Asianet Suvarna News Asianet Suvarna News

ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ, 9 ಜನರ ಬಂಧನ

*  ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ನಡೆದ ಘಟನೆ
*  ಒಂದೇ ಕಿಚ್ಚಿನಲ್ಲಿ ನಾಲ್ವರು ಸಹೋದರರ ಅಂತ್ಯಕ್ರಿಯೆ 
*  ಮೃತರ ಕುಟುಂಬದ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ 

9 Arrested for Murder Case in Bagalkot grg
Author
Bengaluru, First Published Aug 29, 2021, 3:36 PM IST
  • Facebook
  • Twitter
  • Whatsapp

ಬಾಗಲಕೋಟೆ(ಆ.29): ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನ ಬಂಧಿಸಲಾಗಿದೆ ಎಂದು ಎಸ್.ಪಿ.ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ. 

ಇಂದು(ಭಾನುವಾರ) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ಜಮೀನಿಗೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಾಲ್ವರನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರು ಸಹೋದರರ ಬರ್ಬರ ಹತ್ಯೆ

ಒಂದೇ ಕಿಚ್ಚಿನಲ್ಲಿ ನಾಲ್ವರು ಸಹೋದರರ ಅಂತ್ಯಕ್ರಿಯೆ 

ಒಂದೇ ಕಿಚ್ಚಿನಲ್ಲಿ ಕೊಲೆಯಾದ ನಾಲ್ವರು ಸಹೋದರರನ್ನ ಅಂತ್ಯಕ್ರಿಯೆ ಮಾಡಲಾಗಿದೆ. ಕೊಲೆಯಾದ ಮುದರಡ್ಡಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯ ಗಂಡು ಮಕ್ಕಳೆಲ್ಲ ಭೀಕರವಾಗಿ ಕೊಲೆಯಾದ ಪರಿಣಾಮ ನಾಲ್ವರು ಸಹೋದರರ ಪತ್ನಿಯರು ತಮ್ಮ ಹಾಗೂ ಮಕ್ಕಳ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. 

ಮಕ್ಕಳು, ನಾಲ್ವರು ಪತ್ನಿಯರು, ವೃದ್ದ ತಾಯಿ ರೋಧನ ಮುಗಿಲು ಮುಟ್ಟಿದೆ. ಈ ಘಟನೆಯಿಂದ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಕೊಲೆಗೆ ಸಂಬಂಧಿಸಿದಂತೆ ಪುಟಾಣಿ ಕುಟುಂಬದ ಒಂಭತ್ತು ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮ ಹಾಗೂ ಕೊಲೆ ನಡೆದಿರುವ ಜಮೀನು ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 
 

Follow Us:
Download App:
  • android
  • ios