ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸದ ವಿವರ ಹಂಚಿಕೊಳ್ಳುವುದು ಕಳ್ಳರಿಗೆ ಆಹ್ವಾನ ನೀಡಿದಂತೆ. ಡಿವೈಎಸ್ಪಿ ರಾಜೇಶ್, "ಗೋವಾದಲ್ಲಿದ್ದೇನೆ" ಎಂದು ಸ್ಟೇಟಸ್ ಹಾಕಿದ ವ್ಯಕ್ತಿ ಮನೆಗೆ ಬಂದಾಗ ಕಳ್ಳತನವಾಗಿತ್ತು ಎಂದು ಉದಾಹರಿಸಿದ್ದಾರೆ. ಪ್ರವಾಸ ಮುಗಿದ ನಂತರ ವಿವರ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸೋಷಿಯಲ್​ ಮೀಡಿಯಾ ಸಾಕಷ್ಟು ಪ್ರಭಾವ ಬೀರುತ್ತಿರುವ ನಡುವೆಯೇ, ಹೆಚ್ಚಿನವರಿಗೆ ತಮ್ಮ ಬದುಕಿನ ಎಲ್ಲಾ ಕ್ಷಣಗಳನ್ನೂ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ವಾಟ್ಸ್​ಆ್ಯಪ್​ ಸೇರಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುವ ಇಲ್ಲವೇ ಸ್ಟೇಟಸ್​ ಹಾಕಿಕೊಳ್ಳುವ ಹುಚ್ಚು. ಅದರಲ್ಲಿಯು ಪ್ರವಾಸಕ್ಕೆ ಹೋಗಿದ್ದರೆ ಅಥವಾ ಹೊರಡುವುದಿದ್ದರೆ ಅದರ ಫುಲ್​ ಡಿಟೇಲ್ಸ್​ ಕೊಟ್ಟು ಸ್ಟೇಟಸ್​ ಹಾಕಿಕೊಂಡು ಬಿಡುತ್ತಾರೆ. ತಾನು ಎಂಜಾಯ್​ ಮಾಡುತ್ತಿರುವುದು ಬೇರೆಯವರಿಗೆ ತಿಳಿಯಲಿ ಎನ್ನುವುದು ಕೆಲವರ ಉದ್ದೇಶವಾಗಿದ್ದರೆ, ಅದನ್ನು ನೋಡಿ ಅವರಿಗೆ ಆಗದವರು ಯಾರೋ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ಎನ್ನುವ ಕಾರಣವೂ ಅದರಲ್ಲಿ ಅಡಗಿರುತ್ತದೆ. ಒಟ್ಟಿನಲ್ಲಿ ಸ್ಟೇಟಸ್​ ನೋಡಿದ್ರೆ ಆ ದಿನ ಆ ವ್ಯಕ್ತಿ ಯಾವ ಮೂಡ್​ನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತದೆ. ಎಷ್ಟೋ ಬಾರಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಕುವ ಸ್ಟೇಟಸ್​ಗಳೇ ಹೆಚ್ಚಾಗಿರುತ್ತವೆ.

ಉದ್ದೇಶ ಏನೇ ಇರಲಿ. ಆದರೆ ಹೀಗೆ ಸೋಷಿಯಲ್​ ಮೀಡಿಯಾದಲ್ಲಿ ಎಷ್ಟೋ ಬಾರಿ ಹಾಕಿಕೊಳ್ಳುವ ಸ್ಟೇಟಸ್​ ನಿಮ್ಮ ಇರೋ ಬರೋ ಎಲ್ಲಾ ಸ್ಟೇಟಸ್​ಗಳನ್ನು ಮಣ್ಣುಪಾಲು ಮಾಡಬಹುದು. ಅರ್ಥಾತ್​, ಈ ಸ್ಟೇಟಸ್​ ಅನ್ನೋದು ಕಳ್ಳರಿಗೆ ನೀವೇ ನಿಮ್ಮ ಮನೆಯ ಬೀಗದ ಕೀಲಿ ಕೊಟ್ಟು ಕಳ್ಳತನ ಮಾಡಲು ಬಾ... ಎಂದು ಆಹ್ವಾನ ನೀಡಿದಂತೆ ಎಂದಿದ್ದಾರೆ. ಪ್ರವಾಸಗಳಿಗೆ ಹೋದ ಸಂದರ್ಭಗಳಲ್ಲಿ I am enjoying ಇಲ್ಲಿ.. ಅಲ್ಲಿ... ಎಂದೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಇವರು ಪ್ರವಾಸಗಳನ್ನು ಎಂಜಾಯ್​ ಮಾಡಲು ಹೋಗಿದ್ದಾರೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್​ಲೋಡ್​ ಮಾಡಿಕೊಳ್ಳಲು ಹೋಗಿದ್ದಾರೋ ಎನ್ನುವುದು ಕನ್​ಫ್ಯೂಸ್​ ಆಗುವ ರೀತಿಯಲ್ಲಿ ಇರುತ್ತದೆ. ನೀವು ಹೀಗೆ ಹಾಕಿಕೊಳ್ಳುವ ಸ್ಟೇಟಸ್ಸು, ಅಪ್​ಲೋಡ್​ ಮಾಡುವ ಫೋಟೋಗಳು, ನೀವು ಎಲ್ಲಿದ್ದೀರಿ ಎಂದು ನೀಡುವ ಮಾಹಿತಿಗಳನ್ನು ನೋಡಿ ನಿಮ್ಮ ಸ್ನೇಹಿತರು ಲೈಕ್​ ಮಾಡಿ ಕಮೆಂಟ್​ ಮಾಡುತ್ತಾರೋ ಬಿಡುತ್ತಾರೋ, ಆದರೆ ಕಳ್ಳರಿಗೆ ಇದು ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದಾರೆ ಡಿವೈಎಸ್​ಪಿ ಎಲ್​.ವೈ ರಾಜೇಶ್​.

