Mangaluru Fazil Murder; ಫಾಝಿಲ್ ಹತ್ಯೆಗೈದ 6 ಆರೋಪಿಗಳು ಅರೆಸ್ಟ್

ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ  ಮಂಗಲಪೇಟೆಯ ಮಹಮ್ಮದ್‌ ಫಾಝಿಲ್‌  ಹತ್ಯೆಯ  ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. 

fazil murder case 6 accused arrested by mangaluru police gow

ಮಂಗಳೂರು (ಆ.2): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ  ಮಂಗಲಪೇಟೆಯ ಮಹಮ್ಮದ್‌ ಫಾಝಿಲ್‌  ಹತ್ಯೆಯ   ಹಂತಕರನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 6 ಮಂದಿಯನ್ನು ಉಡುಪಿಯ ಉದ್ಯಾವರದಲ್ಲಿ ಬಂಧಿಸಲಾಗಿದ್ದು,  ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ (21), ಸುಹಾಸ್ ( 29), ಮೋಹನ್ (23) ಮತ್ತು ಗಿರೀಶ್ (27)  ಎಂದು ಗುರುತಿಸಲಾಗಿದೆ. ಇದರಲ್ಲಿ ಕೆಲವರು ರೌಡಿ ಶೀಟರ್ ಎಂದು ಮಂಗಳೂರು ಸಿಟಿ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ  ಶೋಧ ಮುಂದುವರೆದಿದೆ. ಈ ಆರು ಮಂದಿಯನ್ನು ಹೊರತುಪಡಿಸಿ  ಅಜಿತ್ ಕ್ರಾಸ್ತಾ  ಮತ್ತು ಅವರಿಗೆ ಸೇರಿದ ಇಯಾನ್ ಕಾರನ್ನು ಈಗಾಗಲೇ ವಶಕ್ಕೆ ‌ಪಡೆಯಲಾಗಿದೆ. ಅಜಿತ್ ಗೆ ಘಟನೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಅವರಿಗೆ ಕಾರು ಕೊಟ್ಟಿದ್ದಾರೆ. ಮೂರು ದಿನಕ್ಕೆ 15 ಸಾವಿರ ಕೊಡೋ ಭರವಸೆ ಕೊಟ್ಟಿದ್ದಾರೆ.  ಅಜಿತ್ ಕ್ರಾಸ್ತಾ ಹಣದ ಆಸೆಗೆ ಕಾರು ಗುರುತು ಮರೆಮಾಚಲು ಹೇಳಿ ಕಾರು ಕೊಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. 

ಟಾರ್ಗೆಟ್ ಲಿಸ್ಟ್ ಮಾಡಿ ಹತ್ಯೆಗೈದ ಆರೋಪಿಗಳು : ಆರೋಪಿಗಳು ಯಾರನ್ನು ಹತ್ಯೆ ಮಾಡಬೇಕೆಂದು ಟಾರ್ಗೆಟ್ ಲಿಸ್ಟ್ ಮಾಡಿಯೇ ಫಾಝಿಲ್ ಹತ್ಯೆ ಮಾಡಿದ್ದಾರೆ. ಜುಲೈ 26 ಸಂಜೆಯಿಂದಲೇ ಹತ್ಯೆಗೆ ಸಂಚು ನಡೆದಿತ್ತು. ಲಿಸ್ಟ್ ನಲ್ಲಿ ಯಾರನ್ನು ಹತ್ಯೆ ಮಾಡಬೇಕೆಂದು ಚರ್ಚೆ ನಡೆಸಿ. ಜುಲೈ 27ಕ್ಕೆ ಫಾಜಿಲ್ ಹತ್ಯೆಗೆ ಸ್ಕೆಚ್ ಹಾಕಿ. ಜು.27ರಂದು ಸುರತ್ಕಲ್ ನ ಒಂದು ಜಾಗದಲ್ಲಿ ಅಭಿಷೇಕ್ ಮತ್ತು ಶ್ರೀನಿವಾಸ ಉಳಿದವರನ್ನ ಸೇರಿಸಿ ಯಾವ ರೀತಿ ಹತ್ಯೆ ಮಾಡಬೇಕೆಂದು ಯೋಜನೆ ರೂಪಿಸಿ. ಮಂಗಳೂರು ಕೋರ್ಟ್ ಮುಗಿಸಿಕೊಂಡು ಬರ್ತಾರೆ. 

