Asianet Suvarna News Asianet Suvarna News

ಮಚ್ಚಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಭೀಮ್ ಅರ್ಮಿ ಅಧ್ಯಕ್ಷ!

ಭೀಮ ಅರ್ಮಿ ತಾಲೂಕು ಅಧ್ಯಕ್ಷನೋರ್ವ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಚ್ಚಿನಿಂದ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಕೆಂಗಣ್ಣಿಗೆ ಗುರಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

Bhim Army kushtagi president celebrated his birthday by cutting a cake with a machete rav
Author
First Published Aug 7, 2024, 12:01 AM IST | Last Updated Aug 7, 2024, 12:17 AM IST

ಕೊಪ್ಪಳ (ಆ.6): ಭೀಮ ಅರ್ಮಿ ತಾಲೂಕು ಅಧ್ಯಕ್ಷನೋರ್ವ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಚ್ಚಿನಿಂದ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಕೆಂಗಣ್ಣಿಗೆ ಗುರಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

ಅಡಿವೇಶ ಅಜಾಳದರ್, ಮಚ್ಚಿನಿಂದ ಕೇಕ್ ಕತ್ತರಿಸಿದ ಆಸಾಮಿ. ಭೀಮ್ ಅರ್ಮಿ ಕುಷ್ಟಗಿ ತಾಲೂಕು ಅಧ್ಯಕ್ಷನಾಗಿರುವ ಅಡಿವೇಶ. ಹುಟ್ಟು ಹಬ್ಬ ಹಿನ್ನೆಲೆ ಇಂದು ಸ್ನೇಹಿತರೊಂದಿಗೆ ಕೇಕ್ ತಂದು ಹುಟ್ಟುಹಬ್ಬ ಆಚರಿಸಲಾಗಿತ್ತು ಕೇಕ್ ಕತ್ತರಿಸುವ ವೇಳೆ ಮಚ್ಚಿನಿಂದ ಕೇಕ್ ಕತ್ತರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು, ನೆಟ್ಟಿಗರು ಕಿಡಿಕಾರಿದ್ದಾರೆ.

ಪಿಎಸ್‌ಐ ಪರಶುರಾಮ ಸಾವು ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಪಬ್ಲಿಕ್ ಆಗಿ ಮಚ್ಚಿನಿಂದ ಕೇಕ್ ಕತ್ತರಿಸಿದರು ಕುಷ್ಟಗಿ ಪೊಲೀಸರು ಕಂಡು ಕಾಣದಂತಿದ್ದಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಚ್ಚಿನಿಂದ ಕೇಕ್ ಕತ್ತರಿಸಿದ ಅಡಿವೇಶ್ ಅಜಾಳದರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

Latest Videos
Follow Us:
Download App:
  • android
  • ios