Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಮಾಡಿದ್ದಲ್ಲದೇ ಮೈಮೇಲಿದ್ದ ಒಡೆವೆಗಳ ಕಳ್ಳತನ ಮಾಡಿದ್ದ ದರ್ಶನ್ ಗ್ಯಾಂಗ್

ಚಿತ್ರದುರ್ಗದ ರೇಣುಕಾಸ್ಬಾಮಿಯನ್ನು ಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್‌ನ ಆರೋಪಿ ರಾಘವೇಂದ್ರ, ರೇಣುಕಾಸ್ವಾಮಿ ದೇಹದ ಮೇಲಿದ್ದ ಉಂಗುರ ಮತ್ತು ಚಿನ್ನದ ಸರ ಕದ್ದು ವಿಕೃತಿ ಮೆರೆದಿದ್ದಾರೆ.

Darshan gang who not only killed Renuka swamy but also stole wearing gold jewellery sat
Author
First Published Jun 17, 2024, 3:17 PM IST

ಬೆಂಗಳೂರು (ಜೂ.17): ಚಿತ್ರದುರ್ಗದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಕಟ್ಟದಾಗಿ ಒಂದು ಕಾಮೆಂಟ್ ಮಾಡಿದ್ದಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಭೀಕರವಾಗಿ ಕೊಲೆಯಾಗಿ ಬೀದಿ ಹೆಣವಾಗಿ ಬಿದ್ದಿದ್ದನು. ಆದರೆ, ರೇಣುಕಾಸ್ವಾಮಿ ಕೊಲೆ ಮಾಡಿದ ದರ್ಶನ್ ಗ್ಯಾಂಗ್‌ನ ಸಹಚರ ರಾಘವೇಂದ್ರ, ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನದ ಉಂಗುರರ ಮತ್ತು ಸರವನ್ನು ಕದ್ದು ಮನೆಯಲ್ಲಿಟ್ಟಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್‌ನ ಎ4 ಆರೋಪಿ ರಾಘವೇಂದ್ರನ ಮನೆಯಲ್ಲಿ ಕೊಲೆಯಾದ ರೇಣುಕಾಸ್ವಾಮಿ ಮನೆಯಿಂದ ಧರಿಸಿಕೊಂಡು ಬಂದಿದ್ದ ಚಿನ್ನದ ಉಂಗುರ ಮತ್ತು ಸರವನ್ನು ಕದ್ದು ಮನೆಯಲ್ಲಿಟ್ಟು ಬಂದಿದ್ದನು. ಆತನನ್ನು ಭೀಕರವಾಗಿ ಕೊಲೆ ಮಾಡಿದ್ದೂ ಅಲ್ಲದೇ ಆತನ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದರು. ಜೊತೆಗೆ, ರೇಣುಕಾಸ್ವಾಮಿ ಧರಿಸಿದ್ದ ಬಟ್ಟೆಯನ್ನೂ ಬಿಚ್ಚಿ ಬೇರೊಂದು ಟೀಷರ್ಟ್ ಹಾಕಿ ಮೃತದೇಹವನ್ನು ಸುಮನಹಳ್ಳಿ ಮೇಲ್ಸೇತುವೆ ಬಳಿಯ ಚರಂಡಿಗೆ ಬೀಸಾಡಿದ್ದರು.

ನಟ ದರ್ಶನ್ ನಾಯಿ ರೇಂಜಿಗಿಳಿದು ಕೊಲೆ ಮಾಡಬಾರದಿತ್ತು: ರಾಮ್ ಗೋಪಾಲ್ ವರ್ಮಾ

ಒಡವೆಗಳ ಕಳ್ಳತನ ಮಾಡಿದ್ದ ರಾಘವೇಂದ್ರ: ಭೀಗರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಉಂಗುರ, ಚಿನ್ನದ ಸರ ದರ್ಶನ್ ಗ್ಯಾಂಗ್‌ನ ಆರೋಪಿ ರಾಘವೇಂದ್ರ ಮನೆಯಲ್ಲಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿ ರಾಘವೇಂದ್ರ ತನ್ನ ಪತ್ನಿಗೆ ರೇಣುಕಾಸ್ವಾಮಿ ಮೈಮೇಲಿಂದ ಕದ್ದುಕೊಂಡು ಬಂದು ಕೊಟ್ಟಿದ್ದ ಜುವೆಲ್ಲರಿಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ನಿನ್ನೆ ಮಹಜರು ಸಮಯದಲ್ಲಿ 4.5 ಲಕ್ಷ ಕ್ಯಾಷ್, ಒಡವೆಗಳು ಹಾಗೂ ಬಟ್ಟೆಗಳ ಸೀಜ್ ಮಾಡಲಾಗಿದೆ.

