ಸಿಎಂ ನಿವಾಸ ಪಕ್ಕದಲ್ಲೇ ಖ್ಯಾತ ಉದ್ಯಮಿಯ ಹತ್ಯೆ, ಹಾಡಹಗಲೇ ನಡೆದ ಭೀಕರ ದೃಶ್ಯ ವೈರಲ್!
ಖ್ಯಾತ ಉದ್ಯಮಿಯನ್ನು ಚೇಸ್ ಮಾಡಿಕೊಂಡು ಬಂದ ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾರೆ. ಸಾರ್ವಜನಿಕರು, ವಾಹನಗಳು ಒಡಾಡುವ ರಸ್ತೆಯಲ್ಲೇ ಈ ಘಟನೆ ನಡೆದಿದೆ. ಇಷ್ಟೇ ಅಲ್ಲ ಈ ಘಟನೆ ನಡೆದ ಸ್ಥಳದಿಂದ ಸಿಎಂ ನಿವಾಸಕ್ಕೆ ಕೇವಲ 5 ಕಿಲೋಮೀಟರ್ ಮಾತ್ರ.
ಜೈಪುರ(ನ.11): ಆಸ್ತಿ ವ್ಯವಹಾರದ ಮೂಲಕ ಜನಪ್ರಿಗೊಂಡಿದ್ದ ಖ್ಯಾತ ಉದ್ಯಮಿಯನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಲಾಗಿದೆ. ಜೈಪುರದ ಕರ್ನಿ ವಿಹಾರ್ ವಲಯದಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ವಿಜಯೇಂದ್ರ ಸಿಂಗ್ ಗುಲಾಬ್ ಅಲಿಯಾಸ್ ವಿಜು ಬನ್ನರನ್ನು ಹಿಂಬಾಲಿಸಿಕೊಂಡು ಮೂರು ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಕರ್ನಿ ವಿಹಾರ್ ವಲಯದಲ್ಲಿ ಕಬ್ಬಿಣಡ ರಾಡ್, ಖಡ್ಗದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಈ ರಸ್ತೆಯಲ್ಲಿ ಇತರ ವಾಹನಗಳು, ಪಾದಾಚಾರಿಗಳು ಸಂಚರಿಸುತ್ತಿರುವಾಗಲೇ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ದಾಳಿಗೆ ವಿಜು ಬನ್ನ ನೆಲಕ್ಕೆ ಉರುಳಿದ್ದಾರೆ. ನೆಲಕ್ಕೆ ಬಿದ್ದ ವಿಜು ಬನ್ನ ಮೇಲೆ ಮತ್ತೆ ದಾಳಿ ಮಾಡಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ನಡುವೆ ಬಿದ್ದಿದ್ದ ಉದ್ಯಮಿಯನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಕರ್ನಿ ವಿಹಾರ್ ವಲಯದಲ್ಲಿ ದುರ್ಷರ್ಮಿಗಳು ಉದ್ಯಮಿ ವಿಜು ಬನ್ನಾರನ್ನು ಅಡ್ಡಗಟ್ಟಿ ದಾಳಿ ಮಾಡಿದ್ದಾರೆ. ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳನ್ನು ಎದುರಿಸಲು ವಿಜು ಬನ್ನಾಗೆ ಸಾಧ್ಯವಾಗಿಲಿಲ್ಲ. ಈ ಘಟನೆ ನಡೆದ 5 ಕಿಲೋಮೀಟರ್ ದೂರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸವಿದೆ. ರಾಜ್ಯದ ಮುಖ್ಯಮಂತ್ರಿ ನಿವಾಸದ ಪಕ್ಕದ ರಸ್ತೆಯಲ್ಲೇ ಹಾಡಹಗಲೇ ಹತ್ಯೆ ನಡೆಯುತ್ತಿದ್ದರೆ, ರಾಜ್ಯದ ಮೂಲೆ ಮೂಲೆಯಲ್ಲಿ ಜನಸಾಮಾನ್ಯರ ಕತೆ ಏನು? ಎಂದು ಆತಂಕ ಶುರುವಾಗಿದೆ.
