Asianet Suvarna News Asianet Suvarna News

ಗೌರಿ ಹತ್ಯೆ 18ನೇ ಆರೋಪಿ ಸೆರೆ, ಗನ್ ಎಸೆದ ಜಾಗ ಯಾವುದು?

ಪತ್ರಕರ್ತೆ ಗೌರಿ ಲಂಕೇಶ್  ಹತ್ಯೆ ಪ್ರಕರಣ/ ