ಕೇವಲ 30 ಸಾವಿರ ರೂ. ಹಣಕ್ಕಾಗಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ಸಾಲಗಾರ!
ಕೇವಲ 30 ಸಾವಿರ ರೂ. ಸಾಲದ ಹಣವನ್ನು ವಾಪಸ್ ಕೊಟ್ಟಿಲ್ಲವೆಂಬ ಕಾರಣಕ್ಕೆ ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ ದುರ್ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ (ಡಿ.25): ಸಾಲ ಕೊಟ್ಟ 30 ಸಾವಿರ ರೂ. ಹಣವನ್ನು ವಾಪಸ್ ಕೊಡದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ದುರ್ಘಟನೆ ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸಾಲ ಕೊಡುವುದು ಹಾಗೂ ವಸೂಲಿ ಮಾಡುವುದು ಸರ್ವೇ ಸಾಮಾನ್ಯ. ಇನ್ನು ಸಾಲ ವಸೂಲಿ ಮಾಡುವ ವೇಳೆ ಬಹುತೇಕರು ದರ್ಪ ತೋರಿಸಿದ ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ಕೆಲವರು ಸಾಲ ಪಡೆದು ತಮಗೇನೂ ಗೊತ್ತೇ ಇಲ್ಲವೆಂಬಂತೆ ತಲೆಮರೆಸಿಕೊಂಡು ಓಡಾಡುವುದನ್ನೂ ನಾವು ನೋಡಿದ್ದೇವೆ. ಧಾರವಾಡದಲ್ಲಿಯೂ 60 ಸಾವಿರ ರೂ. ಸಾಲ ಪಡೆದುಕೊಂಡ ವ್ಯಕ್ತಿ ಕೆಲವೇ ದಿನಗಳಲ್ಲಿ 30 ಸಾವಿರ ರೂ. ಹಣವನ್ನು ವಾಪಸ್ ಕೊಟ್ಟಿದ್ದಾನೆ. ಆದರೆ, ಉಳಿದ 30 ಸಾವಿರ ರೂ. ಹಣವನ್ನು ವಾಪಸ್ ಕೊಡದೇ ವಿಳಂಬ ಮಾಡಿ ಆಟವಾಡಿಸಿದ್ದಾನೆ. ಆಗ ಸಿಟ್ಟಿಗೆದ್ದು ಗಲಾಟೆ ಮಾಡಿದರೂ ಹಣವನ್ನು ವಾಪಸ್ ಕೊಡದಿದ್ದಾಗ ಕೊಲೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾನೆ. ನಂತರ, ಸಾಲ ಪಡೆದ ವ್ಯಕ್ತಿ ಬೈಕ್‌ನಲ್ಲಿ ಹೋಗುವಾಗ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ವಿಜಯಪುರ ಲೈವ್ ಮರ್ಡರ್: ಎಂಗೇಜ್ಮೆಂಟ್ ಆದವಳೊಂದಿಗೆ ಅನೈತಿಕ ಸಂಬಂಧಕ್ಕಾಗಿ ಬಿತ್ತು ಹೆಣ
ಕೊಲೆಯಾದ ವ್ಯಕ್ತಿಯನ್ನು ಸುರೇಶ ದೇವರಹೂರು (42) ಎಂದು ಗುರುತಿಸಲಾಗಿದೆ. ಶಿವಪ್ಪ ಬಡಿಗೇರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕೇವಲ 30 ಸಾವಿರ ರೂ. ಹಣಕ್ಕೆ ಈತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ಬೀಕರ ಕೊಲೆ ನಡೆದಿದೆ. ಶಿವಪ್ಪ ಬಡಿಗೇರ ಹತ್ತಿರ ಸುರೇಶ್ ಅವರು 60,000 ಸಾಲ ಪಡೆದುಕೊಂಡಿದ್ದರು. ಅರ್ಧ ಹಣವನ್ನು ಕೊಟ್ಟು ಬಾಕಿ ಹಣವನ್ನು ಕೊಡದಿದ್ದ ಕಾರಣಕ್ಕೆ ಬೈಕ್ ಮೇಲೆ ಹೋಗುತ್ತಿದ್ದ ಸುರೇಶನಿಗೆ ಶಿವಪ್ಪ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವದ ಮೆಲೆ ಬೈಕ್ ಹಾಕಿ ಇದು ಕೊಲೆಯಲ್ಲ ಬೈಕ್ ಅಪಘಾತ ಎಂದು ಬಿಂಬಿಸಿದ್ದನು. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಕುರಿತು ಗರಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಬಾಲ್ಯದ ಗೆಳತಿ ಮದುವೆಯಾಗಲು ಹುಡುಗನಾಗಿ ಬದಲಾದ: ಆದ್ರೂ ಆಕೆ ಒಪ್ಪದಿದ್ದಾಗ ಕತ್ತು ಸೀಳಿ ಕೊಲೆಗೈದ:
ಚೆನ್ನೈ (ಡಿ.25): ತಮಿಳುನಾಡು ರಾಜಧಾನಿ ಚೆನ್ನೈನ ದಕ್ಷಿಣ ಹೊರವಲಯ ಕೆಲಂಬಕ್ಕಂ ಬಳಿಯ ತಲಂಬೂರ್‌ನಲ್ಲಿ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರನ್ನು ಬಾಲ್ಯದ ಸಹಪಾಠಿಯೊಬ್ಬರು ಆಕೆಯ ಹುಟ್ಟುಹಬ್ಬದ ಮುನ್ನಾದಿನದಂದು ಚೈನ್‌ನಿಂದ ಕಟ್ಟಿ, ಅಕೆಯ ಕೈ, ಕತ್ತು ಸೀಳಿ ಜೀವಂತ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿಯನ್ನು 26 ವರ್ಷ ವಯಸ್ಸಿನ ಆರ್ ನಂದಿನಿ ಎಂದು ತಿಳಿದುಬಂದಿದೆ. ಮದುವೆಯಾಗಲು ಲಿಂಗ ಬದಲಾವಣೆ ಮಾಡಿಕೊಂಡ ಆಕೆಯ ಸಹಪಾಠಿಯೊಬ್ಬರು ಟೆಕ್ಕಿಯನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಪ್ರಕರಣ ಸಂಬಂಧ ನಂದಿನಿಯನ್ನು ಎಂಬಿಎ ಪದವೀಧರ ವೆಟ್ರಿಮಾರನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಲಿಂಗ ಬದಲಾವಣೆಗೆ ಒಳಗಾಗುವ ಮೊದಲು ಇವರ ಹೆಸರು ಪಾಂಡಿ ಮುರುಗೇಶ್ವರಿ.
ಬೆಂಗಳೂರಿನಲ್ಲಿ ಕ್ರಿಸ್‌ಮಸ್ ದಿನವೇ ನಿರ್ಮಾಣ ಹಂತದ ಕಟ್ಟಡ ಕುಸಿತ: ಒಬ್ಬ ಸಾವು, ಇಬ್ಬರ ಸ್ಥಿತಿ ಗಂಭೀರ
ಅವರಿಬ್ಬರೂ ಮಧುರೈನಲ್ಲಿ ಒಂದೇ ಶಾಲೆಯಲ್ಲಿ ಅಂದ್ರೆ ಬಾಲಕಿಯರ ಶಾಲೆಯಲ್ಲಿ ಓದಿದರು ಮತ್ತು ಆತ್ಮೀಯ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಲಿಂಗ ಬದಲಾವಣೆಯ ಬಳಿಕ ನಂದಿನಿ ವೆಟ್ರಿಮಾರನ್ ನ ಪುನರಾವರ್ತಿತ ಮನವೊಲಿಕೆಗಳ ಹೊರತಾಗಿಯೂ ಅವರ ಪ್ರಪೋಸಲ್ ಅನ್ನು ತಿರಸ್ಕರಿಸಿದರು. ಇದರಿಂದ ಅವರ ಫ್ರೆಂಡ್‌ಶಿಪ್ ಮೊದಲಿನಷ್ಟು ಇರಲಿಲ್ಲ. ಆದರೂ ಇಷ್ಟೆಲ್ಲ ಆದ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಇನ್ನು, 8 ತಿಂಗಳ ಹಿಂದೆ ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವಿ ಮುಗಿಸಿ ಚೆನ್ನೈನಲ್ಲಿ ಕೆಲಸ ಗಿಟ್ಟಿಸಿಕೊಂಡ ನಂದಿನಿ ಚಿಕ್ಕಪ್ಪನ ಜತೆ ನಗರದಲ್ಲಿ ನೆಲೆಸಿದ್ದರು. ನಂದಿನಿಯ ಜನ್ಮದಿನದ ನಿಮಿತ್ತ ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಪೆಟ್ರೋಲ್ ಬಾಟಲಿ ಸುರಿದು ಬೆಂಕಿ ಹಚ್ಚುವ ಮೊದಲು ಬ್ಲೇಡ್‌ನಿಂದ ಆಕೆಯ ಕುತ್ತಿಗೆ ಮತ್ತು ಕೈಗಳನ್ನು ಸೀಳಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.