ಹಾವೇರಿ: ಅತ್ತಿಗೆ, ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಂದ ಮೈದುನ, ಕಾರಣವೇನು?
ಕುಟುಂಬದ ನಡುವಿನ ಜಗಳದಿಂದಾಗಿ ಮೈದುನ ತನ್ನ ಅತ್ತಿಗೆ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹತ್ಯೆಗೈದಿದ್ದಾನೆ. ಹೌದು! ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಭೀಕರ ಘಟನೆ ಸಂಭವಿಸಿದೆ.
ಹಾವೇರಿ (ನ.04): ಕುಟುಂಬದ ನಡುವಿನ ಜಗಳದಿಂದಾಗಿ ಮೈದುನ ತನ್ನ ಅತ್ತಿಗೆ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹತ್ಯೆಗೈದಿದ್ದಾನೆ. ಹೌದು! ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಯಳ್ಳೂರು ಗ್ರಾಮದ ಕುಮಾರಗೌಡ್ ಮರಿಗೌಡ್ರು ((35) ತನ್ನ ಅಣ್ಣನ ಹೆಂಡತಿ ಗೀತಾ ಮರಿಗೌಡ್ರು 32 ಹಾಗೂ ಅವರ ಮಕ್ಕಳಾದ ಅಕುಲ್ 10 ಹಾಗೂ ಏಳು ವರ್ಷದ ಅಂಕಿತಾಳನ್ನು ಕೊಲೆಗೈದು ಪರಾರಿಯಾಗಿದ್ದಾನೆ.
ಈ ಕೊಲೆಗೆ ಕುಟುಂಬದಲ್ಲಿ ನಡೆದ ಜಗಳವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಮೃತ ಮಹಿಳೆಯ ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ನಾಪತ್ತೆಯಾಗಿರುವ ಕುಮಾರಗೌಡನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಕಮಾಂಡ್ ನೀನು ಸಿಎಂ ಆಗು ಅಂದರೇ ನಾನು ಸಿದ್ಧನಿದ್ದೇನೆ: ಸಚಿವ ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಮುಖಂಡ ಪ್ರಸಾದ ಮದ್ಲಾಪುರು ಬರ್ಬರ ಹತ್ಯೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ ಮದ್ಲಾಪುರು ಎನ್ನುವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ಸೋಮವಾರ ಬೆಳಗ್ಗೆ 6.30ಕ್ಕೆ ನಡೆದಿದೆ. ಕೊಲೆಯಾದ ವ್ಯಕ್ತಿಯು ಮದ್ಲಾಪುರ ಗ್ರಾಮದ ಪ್ರಸಾದ್ (38) ಸೋಮವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಭತ್ತದ ಗದ್ದೆಗೆ ನೀರು ಹಾಯಿಸಲು ತೆರಳಿದ್ದಾಗ ಗುಂಪೂಂದು ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದೆ.
ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಸುಮಿತ್ ಎನ್ನುವ ಯುವಕ ನೀಡಿದ ಹೇಳಿಕೆ ಪ್ರಕಾರ ಸೋಮವಾರ ಬೆಳಗ್ಗೆ ಪ್ರಸಾದ್ ಅವರು ಜಮೀನಿಗೆ ನೀರು ಕಟ್ಟಲೆಂದು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಜಮೀನಿನ ಬಳಿ ಕಾದು ಕುಳಿತಿದ್ದ 3 ದುಷ್ಕರ್ಮಿಗಳು ಏಕಾಏಕಿ ಪ್ರಸಾದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಬಣಕಲ್ ಗ್ರಾಮದ 3 ಜನ ಹತ್ಯೆಗೈದಿರುವುದಾಗಿ ಆರೋಪಿಸಿದ್ದಾರೆ.
ಸಿಎಂ, ಸಚಿವರ್ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಮಧು ಬಂಗಾರಪ್ಪ
ಈ ಹತ್ಯೆ ಘಟನೆ ಕುರಿತಂತೆ ಮೃತನ ತಂದೆ ಮರಿಸ್ವಾಮಿ ಮಾನ್ವಿ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಮಾನ್ವಿ ಠಾಣೆಯಲ್ಲಿ ಕೇಶವ ನಾಯಕ, ರಾಮುನಾಯಕ, ದೇವುನಾಯಕ, ರಮೇಶ, ವೆಂಕಟೇಶ ಸಾಲಿ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ.ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದಷ್ಟು ಬೇಗನೆ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ತಿಳಿಸಿದರು. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿರುವುದಾಗಿ ಹೇಳಿದರು. ದಲಿತ ಮುಖಂಡ ಪ್ರಸಾದ ಮದ್ಲಾಪುರು ಹತ್ಯೆಯನ್ನು ಖಂಡಿಸಿ ಮತ್ತು ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಮುಖಂಡರು ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.