ಹಲ್ಲೆಗೂ ಮೊದಲು ಉಂಗುರ ಸರ ಬಿಚ್ಚಿಟ್ಟುಕೊಂಡಿದ್ದ ರೇಣುಕಾಸ್ವಾಮಿ: ರೇಣುಕಾಸ್ವಾಮಿ ಶೆಡ್ ಒಳಗೆ ಹೋಗುವ ಮುನ್ನ ಕಾರಿನಲ್ಲಿ ಒಡೆವೆ ಬಿಚ್ಚಿಟ್ಟುಕೊಂಡಿದ್ದನು. ತನ್ನ ಮೇಲೆ ಹಲ್ಲೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ರೇಣುಕಾಸ್ವಾಮಿ, ಹಲ್ಲೆ ವೇಳೆ ಒಡೆವಗಳನ್ನ ಕಿತ್ತುಕೊಳ್ಳಬಹುದು ಎಂದು ಊಹೆ ಮಾಡಿದ್ದನು. ಹೀಗಾಗಿ ಶೆಡ್ ಒಳಗೆ ಹೋಗುವ ಮುನ್ನ ಉಂಗುರ ಹಾಗೂ ಚೈನ್ ಬಿಚ್ಚಿಟ್ಟುಕೊಂಡಿದ್ದನು. ಇದನ್ನು ಗಮನಿಸಿದ್ದ ರಾಘವೇಂದ್ರ ರೇಣುಕಾಸ್ವಾಮಿ ಕೊಲೆ ನಂತರ ಅವುಗಳನ್ನು ಕದ್ದುಕೊಂಡು ಕಾರಿನಲ್ಲಿ ಪುನಃ ಚಿತ್ರದುರ್ಗಕ್ಕೆ ತೆರಳಿದ್ದನು. ಅಲ್ಲಿ ತನ್ನ ಪತ್ನಿಗೆ ಒಡವೆಗಳನ್ನು ನೀಡಿ ಏನೂ ಆಗಿಲ್ಲವೆಂಬಂತೆ ಸುಮ್ಮನಿದ್ದನು. 

ದರ್ಶನ್ ಬಂಧನ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಚಿಕ್ಕಣ್ಣನಿಗೆ ನೋಟಿಸ್: ಹಾಸ್ಯ ನಟನಿಗೆ ಢವ ಢವ ಶುರು!

ಯಾರು ಈ ರಾಘವೇಂದ್ರ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ4 ಆರೋಪಿ ರಾಘವೇಂದ್ರ (43) ಆಗಿದ್ದಾನೆ. ಈತ ಚಿತ್ರದುರ್ಗದ ಕೊಳಿ ಬುರುಜಿನ ಹಟ್ಟಿ ನಿವಾಸಿ. ವೃತ್ತಿಯಲ್ಲಿ ಆಟೋ ಚಾಲಕ. ನಟ ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ಆತ, ದರ್ಶನ್‌ ಪರಿಚಿತರ ವಲಯದಲ್ಲಿಯೂ ಗುರುತಿಸಿಕೊಂಡಿದ್ದನು. ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷನೂ ಆಗಿದ್ದ, ದರ್ಶನ್ ಸಿನಿಮಾಗಳು ಬಿಡುಗಡೆಯಾದಾಗ ಕಟೌಟ್ ಕಟ್ಟಿಸುವುದು, ಹಾಲೆರೆಯುವುದು ಮುಂತಾದ ಕೆಲಸ ಮಾಡಿಕೊಂಡಿದ್ದನು. ಆಟೋ ಓಡಿಸಿ ದುಡಿದು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಾಘವೇಂದ್ರ ಸಾಕುತ್ತಿದ್ದ. ದರ್ಶನ್ ಹುಚ್ಚು ಹಚ್ಚಿಕೊಂಡಿರುವವರು ಈತನ ಬಳಿ ಬಂದು ನಟನ ಪರಿಚಯ ಮಾಡಿಸಿಕೊಡು ಎಂದು ದುಂಬಾಲು ಬಿದ್ದರೆ ಅವರಿಂದ ಒಂದಿಷ್ಟು ಖರ್ಚಿಗೆ ದುಡ್ಡು ತೆಗೆದುಕೊಳ್ಳುತ್ತಿದ್ದನು. ಹಾಗಂತ ಮೋಸ ಮಾಡುತ್ತಿರಲಿಲ್ಲ. ಎಲ್ಲಿ ದರ್ಶನ್ ಶೂಟಿಂಗ್ ಇರುತ್ತೋ ಅಲ್ಲಿಗೆ ಅಭಿಮಾನಿಗಳನ್ನು ಕರೆದೊಯ್ದು ಪರಿಚಯಿಸಿ ಫೋಟೋ ಕ್ಲಿಕ್ಕಿಸಿಕೊಂಡು ವಾಪಸಾಗುತ್ತಾನೆ.

ದರ್ಶನ್ ಹುಟ್ಟು ಹಬ್ಬ ಬಂದಾಗಲೆಲ್ಲ ಬೆಂಗಳೂರಿಗೆ ಒಂದಿಷ್ಟು ಮಂದಿ ಕರೆದೊಯ್ದು ಸಂಭ್ರಮಿಸಿದ ಉದಾಹರಣೆಗಳಿವೆ. ಇದರಾಚೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಈತನ ಹೆಸರಿಲ್ಲ. ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿಕೊಂಡು ಬಂದು ದರ್ಶನ್‌ಗೆ ಒಪ್ಪಿಸಿದ್ದ ಆರೋಪ ಆತನ ಮೇಲೆ ಬಂದಿದೆ. ಅಲ್ಲದೆ, ಈ ಕೃತ್ಯದಲ್ಲಿ ದರ್ಶನ್ ಅವರನ್ನು ಉಳಿಸಲು ಪೊಲೀಸರಿಗೆ ರಾಘವೇಂದ್ರ ಶರಣಾಗಿದ್ದ. ಇದಕ್ಕಾಗಿ ಆತನಿಗೆ ಹಣ ಕೊಡುವುದಾಗಿ ದರ್ಶನ್‌ ಹಾಗೂ ಅವರ ಆಪ್ತರು ಭರವಸೆ ಕೊಟ್ಟಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Latest Videos
Follow Us:
Download App:
  • android
  • ios