 ಪ್ರವೀಣ್‌ ನೆಟ್ಟಾರು ಹತ್ಯೆ ಬಗ್ಗೆ ಎನ್‌ಐಎ ಪ್ರಾಥಮಿಕ ತನಿಖೆ

ಆ ಬಳಿಕ ಜುಲೈ 28 ರಂದು ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದ ಕ್ಯಾಂಟೀನ್ ನಲ್ಲಿ ಸೇರ್ತಾರೆ.   ಅಂದೇ ಮದ್ಯಾಹ್ನ ಮೋಹನ್ ಮತ್ತು ಗಿರಿಧರ್ ಕಾರು ತೆಗೊಂಡು ಬರ್ತಾರೆ. ಗಿರಿಧರ್ ಇಯಾನ್ ಕಾರನ್ನು ಡ್ರೈವ್ ಮಾಡಿಕೊಂಡು ಬರ್ತಾರೆ. ಆ ಬಳಿಕ ಕಿ‌ನ್ನಿಗೋಳಿ ಬಾರ್ ನಲ್ಲಿ ಊಟ ಮಾಡಿ ಹತ್ಯೆಗೆ ಸಿದ್ದತೆ.  ಹತ್ಯೆಗೂ ಮುನ್ನ ‌ಸುರತ್ಕಲ್ ನ ಹತ್ಯೆ ಜಾಗದಲ್ಲಿ ಮೂರು‌ ಬಾರಿ ಓಡಾಟ ಮಾಡಿರುತ್ತಾರೆ. ಬಳಿಕ ರಾತ್ರಿ ಶ್ರೀನಿವಾಸ, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಕಾರಿನಿಂದ ಇಳಿದು ಫಾಜಿಲ್ ಮೇಲೆ ದಾಳಿ ಮಾಡುತ್ತಾರೆ. ಗಿರಿಧರ್ ಕಾರು‌ ಚಾಲಕನಾಗಿದ್ದು, ದೀಕ್ಷಿತ್ ಕಾರಿನಲ್ಲೇ ಇದ್ದ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಗಮನಿಸುತ್ತಿದ್ದ. ಹತ್ಯೆ ಮಾಡಿದ ಬಳಿಕ ಆರೂ ಮಂದಿ ಕೂಡ ಇನ್ನಾ ಭಾಗಕ್ಕೆ ತೆರಳಿ ಕಾರು ನಿಲ್ಲಿಸ್ತಾರೆ. ಬಳಿಕ ಮತ್ತೊಬ್ಬನ ಮೂಲಕ ಮತ್ತೊಂದು ಕಾರು ತರಿಸಿ ಎಸ್ಕೇಪ್ ಆಗುತ್ತಾರೆ

Praveen Netturu murder case; ಹಂತಕರ ಪತ್ತೆಗೆ ಮಂಗಳೂರು ಪೊಲೀಸರಿಂದ ಮಾಸ್ಟರ್ ಪ್ಲಾನ್

ಪ್ರೇಮ ಪ್ರಕರಣಕ್ಕೆ ನಡೆದ ಹತ್ಯೆಯಲ್ಲ: ಈ ಹತ್ಯೆ ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ  ನಡುವಿನ ಗಲಾಟೆ ಎಂದು ಸುದ್ದಿ ಹರಡಿತ್ತು. ಇದು ಅಂತ ಯಾವುದೇ ವಿಚಾರವಾಗಿ ನಡೆದ ಕೊಲೆ ಅಲ್ಲ. ಮಾತ್ರವಲ್ಲ ಇದು ಅವನ ವೈಯಕ್ತಿಕ ವಿಚಾರಕ್ಕೆ ‌ನಡೆದ ಹತ್ಯೆ ಕೂಡ ಅಲ್ಲ. ಪ್ರಕರಣ ನಡೆದ ‌ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ. ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ‌ನಡೆಸಲಾಗುವುದು. ಫಾಜಿಲ್ ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ.  ನಮ್ಮ ತನಿಖೆಯಲ್ಲಿ ಇದು ಫಾಸಿಲ್ ಮೇಲೆ ನಡೆದ ಪ್ಲಾನ್ ಅನ್ನೋದು ಸ್ಪಷ್ಟವಾಗಿದೆ ಎಂದು ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios