ಶಿವಮೊಗ್ಗ: ಅನಧಿಕೃತ ಕಟ್ಟಡದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆ ; ಆರೋಪಿ ಬಂಧನ
: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಎಚ್‌ಎಂ ಟಿಂಬರ್ ಆ್ಯಂಡ್ ಫರ್ನಿಚರ್ ಅಂಗಡಿ ಹಿಂಭಾಗದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಘಟನೆ ಸಂಬಂಧ ಆರೋಪಿ ಮೋಮಿನ್ ಎಂಬಾತನನ್ನು ಬಂಧಿಸಿದ ಪೊಲೀಸರು.
ಶಿವಮೊಗ್ಗ (ಫೆ.4): ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಎಚ್‌ಎಂ ಟಿಂಬರ್ ಆ್ಯಂಡ್ ಫರ್ನಿಚರ್ ಅಂಗಡಿ ಹಿಂಭಾಗದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಘಟನೆ ಸಂಬಂಧ ಆರೋಪಿ ಮೋಮಿನ್ ಎಂಬಾತನನ್ನು ಬಂಧಿಸಿದ ಪೊಲೀಸರು.
ಹಿಂದೂ ಸಂಘಟನೆ ಕಾರ್ಯಕರ್ತ ಅರಳಿಹಳ್ಳಿ ದೇವರಾಜ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ರಾಶಿ ರಾಶಿ ಗೋವಿನ ಮೂಳೆ ಪತ್ತೆ ಮಾಡಿದ್ದಾರೆ. ಭದ್ರಾನದಿಯ ತಟದಲ್ಲಿರುವ ತೋಟದಲ್ಲಿ ಅನಧಿಕೃತ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಪೊಲೀಸರು. ದಾಳಿ ವೇಳೆ ಗೋದಾಮಿನ ಒಳಗೆ ಹಾಗೂ ಹೊರಗೆ ಇದ್ದ ಗೋವಿನ ಮೂಳೆಗಳು ಹಾಗೂ ಮಾಂಸದ ತುಣುಕುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಸಂಬಳ ಕೇಳಿದ್ದಕ್ಕೆ ಕಾರ್ಮಿಕನಿಗೆ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಹೋಟೆಲ್ ಮಾಲೀಕ!
ಸುಮಾರು 3ಟನ್ ತೂಕದ ಗೋವಿನ ಮೂಳೆಯ ಭಾಗವನ್ನು ಸಂಗ್ರಹಿಸಿಡಲಾಗಿತ್ತು. ಗೋಹತ್ಯೆ ನಿಷೇಧವಿದ್ದರೂ, ನಿರಂತರವಾಗಿ ಹತ್ಯೆ ಮಾಡಿ ಮೂಳೆ ಸಂಗ್ರಹಿಸಿರುವ ಶಂಕೆ. ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಗೋವಿನ ಮೂಳೆ ಪತ್ತೆಯಾಗಿವೆ. ಈ ಬಗ್ಗೆ ವಿಚಾರಣೆ ಮುಂದುವರಿಸಿರುವ ಪೊಲೀಸರು.
ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