Asianet Suvarna News Asianet Suvarna News

ಹರಪನಹಳ್ಳಿ RTI ಕಾರ್ಯಕರ್ತ ಶ್ರೀಧರ್ ಹತ್ಯೆ ಪ್ರಕರಣ: ಮತ್ತೆ ಮೂವರ ಬಂಧನ

* ಹರಪನಹಳ್ಳಿಯಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಶ್ರೀಧರ ಹತ್ಯೆ 
* ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿಕೆ
* ಪ್ರಕರಣದ ತನಿಖೆ ಮುಂದುವರೆಸಿದ ಹರಪನಹಳ್ಳಿ ಪೊಲೀಸರು  
 

Another Three Accused Arrested for RTI Activist Shridhar Murder Case
Author
Bengaluru, First Published Jul 25, 2021, 3:38 PM IST
  • Facebook
  • Twitter
  • Whatsapp

ದಾವಣಗೆರೆ(ಜು.25): ವಿಜಯನಗರ ಜಿಲ್ಲೆ ಹರಪನಹಳ್ಳಿ ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಜನರನ್ನ ಬಂಧಿಸಲಾಗಿದೆ ಅಂತ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ. 

ಇಂದು(ಭಾನುವಾರ) ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು, ಟಿ.ಶ್ರೀಧರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ (32) ರಾಯದುರ್ಗ ಹಾಲೇಶ(28) ಹಾಗೂ ರಾಯದುರ್ಗ ಬಸವರಾಜ್ (30) ಎಂಬುವರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಹರಪನಹಳ್ಳಿ: ರಾಡ್‌ನಿಂದ ತಲೆಗೆ ಹೊಡೆದು ಆರ್‌ಟಿಐ ಕಾರ್ಯಕರ್ತನ ಹತ್ಯೆ

ಇದೇ ಜು. 15 ರಂದು ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜ್ ಮೈದಾನದಲ್ಲಿ ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ ಅವರನ್ನ ಕೊಲೆ ಮಾಡಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ ಆಪ್ತ ಹಾಗೂ ವಕೀಲ ಎಚ್‌.ಕೆ. ಹಾಲೇಶ್ ಸೇರಿ ಆರು ಜನರನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನ  ಹರಪನಹಳ್ಳಿ ಪೊಲೀಸರು ಮುಂದುವರೆಸಿದ್ದಾರೆ. 
 

Follow Us:
Download App:
  • android
  • ios