ವಾಕಿಂಗ್ ಮಾಡ್ತಿದ್ದ ಗುಪ್ತಚರ ನಿವೃತ್ತ ಅಧಿಕಾರಿಗೆ ಕಾರು ಡಿಕ್ಕಿ; ಸಿಸಿಟಿವಿ ನೋಡಿ ಬೆಚ್ಚಿ ಬಿದ್ದ ಪೊಲೀಸರು!
ಹತ್ಯೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಿಧು ಹಂತಕನಿಂದ ಡೇರಾ ಸಚ್ಚಾ ಸೌದಾ ಅನುಯಾಯಿ ಹತ್ಯೆ
ಡೇರಾ ಸಚ್ಚಾ ಸೌದಾದ ಅನುಯಾಯಿಯಾಗಿದ್ದ ಪ್ರದೀಪ್ ಸಿಂಗ್ ಎನ್ನುವ ವ್ಯಕ್ತಿಯನ್ನು ಐವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಪಂಜಾಬಿನ ಫರೀದ್‌ಕೋಟ್ ಜಿಲ್ಲೆಯಲ್ಲಿ ನಡೆದಿದೆ. ಮೇ ತಿಂಗಳಲ್ಲಿ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆಗೈದ ಗ್ಯಾಂಗಸ್ಟರ್ ಗೋಲ್ಡಿ ಬ್ರಾರ್ ಸಾಮಾಜಿಕ ಜಾಲತಾಣದಲ್ಲಿ ಈ ಹತ್ಯೆ ಹಿಂದೆ ತನ್ನ ಕೈವಾಡವಿದೆ ಎಂದು ಘೋಷಿಸಿದ್ದಾನೆ. ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳು 2015ರಲ್ಲಿ ದೇವನಿಂದನೆ ಪ್ರಕರಣದ ಆರೋಪಿಯೂ ಆಗಿದ್ದ ಪ್ರದೀಪ್ ಸಿಂಗ್‌ನ ಅಂಗಡಿಯೊಳಗೆ ನುಗ್ಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ.
Girl Friend ಒಪ್ಪಲಿಲ್ಲ ಅಂತ ಆಕೆಯನ್ನು 3ನೇ ಮಹಡಿಯಿಂದ ಎಸೆದು ಡೆಡ್‌ಬಾಡಿ ಜತೆ ಎಸ್ಕೇಪ್ ಆದ ಭಗ್ನಪ್ರೇಮಿ..!
2015ರ ಜೂನ್‌ನಲ್ಲಿ ಬುಜ್‌ರ್ ಜವಾಹರ್ ಸಿಂಗ್‌ವಾಲಾ ಗ್ರಾಮದಲ್ಲಿದ್ದ ಸಿಖ್ಖರ ಧಾರ್ಮಿಕ ಗ್ರಂಥವಾಗಿರುವ ‘ಗುರು ಗ್ರಂಥಸಾಹಿಬ್’ ಅನ್ನು ಕಳುವು ಮಾಡಿದ ಮತ್ತು ಅದೇ ವರ್ಷ ಅಕ್ಟೋಬರ್‌ನಲ್ಲಿ ಫರೀದ್ ಕೋಟ್‌ನಲ್ಲಿ ಸಿಖ್ಖರ್ ಪವಿತ್ರ ಗ್ರಂಥವನ್ನು ಹರಿದುಹಾಕಿದ ಪ್ರಕರಣದಲ್ಲಿ ಪ್ರದೀಪ್ ಸಿಂಗ್ ಪ್ರಮುಖ ಆರೋಪಿಯಾಗಿದ್ದ. ಸದ್ಯದ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಇದರ ಬೆನ್ನಲ್ಲೇ ಭೀಕರವಾಗಿ ಪ್ರದೀಪ್ ಸಿಂಗ್‌ನನ್ನು ಹತ್ಯೆ ಮಾಡಲಾಗಿದೆ.