ಡಾಕ್ಟರ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ಲು, ವಿಡಿಯೋ ಕಾಲ್​ ಮಾಡಿ ಬಟ್ಟೆ ಬಿಚ್ಚಿದ್ಲು... ಆಮೇಲೆ... ಘಟನೆ ವಿವರಿಸಿದ ಪೊಲೀಸ್

ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, ಹಾಸ್ಟೆಲ್​ ಒಂದರಲ್ಲಿ ತಪ್ಪು ಮಾಡಿ ತಮ್ಮ ಭಯದಿಂದ ಓಡಿಹೋದ ಹುಡುಗ, ಮುಂದೆ ಅಮೆರಿಕದ ಸ್ಟಾರ್​ ಹೋಟೆಲ್​ನಲ್ಲಿ ಶೆಫ್​ ಆಗುವವರೆಗೆ ಹೇಗೆ ಬೆಳೆದ ಎನ್ನುವ ರೋಚಕ ಕಥೆಯನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ನಾವು ಹಾಕುವ ಸ್ಟೇಟಸ್​ನಿಂದ ಹೇಗೆ ಕಳ್ಳರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ.

ಅದಕ್ಕೆ ಉದಾಹರಣೆ ಕೊಟ್ಟ ಡಿವೈಎಸ್​ಪಿ ರಾಜೇಶ್​ ಅವರು, ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಒಬ್ಬಾತ I am Enjoying in Goa ಅಂತ ಸ್ಟೇಟಸ್​ ಹಾಕ್ಕೊಂಡಾ- ವಾಪಸ್​ ಮನೆಗೆ ಬಂದ್​ ನೋಡಿದ್ರೆ ಕಳ್ಳರು ಮನೆಯನ್ನೆಲ್ಲಾ ಕ್ಲೀನ್​ ಮಾಡಿ ಹೋಗಿದ್ರು. ಆಮೇಲೆ ಗೊತ್ತಾಗಿದ್ದು, ಈತನ ಸ್ಟೇಟಸ್​ ನೋಡಿ ಎಷ್ಟು ದಿನ ಆತ ಮನೆಗೆ ಬರುವುದಿಲ್ಲ ಎನ್ನುವುದೆಲ್ಲಾ ಕಳ್ಳರಿಗೆ ತಿಳಿದಿದೆ. ಆದ್ದರಿಂದ ಕರಾಮತ್ತು ತೋರಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಿರೋದನ್ನು ಸೋಷಿಯಲ್​ ಮೀಡಿಯಾದ ಮೂಲಕ ಜಗಜ್ಜಾಹೀರ ಮಾಡಲೇಬೇಕು ಎಂದಾದರೆ ವಾಪಸ್​ ಬಂದ ಮೇಲೆ I enjoyed in Goa ಅಂತ ಹಾಕಿಕೊಳ್ಳಿ, ಆದರೆ ಹೋಗುವಾಗ ನಿಮ್ಮ ಮನೆ ಕೀಲಿಕೈಯನ್ನು ಕಳ್ಳರಿಗೆ ಕೊಟ್ಟು ಹೋಗ್ಬೇಡಿ ಎಂದಿದ್ದಾರೆ. 

ಸೈಬರ್​ ಕ್ರೈಂಗೆ ಬಲಿಯಾಗಬಾರ್ದಾ? ದುಡ್ಡು ಸೇಫ್​ ಆಗಿರ್ಬೇಕಾ? ಹಾಗಿದ್ರೆ ಕನ್ನಡದಲ್ಲಿ ಮಾತನಾಡಿ! ಪೊಲೀಸ್​ ಅಧಿಕಾರಿ ಮಾತು ಕೇಳಿ

YouTube video player