ಅಲ್ವಾರ್(ರಾಜಸ್ಥಾನ್), (ಜೂನ್. 19): ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ  ಅತ್ಯಾಚಾರ ಎಸಗಲು ಸ್ನೇಹಿತನಿಗೆ ಸಹಕಾರ ಕೊಟ್ಟಿರುವ ವಿಲಕ್ಷಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ ಪ್ರದೇಶದಲ್ಲಿ ನಡೆದಿದೆ.  35 ವರ್ಷದ ಸಂತ್ರಸ್ತೆ ಮಹಿಳೆ ತನ್ನ ಪತಿ ಹಾಗೂ ಆತನ ಸ್ನೇಹಿತನ ವಿರುದ್ಧ ಜೂನ್ 4 ರಂದು ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಮಹಿಳೆಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಹುಡುಗಿ ಸ್ನಾನದ ವಿಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು!

ಇನ್ನು ಈ ಬಗ್ಗೆ ಶಹಜಹಾನ್ಪುರ ಸ್ಟೇಷನ್ ಹೌಸ್ ಆಫೀಸರ್ ಸುರೇಂದ್ರ ಸಿಂಗ್ ರಾವತ್ ಪ್ರತಿಕ್ರಿಯಿಸಿ,  ಮೇ 31 ರಂದು ಮಾರುಕಟ್ಟೆಗೆ ಹೋಗುವ ನೆಪದಲ್ಲಿ ಪತಿ, ತನ್ನ ಪತ್ನಿಯನ್ನು (ಸಂತ್ರಸ್ತೆ) ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ದಾರಿಯಲ್ಲಿ ಆರೋಪಿ ತನ್ನ ಸ್ನೇಹಿತ ಮಿಚ್ಚು ಅಲಿಯಾಸ್ ಬಲ್ವಂತ್ ಧಾನಕ್‍ನನ್ನು ಅದೇ ಬೈಕ್‍ನಲ್ಲಿ ತನ್ನೊಂದಿಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಸಹಕಾರ ಕೊಟ್ಟಿದ್ದಾನೆ ಎಂದಿದ್ದಾರೆ.

ಸಂತ್ರಸ್ತ ಮಹಿಳೆ ಹೇಳಿದ್ದೇನು?
ಪತಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನು. ಬೈಕಿನಿಂದ ಇಳಿದು ಸ್ವಲ್ಪ ಸಮಯ ಅಲ್ಲೇ ಕುಳಿತ್ತಿದ್ದೆವು. ಆಗ ಧಾನಕ್ ಬಂದು ನನ್ನನ್ನು ಹತ್ತಿರದಲ್ಲಿದ್ದ ರೂಮಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಆಗ ಪತಿ ಲಾಠಿ ಹಿಡಿದು ರೂಮಿನ ಹೊರಗೆ ಕಾವಲು ನಿಂತಿದ್ದನು. ತನ್ನ ಸ್ನೇಹಿತ ನನ್ನ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಲು ಪತಿ ಸಂಚು ರೂಪಿಸಿದ್ದನು ಎಂದು ಸಂತ್ರಸ್ತೆ ಮಹಿಳೆ ದೂರು ನೀಡಿದ್ದಾಳೆ.

ಘಟನೆಯ ನಂತರ ಆರೋಪಿ ಧಾನಕ್ ಮತ್ತು ಸಂತ್ರಸ್ತೆಯ ಪತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ರೂ ಸಂತ್ರಸ್ತೆ ನಂತರ ತನ್ನ ಪೋಷಕರ ಮನೆಗೆ ಹೋದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆಗ ಮಹಿಳೆಯ ತಂದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ.