ಕೊಪ್ಪಳ, (ಜೂನ್.21) : ಇಂದು (ಶನಿವಾರ) ವಿಶ್ವ ಅಪ್ಪಂದಿರ ದಿನ. ಈ ದಿನದಂದು ತಂದೆಯನ್ನು ಎಲ್ಲಿಲ್ಲದ ಪ್ರೀತಿಯಿಂದ ಕಾಣುವ, ದೇವರಂತೆ ಭಾವಿಸುವವರ ನಡುವೆ ನೀಚ ತಂದೆಯೊಬ್ಬನೂ ಇರ್ತಾನೆ  ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ.

ಹೌದು...ತನ್ನ ಕಾಮದಾಸೆಗೆ ತಂದೆಯೊಬ್ಬನ ನಿರಂತರ ಅತ್ಯಾಚಾರಕ್ಕೊಳಗಾದ 14 ವರ್ಷದ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೇಯ ಘಟನೆ ನಡೆದಿರುವುದು ಕೊಪ್ಪಳದ ವೆಂಕಟಾಪುರ ಗ್ರಾಮದಲ್ಲಿ.

ಸ್ನೇಹಿತನ ಕಾಮ ತೀಟೆಗೆ ಪತ್ನಿಯನ್ನೇ ಕಳುಹಿಸಿದ ಪತಿ ಕೋಣೆಯ ಕಾವಲುಗಾರನಾದ..! 

ಯಂಕಪ್ಪ ಗೊಲ್ಲರ್ (45) ಎಂಬಾತನೇ ತನ್ನ 14 ವರ್ಷದ ಮಗಳ ಮೇಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಕಾಮುಕ.

ಯಂಕಪ್ಪ ಎನ್ನುವ ನೀಚ ತಂದೆ ತನ್ನ 14 ವರ್ಷದ ಮಗಳನ್ನು ದನ ಮೇಯಿಸಲು ಜೊತೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ಮಗಳೆಂಬುದನ್ನೂ ಲೆಕ್ಕಿಸದೇ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯ ಯಾರಿಗೂ ಹೇಳದಂತೆ ಬೆದರಿಯೊಡ್ಡಿದ್ದಾನೆ.

ಆದ್ರೇ ಇತ್ತೀಚೆಗೆ 14 ವರ್ಷದ ಬಾಲಕಿಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದಾಗಿ ಮಗಳನ್ನು ಗಂಗಾವತಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಅಲ್ಲದೇ ತಂದೆಯಿಂದಲೇ ಹಲವು ಬಾರಿ ಅತ್ಯಾತಾರಕ್ಕೊಳಗಾದ ಪುತ್ರಿ 8 ತಂಗಳು ಇರುವಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಗಂಡ ಇದ್ರೂ ಮತ್ತೊಬ್ಬನ ಸಹವಾಸ ಬಿಡದ ಗೃಹಿಣಿ: ಪ್ರಿಯಕರನಿಂದಲೇ ಹತ್ಯೆಯಾದ ಮಹಿಳೆ

 ಈ ಬಗ್ಗೆ ತನ್ನ ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ನಿಯೇ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಕಾಮುಕ ತಂದೆಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.