Praveen Netturu murder case; ಹಂತಕರ ಪತ್ತೆಗೆ ಮಂಗಳೂರು ಪೊಲೀಸರಿಂದ ಮಾಸ್ಟರ್ ಪ್ಲಾನ್
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಒಂದು ವಾರ ಕಳೆದರೂ ಹಂತಕರ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಖಾಕಿ ಪಡೆ ಕೊಲೆಗಾರರ ಪತ್ತೆಗೆ ಮಾಸ್ಟರ್ ಪ್ಲಾನ್ ಮಾಡಿದೆ.
ಬೆಳ್ಳಾರೆ (ಆ.2): ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಒಂದು ವಾರ ಕಳೆದರೂ ಹಂತಕರ ಸುಳಿವು ಪತ್ತೆಯಾಗಿಲ್ಲ. ತನಿಖೆಗೆ ಸಹಕರಿಸಿದವರು ಮಾತ್ರ ಈವರೆಗೆ ಬಂಧನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಂತಕರ ಪತ್ತೆ ಮಾಸ್ಟರ್ ಪ್ಲಾನ್ ಮಾಡಿರುವ ಖಾಕಿ ಪಡೆ ಮೂರು ಆಯಾಮಗಳಲ್ಲಿ ತನಿಖೆ ನಡೆಸಲು ಮುಂದಾಗಿದೆ.
ಮೊದಲನೇ ಆಯಾಮ ಕಳಂಜದಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್ ಹತ್ಯೆ ನಡೆಯಿತಾ? - ಹೀಗಾಗಿ ಮಸೂದ್ ಮನೆಯವರು ಮತ್ತು ಕುಂಟುಂಬಸ್ಥರು, ಸ್ನೇಹಿತರ ವಿಚಾರಣೆ.
ಎರಡನೇ ಆಯಾಮ - ಮೀನಿನ ಟೆಂಡರ್ ತಮ್ಮವರಿಗೆ ಕೊಡಿಸಿದ್ದಕ್ಕೆ ನಡೆಯಿತಾ ಕೊಲೆ?- ಮೀನಿನ ಮಾರ್ಕೆಟ್ ನಲ್ಲಿ ಹಿಡಿತ ಸಾಧಿಸಿದ್ದ ಪ್ರವೀಣ್, ಬೆಳ್ಳಾರೆಯಲ್ಲಿ ಮೊದಲ ಬಾರಿಗೆ ಪ್ರವೀಣ್ ಆಪ್ತರಿಗೆ ಟೆಂಡರ್. ಟೆಂಡರ್ ಕೈತಪ್ಪಿದ್ದಕ್ಕೆ ಕೊಲೆ ನಡೆಯಿತೇ ಎಂಬ ಬಗ್ಗೆ ತನಿಖೆ.
ಮೂರನೇ ಆಯಾಮ - ಕೋಳಿ ಮಾಂಸದ ಅಂಗಡಿಗಾಗಿ ನಡೆಯಿತಾ ಹತ್ಯೆ? ಹತ್ತು ತಿಂಗಳ ಹಿಂದೆಯಷ್ಷೇ ಮಾಂಸದಂಗಡಿ ಇಟ್ಟಿದ್ದ ಪ್ರವೀಣ್ ಹಿಂದೂಗಳಿಗೆ ಮಾಂಸದಂಗಡಿ ಇಡುವಂತೆ ಪ್ರೇರೇಪಣೆ ಮಾಡಿದ್ದಕ್ಕೆ ನಡೆಯಿತಾ ಕೊಲೆ ಎಂಬ ಆಯಾಮದಲ್ಲಿ ತನಿಖೆ ನಡೆಸಲು ಮುಂದಾಗಿದೆ.