ಬೆಂಗಳೂರು[ಫೆ. 03]  ನಿತ್ಯಾನಂದಸ್ವಾಮಿ ಜಾಮೀನು ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.  ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್  ಆದೇಶ ಕಾಯ್ದಿರಿಸಿದೆ.

ಫೆಬ್ರವರಿ 05ಕ್ಕೆ ಆದೇಶ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ನಿತ್ಯಾನಂದನ ಜಾಮೀನು ರದ್ದು ಕೋರಿ ಲೆನಿನ್ ಅರ್ಜಿ ಸಲ್ಲಿಸಿದ್ದರು. ನ್ಯಾ.ಮೈಕಲ್ ಡಿ ಕುನ್ಹಾ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಿತ್ಯಾನಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ.

ನಿತ್ಯಾ ಆಶ್ರಮದಿಂದ ಕಾಣೆಯಾದ ಯುವತಿರು ಎಲ್ಲಿಗೆ ಹೋದ್ರೂ? ಪೊಲೀಸರ ಕೊಟ್ಟ ಶಾಕಿಂಗ್ ಮಾಹಿತಿ

ನಿತ್ಯಾನಂದ ನಿಗೆ ನೋಟಿಸ್ ನೀಡುವಂತೆ ಕಳೆದ ವಿಚಾರಣೆ ವೇಳೆ‌ ಹೖಕೋರ್ಟ್ ಸೂಚನೆ ನೀಡಿತ್ತು. ಅದರಂತೆ  ನಿತ್ಯಾನಂದನ ಆಶ್ರಮಕ್ಕೆ ನೋಟಿಸ್ ನೀಡಿರುವುದಾಗಿ ಪೊಲೀಸರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಈಕ್ವೆಡಾರ್ ಬಳಿ ತನ್ನದೇ ಹೆಸರಿನಲ್ಲಿ ಕೈಲಾಸ ಎಂಬ ದೇಶ ನಿರ್ಮಾಣ ಮಾಡಿಕೊಂಡಿದ್ದೇನೆ ಎಂದು ನಿತ್ಯಾನಂದ ಹೇಳಿದ್ದ.  ಅಲ್ಲಿಯೇ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಯಾಗಿತ್ತು. ಒಟ್ಟಿನಲ್ಲಿ ನಿತ್ಯಾನಂದ ಭಾರತದಲ್ಲೆಂತೂ ಇಲ್ಲ. ಆದರೆ ಆತನಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆ ನಡೆಯುತ್ತಲೆ ಇವೆ.