Asianet Suvarna News Asianet Suvarna News

ಕೌಟುಂಬಿಕ ಕಲಹ: ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ತಂದೆ!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ಮಕ್ಕಳಿಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

Family Feud: father beats children to death with hammer at kalaburagi rav
Author
First Published Jun 23, 2023, 4:51 AM IST | Last Updated Jun 23, 2023, 4:51 AM IST

ಶ್ರೀರಂಗಪಟ್ಟಣ (ಜೂ.22) : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ಮಕ್ಕಳಿಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಪತ್ನಿಗೆ ಚೂರಿಯಿಂದ ಇರಿದು ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಹತ್ಯೆಗೆ ಯತ್ನಿಸಿ ಅದು ಸಾಧ್ಯವಾಗದಿದ್ದಾಗ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣು

ಆದಿತ್ಯ(4), ಅಮೂಲ್ಯ(3) ಕೊಲೆಯಾಗಿರುವ ದುರ್ದೈವಿ ಮಕ್ಕಳಾಗಿದ್ದು, ತಾಯಿ ಲಕ್ಷಿ ್ಮೕ (25) ಗಂಭೀರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶ್ರೀಕಾಂತ್‌ ಎಂಬಾತನೇ ಮಕ್ಕಳನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ.

ಕಲಬುರಗಿ ತಾಲೂಕು ಜೇವರ್ಗಿಯವರಾದ ಅಂಬಿಕಾ ಮತ್ತು ಮೋಹನ್‌ ಎನ್ನುವರು ಮರಳಗಾಲ ಗ್ರಾಮದ ವಿರೂಪಾಕ್ಷ ಎಂಬುವರ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅಂಬಿಕಾ ಮಗಳು ಲಕ್ಷಿ ್ಮೕಯನ್ನು ಏಳು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು, ಮತ್ತೊಂದು ಹೆಣ್ಣು ಮಗುವಿತ್ತು. ಇಬ್ಬರ ದಾಂಪತ್ಯ ಕೆಲವು ವರ್ಷ ಚೆನ್ನಾಗಿತ್ತು. ಆನಂತರ ಸಂಸಾರದಲ್ಲಿ ಜಗಳ ಶುರುವಾಗಿತ್ತು.

ಹಿಂದೊಮ್ಮೆ ಪತಿ ಶ್ರೀಕಾಂತ್‌ ಜೊತೆ ಜಗಳವಾಡಿಕೊಂಡು ತವರಿಗೆ ಬಂದಿದ್ದ ಲಕ್ಷಿ ್ಮೕಯನ್ನು ನ್ಯಾಯ ಪಂಚಾಯ್ತಿ ಮಾಡಿ ಕಳುಹಿಸಿಕೊಡಲಾಗಿತ್ತು. ಆದಾಗ್ಯೂ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಮತ್ತೊಮ್ಮೆ ಪತಿ ಶ್ರೀಕಾಂತ್‌ನೊಡನೆ ಜಗಳ ಮಾಡಿಕೊಂಡು ಲಕ್ಷಿ ್ಮೕ ತನ್ನ ಮಕ್ಕಳೊಂದಿಗೆ ವಾರದ ಹಿಂದೆಯಷ್ಟೇ ತಾಯಿ ಇದ್ದ ಮರಳಗಾಲ ಗ್ರಾಮಕ್ಕೆ ಬಂದಿದ್ದಳು. ಬುಧವಾರ ಹೆಂಡತಿ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದ ಶ್ರೀಕಾಂತ್‌ ಊರಿಗೆ ಬಂದಿದ್ದನು. ರಾತ್ರಿ ಬಾಡೂಟ ಸವಿದು ಪತಿ, ಪತ್ನಿ, ಮಕ್ಕಳು ಮನೆಯ ಒಳಭಾಗದಲ್ಲಿ ಮಲಗಿದ್ದರೆ ಅಂಬಿಕಾ-ಮೋಹನ್‌ ಹೊರಗೆ ಮಲಗಿದ್ದರು.

ಹೆಂಡ್ತಿ, ಮಕ್ಕಳು ಸೇರಿ ಐವರನ್ನು ಕೊಂದಿದ್ದ ಕ್ರೂರಿಗೆ ಗಲ್ಲು ಶಿಕ್ಷೆಕೊಟ್ಟ ನ್ಯಾಯಾಲಯ

ಮಧ್ಯರಾತ್ರಿ ಶ್ರೀಕಾಂತ್‌ ಮೊದಲಿಗೆ ಮಕ್ಕಳ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದು, ನಂತರ ಪತ್ನಿ ಲಕ್ಷಿ ್ಮೕಗೆ ಚೂರಿಯಿಂದ ಇರಿದಿದ್ದಾನೆ. ಗಂಡನಿಗೆ ಪ್ರತಿರೋಧ ತೋರಿದಾಗ ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಶ್ರೀರಂಗಪಟ್ಟಣ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಆಗಮಿಸಿ ಪರಿಶೀಲನೆ ನಡೆಸಿದರು. ತೋಟದ ಮಾಲೀಕರಿಂದ ಮಾಹಿತಿ ಪಡೆದುಕೊಂಡರು.

Latest Videos
Follow Us:
Download App:
  • android
  • ios