Asianet Suvarna News Asianet Suvarna News

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆಯಿತಾ ಮರ್ಯಾದಾ ಹತ್ಯೆ?

ಇದೊಂದು ರೀತಿಯ ಚಲುವಿನ ಚಿತ್ತಾರ ಮಾದರಿಯ ಲವ್ ಸ್ಟೋರಿ. ಈ ಸ್ಟೋರಿಯಲ್ಲಿ ಮಗಳ ಪಾಲಿಗೆ ತಂದೆಯೇ ವಿಲನ್. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು‌ ಎನ್ನುವ ಕಾರಣಕ್ಕೆ ಪಾಪಿ ತಂದೆ ಅಪ್ರಾಪ್ತೆ ಮಗಳನ್ನು ಕಾಲೂವೆಗೆ ತಳ್ಳಿ ಕೊಲೆ ಮಾಡಿರೋ ಘಟನೆ ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮದಲ್ಲಿ ನಡೆದಿದೆ.. 

father killed his daughter ballari its Honor killing rav
Author
First Published Nov 9, 2022, 12:58 PM IST

ವರದಿ ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ನ.9): ಇದೊಂದು ರೀತಿಯ ಚಲುವಿನ ಚಿತ್ತಾರ ಮಾದರಿಯ ಲವ್ ಸ್ಟೋರಿ. ಈ ಸ್ಟೋರಿಯಲ್ಲಿ ಮಗಳ ಪಾಲಿಗೆ ತಂದೆಯೇ ವಿಲನ್. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು‌ ಎನ್ನುವ ಕಾರಣಕ್ಕೆ ಪಾಪಿ ತಂದೆ ಅಪ್ರಾಪ್ತೆ ಮಗಳನ್ನು ಕಾಲೂವೆಗೆ ತಳ್ಳಿ ಕೊಲೆ ಮಾಡಿರೋ ಘಟನೆ ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮದಲ್ಲಿ ನಡೆದಿದೆ.. 

ಫೋನ್‌ಗೆ ಬಂತು ತಂಗಿಯ ವಿಡಿಯೋ: ಗುಂಡಿಕ್ಕಿ ಕೊಂದ ಅಣ್ಣ

ಸಿನಿಮಾಕ್ಕೆ ಕರೆದುಕೊಂಡು ಹೋಗೋದಾಗಿ ಹೇಳಿದ ತಂದೆ ರಾತ್ರಿಯವರೆಗೂ ಬಳ್ಳಾರಿಯಲ್ಲಿ ತಿರುಗಾಡಿಸಿ ಮಗಳಿಗೆ ಬೇಕಾದ ಒಡವೆ ( ಉಂಗುರ) ಕೊಡಿಸಿ ನಂತರ ರಾತ್ರಿ ಊರಿಗೆ ಕರೆದುಕೊಂಡು ಹೋಗೋ ವೇಳೆ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಹತ್ತು ದಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಕೊಲೆ ಮಾಡಿದ ಬಗ್ಗೆ ತಂದೆಯೇ ಮಾಹಿತಿ ನೀಡಿದ್ದಾರೆ

ಕುಡುತಿನಿ ಪಟ್ಟಣದ ಓಂಕಾರ ಗೌಡ ಎನ್ನುವ ವ್ಯಕ್ತಿಯೇ ಮಗಳನ್ನು ಕೊಂದು ಹಾಕಿದ ಪಾಪಿ ತಂದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಸೇರಿ ಇಬ್ಬರನ್ನು  ಪೊಲೀಸರು ಬಂದಿಸಿದ್ದಾರೆ. ‌ಓಂಕಾರ್ ಗೌಡ ತೋರಣಗಲ್ ಗ್ರಾಮದ ವೈನ್ ಶಾಪ್ ವೊಂದರಲ್ಲಿ ಮ್ಯಾನೇಜರ್ ಅಗಿ ಮಾಡ್ತಿದ್ದವನು. 

ಓಂಕಾರ ಗೌಡನ ಜೊತೆಗೆ ಕೆಲಸ ಮಾಡ್ತಿದ್ದ ನಾಗರಾಜ್ ಎನ್ನುವ ಯುವಕನ ಜೊತೆಗೆ ಓಂಕಾರ ಗೌಡನ ಮಗಳು ಪ್ರೀತಿ ಮಾಡ್ತಿದ್ದಳಂತೆ. ಈ ವಿಷಯ ಮನೆಯಲ್ಲಿ ಗೊತ್ತಾಗಿ ದೊಡ್ಡ ಜಗಳವೇ ನಡೆದಿದೆ. ಮಗಳನ್ನು ಹೊಡೆದು ಬಡೆದು ಬುದ್ಧಿ‌ ಹೇಳಿದ್ರು‌ ಮಗಳು ಸುಧಾರಿಸಿರಲಿಲ್ಲ..

ಓದದಕ್ಕಿಂತ ಪೋನ್ ಮಾತನಾಡೋದೇ ಹೆಚ್ಚಾಗಿತ್ತು

ಇನ್ನೂ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಅದ್ಯಾಗೋ ನಾಗರಾಜ ನ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು.  ಓದದಕ್ಕಿಂತ ಪೋನ್ ಮಾತನಾಡೋದೇ ಹೆಚ್ಚಾಗಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಮನೆಯಲ್ಲಿ ಗಲಾಟೆಯಾಗಿತ್ತು. ಒಂದು ದಿನ ಶಾಲೆಗೆಂದು ತೆರಳಿದ ಮಗಳು ಮಾರನೇ ದಿನ ಮನೆಗೆ ಬಂದಿದ್ದಳು.  ಇದು ಮಗಳ ಮೇಲೆ ತಂದೆಗೆ ಇರೋ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.  ಹೀಗಾಗಿ ಒಂದೇರಡು ದಿನ ತಣ್ಣಗಿದ್ದು ಮಗಳ ಕೊಲೆಗೆ ತಂದೆಯೇ ಸ್ಕೇಚ್ ಹಾಕಿದ್ದನು.
  
ಸಿನಿಮಾ ನೋಡಲೆಂದು ಕರೆದುಕೊಂಡು ಹೋಗಿ ಕೊಲೆ

ಮನೆಯಲ್ಲಿ ಗಲಾಟೆಯಾದ ವಾರದ ಬಳಿಕ ಕೊಲೆಗೆ ಸ್ಕೆಚ್ ಹಾಕಿದ ಓಂಕಾರ ಗೌಡ ನಿಧಾನವಾಗಿ ಎಲ್ಲಾ ಮರೆತವರಂತೆ ಇದ್ದು ಮಗಳ ಕೊಲೆ ಮಾಡಿದ್ದಾನೆ.‌ ಗಂಧದಗುಡಿ ಸಿನಿಮಾ ನೋಡಲೆಂದು‌ ಕಳೆದ ಹತ್ತು ದಿನಗಳ ಹಿಂದೆ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. (ಅ.31ರಂದು)  ಮಗಳನ್ನು ಬೈಕ್ ಮೇಲೆ ಕರೆದು ಕೊಂಡು ಹೋದಾಗ ಕುರುಗೋಡು ಪಟ್ಟಣದಲ್ಲಿ ಚಿತ್ರಮಂದಿರದಲ್ಲಿ ಸಿನಿಮಾ ಸ್ಟಾರ್ಟ್ ಅಗಿತ್ತು. ಆಗ ಅಲ್ಲಿಂದ ಹೋಟೆಲ್‌ಗೆ ಕರೆದೊ‌ಯ್ದು‌ ಮಗಳಿಗೆ ಬೇಕಾದ ತಿಂಡಿ ತಿನ್ನಿಸಿದ್ದಾರೆ.ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ ಬಳಿಕ ಬಂಗಾರದ ಓಲೆ, ಉಂಗುರವನ್ನು ಮಗಳಿಗೆ ಕೊಡಿಸಿದ್ದಾನೆ. ಅಷ್ಟೊತ್ತಿಗಾಗಲೇ
ರಾತ್ರಿಯಾಗಿದೆ. ವಾಪಸ್ ಕುಡುತಿನಿಗೆ ಬರೋ ದಾರಿಯಲ್ಲಿ  ಕಾಲುವೆ ಬಳಿ ಕರೆದುಕೊಂಡು ಹೋಗಿ ಅಲ್ಲಿ ಆಕೆಯನ್ನು ತಳ್ಳಿದ್ದಾನೆ.

ಕಾಲೂವೆ ಬಳಿ ತಳ್ಳೋವಾಗಲೂ ನಾಟಕ

ಇನ್ನೂ ‌ಮಗಳನ್ನು ಕಾಲುವೆ ಬಳಿ ಕರೆದುಕೊಂಡು ಹೋದ ಬಳಿಕ ಮಗಳನ್ನು ನಿಲ್ಲಿಸಿ, ಒಂದು ನಿಮಿಷ ಬೇರೆ ಕಡೆ ಬರುವುದಾಗಿ ಹೇಳಿ ಹೋಗಿದ್ದಾರೆ. ನಂತರ ಮಗಳು ಅ ಕಡೆ ಈ ಕಡೆ ನೋಡ್ತಿರೋವಾಗ ಹಿಂದಿನಿಂದ ಬಂದು ಕಾಲುವೆಗೆ ತಳ್ಳಿಕೊಲೆ ಮಾಡಿದ್ದಾರೆ. ನಂತರ ತಮ್ಮ ಗೆಳೆಯ ಮನೆ ಹತ್ತಿರ ಬೈಕ್ ನಿಲ್ಲಿಸಿ ತಿರುಪತಿ ಹೋಗಿದ್ದಾರೆ. ಮಗಳ ಬಗ್ಗೆ ತಾಯಿ ಪದ್ಮ ಪ್ರಶ್ನೆ ಮಾಡಿದಾಗ ಮಗಳನ್ನು ಕೊಲೆ ಮಾಡಿರೋದಾಗಿ ಹೇಳಿದ್ದಾನೆ.

ವಿಜಯಪುರ: ಮರ್ಯಾದೆ ಹತ್ಯೆ ಪ್ರಕರಣ, ನಾಲ್ವರ ಬಂಧನ

ಮಗಳು ಕಾಣೆಯಾಗಿರುವ ಬಗ್ಗೆ ಕುಡತಿನಿ ಠಾಣೆಯಲ್ಲಿ ಮೃತಳ ತಾಯಿ ಪದ್ಮ ದೂರು ನೀಡಿದ್ದಾರೆ. ದೂರಿನನ್ವಯ ತಿರುಪತಿಯಿಂದ ಬರೋವಾಗಲೇ‌ ಪೊಲೀಸರು ಓಂಕಾರಪ್ಪನನ್ನು ಕೊಪ್ಪಳದಲ್ಲಿ ಬಂಧಿಸಿದ್ದಾರೆ.  ಇನ್ನೂ ಕೊಲೆಗೂ‌ ಮುನ್ನ‌ ಮಗಳ ಹೆಸರಿನಲ್ಲಿ 20 ಲಕ್ಷ ರೂ.ಗಳನ್ನು ಸ್ನೇಹಿತನ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ..

Follow Us:
Download App:
  • android
  • ios