ಹೆಣ್ಮಕ್ಕಳ ಒಳ ಉಡುಪಿನಲ್ಲಿ ವಿಕೃತ ಮೋಜು... ಉಮೇಶ್ ರೆಡ್ಡಿಗೆ ಗಲ್ಲು ಫಿಕ್ಸ್!

* ಸೈಕೋ ಕಿಲ್ಲರ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ
* ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್
* ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಉಮೇಶ್ ರೆಡ್ಡಿ
*ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಸಮಯಾವಕಾಶ

First Published Sep 30, 2021, 5:30 PM IST | Last Updated Sep 30, 2021, 5:32 PM IST

ಬೆಂಗಳೂರು(ಸೆ. 29)  ಅದೊಂದು ಕಾಲ, ಆತನ ಹೆಸರು ಕೇಳಿದ್ದರೆ ಹೆಣ್ಣು ಕುಲವೇ ಭಯಕ್ಕೆ ಬೀಳುತ್ತಿತ್ತು. ಕೊನೆಗೂ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶೀಕ್ಷೆ ಕಾಯಂ ಆಗಿದೆ. ಉಮೇಶ್ ರೆಡ್ಡಿ ಎಂಬ ಕೀಚಕನಿಗೆ ಮರಣದಂಡನೆ ಫಿಕ್ಸ್ ಆಗಿದೆ. 

ಹೆಣ್ಮಕ್ಕಳ ಕನ್ಯತ್ವ ಪರೀಕ್ಷಿಸುವ Two Finger Test: ಏನಿದು? ಭಾರತದಲ್ಲೇಕೆ ನಿಷೇಧ?

ವಿಕೃತಕಾಮಿ ಉಮೇಶ್ ರೆಡ್ಡಿಗೆ(umesh reddy) ಗಲ್ಲು(Death Sentence) ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಕಾಯಂಗೊಳಿಸಿದೆ.   ಕೆಳಗಿನ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಉಮೇಶ್ ರೆಡ್ಡಿ ಪರ ವಕೀಲರಿಂದ ಅರ್ಜಿ ಸಲ್ಲಿಕೆಯಾಗಿತ್ತು.  ರಾಷ್ಟ್ರಪತಿಗೂ ಕ್ಷಮಾದಾನಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು.

 ಕ್ಷಮಾದಾನದ ಅರ್ಜಿ ವಿಳಂಬವಾಗಿದ್ದು ಜೀವಾವಧಿ ಶಿಕ್ಷೆ ನೀಡಿ ಎಂದು ರೆಡ್ಡಿ ಮನವಿ ಮಾಡಿಕೊಂಡಿದ್ದ.  ಕಳೆದ ಹತ್ತು ವರ್ಷಗಳಿಂದ ನನ್ನನ್ನು ಒಂಟಿಯಾಗಿ ಸೆರೆಯಲ್ಲಿ ಇಡಲಾಗಿದೆ ಎಂದು ಹೇಳಿದ್ದ.