿಯಾಳ್ ಬೈಪಾಸ್ ರಸ್ತೆಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ರಜಾಕ್ ಕವಲಗೇರಿ ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. 

ಹಳಿಯಾಳ ರಸ್ತೆಯ ಬೈಪಾಸ್ ಸೇತುವೆ ಬಳಿ ಬೈಕ್ ಮೇಲೆ ಯುವಕರು ಬಂದಿದ್ದರು, ಈ ವೇಳೆ ರಜಾಕ್‌ನನ್ನ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ‌‌ ತಿಳಿದು ಬಂದಿಲ್ಲ. 
ಉಪನಗರ ಠಾಣಾ‌‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಸುಪಾರಿ ಕೊಟ್ಟು ಮಗನನ್ನೇ ಕೊಲ್ಲಿಸಿದ ತಾಯಿ: ಹೆತ್ತ ಮಗನಿಗೇ ಮುಹೂರ್ತ ಇಟ್ಟಿದ್ಯಾಕೆ ?

ಕೊಲೆಯಾದ ರಜಾಕ್ ಹೆಸ್ಕಾಂ ಬಿಲ್ ಕಲೆಕ್ಟರ್ ಆಗಿದ್ದರು. ಕೆಲಸ‌ ಮುಗಿಸಿ ಬೈಕ್ ಮೇಲೆ ವಾಪಸ್ ಹೋಗುವಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಮೃತ ರಜಾಕ್ ಧಾರವಾಡ ತಾಲೂಕಿನ ಬಾಡ ಗ್ರಾಮದವರಾಗಿದ್ದಾರೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios