Asianet Suvarna News Asianet Suvarna News

Kodagu: ಮೇವಿಗೆ ಹೋದ ಜಾನುವಾರಗಳಿಗೆ ಗುಂಡಿಕ್ಕಿ ಹತ್ಯೆ

ತೋಟದೊಳಗೆ ಹಸುಗಳು ಬಂದಿವೆ ಎಂಬ ಕಾರಣಕ್ಕೆ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಗುಹ್ಯ ಗ್ರಾಮದ ಮಣಿ ಎಂಬುವವರ ಎರಡು ಹಸುಗಳನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ.

Cow shot dead in Kodagu gow
Author
First Published Dec 6, 2022, 8:54 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಕೊಡಗು (ಡಿ.6): ಗೋವು ಅಂದರೆ ಅದಕ್ಕೆ ಪೂಜ್ಯನೀಯ ಸ್ಥಾನವಿದೆ. ಪೂಜ್ಯನೀಯ ಗೌರವದಿಂದ ಕಾಣದಿರುವವರಿಗೆ ಕಾನೂನಿನ ಮೂಲಕ ಬುದ್ಧಿ ಹೇಳಲು ಅವಕಾಶವಿದೆ. ಆದರೆ ಇಲ್ಲಿ ಪೂಜ್ಯನೀಯ ಮನೋಭಾವ, ಕಾನೂನಿನ ಭಯ ಯಾವುದೂ ಇಲ್ಲದೆ, ಕೇವಲ ತೋಟದೊಳಗೆ ಹಸುಗಳು ಬಂದಿವೆ ಎಂಬ ಕಾರಣಕ್ಕೆ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಗುಹ್ಯ ಗ್ರಾಮದ ಮಣಿ ಎಂಬುವವರ ಎರಡು ಹಸುಗಳನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಅದೇ ಗ್ರಾಮದ ನರೇಂದ್ರ ಅವರ ತೋಟದಲ್ಲಿ ಹಸುಗಳು ಮೃತಪಟ್ಟಿದ್ದು ಅವರೇ ಶೂಟ್ ಮಾಡಿ ಹತ್ಯೆ ಮಾಡಿರಬಹುದು ಎಂದು ಆರೋಪಿಸಿ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಣಿ ಅವರು ಹಸುಗಳನ್ನು ಮೇಯಲು ಬಿಟ್ಟಿದ್ದರು.  ಅವುಗಳು ಮೇಯುತ್ತಾ ನರೇಂದ್ರ ಅವರ ತೋಟಕ್ಕೆ ಹೋಗಿದ್ದವು ಎನ್ನಲಾಗಿದೆ. ಈ ವೇಳೆ ತೋಟದ ಮಾಲೀಕ ತಮ್ಮ ತೋಟಕ್ಕೆ ಹಸುಗಳು ನುಗ್ಗಿವೆ ಎಂದು ಸಿಟ್ಟಿಗೆದ್ದು ಕೋವಿಯಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಹಸುಗಳ ಮಾಲೀಕ ಮಣಿ ಆರೋಪಿಸಿದ್ದಾರೆ. 

ಮೇಯಲು ಬಿಟ್ಟಿದ್ದ ಹಸುಗಳು ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಆದರೆ ಕೋವಿಯಿಂದ ಶೂಟ್ ಮಾಡಿ ತೀವ್ರಗೊಂಡಿದ್ದ ಹಸು ಮನೆಗೆ ಬಂದಾಗ ಮಣಿ ಅವರು ನೋಡಿ ಗಾಬರಿಗೊಂಡಿದ್ದಾರೆ. ಆದರೆ ಇನ್ನು ಎರಡು ಹಸುಗಳು ಬಾರದಿದ್ದರಿಂದ ಹುಡುಕಿಕೊಂಡು ಹೋದ ಮಣಿ ಅವರಿಗೆ ಹಸುಗಳು ನರೇಂದ್ರ ಅವರ ತೋಟದಲ್ಲಿ ಸತ್ತು ಬಿದ್ದಿರುವುದು ಗೊತ್ತಾಗಿದೆ. ಹಲವು ವರ್ಷಗಳಿಂದ ನಾಲ್ಕಾರು ಹಸುಗಳನ್ನು ಸಾಕಿಕೊಂಡು ಅವುಗಳ ಹಾಲನ್ನು ಮಾರಿ ಜೀವನ ನಡೆಸುತ್ತಿದ್ದರು. ಇದೀಗ ಹಸುಗಳ ಸಾವಿನಿಂದ ಮಣಿ ಅವರ ಕುಟುಂಬ ಕಂಗಾಲಾಗಿದೆ.

625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

ಕೊಟ್ಟಿಗೆಯಲ್ಲಿ ಬೆಂಕಿ ಅವಘಡ; ಅಪಾರ ಮೌಲ್ಯದ ಹಾನಿ:
ಸಾಗರ: ಪಟ್ಟಣದ ಜೋಗ ರಸ್ತೆಯಲ್ಲಿರುವ ಮೋಹನ್‌ ಟೈ​ರ್‍ಸ್ ಮಾಲೀಕರಾದ ಆರ್‌.ಜಿ. ಬಾಪಟ್‌ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಸೋಮವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರು. ನಷ್ಟಸಂಭವಿಸಿದೆ. ಅಗ್ನಿಶಾಮಕದಳದ ಸಮಯಪ್ರಜ್ಞೆಯಿಂದಾಗಿ ಜಾನುವಾರು ಜೀವಹಾನಿ ಸಂಭವಿಸಿಲ್ಲ.

Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ

ಗೋಶಾಲೆ ರೀತಿಯಲ್ಲಿದ್ದ ಕೊಟ್ಟಿಗೆಯಲ್ಲಿ 18 ಹಸು, 4 ಎಮ್ಮೆ, ಒಂದಷ್ಟುಕರು ಇದ್ದವು ಎನ್ನಲಾಗಿದೆ. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ಕೊಟ್ಟಿಗೆ ಆವರಿಸಿತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ, ನಂದನಕುಮಾರ್‌ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಜಾನುವಾರು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಆದರೆ ಅಪಾರ ಪ್ರಮಾಣದ ಹುಲ್ಲು, ಜಾನುವಾರು ತಿಂಡಿ ಮತ್ತಿತರ ವಸ್ತಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು ಎರಡು ಲಕ್ಷ ರು.ಗೂ ಹೆಚ್ಚಿನ ನಷ್ಟಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ದಟ್ಟಹೊಗೆ ಆವರಿಸಿತ್ತು ಎನ್ನಲಾಗಿದೆ. ಶಾಸಕ ಎಚ್‌. ಹಾಲಪ್ಪ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಕ್ಷದ ಮುಖಂಡರು ಹಾಜರಿದ್ದರು.

Follow Us:
Download App:
  • android
  • ios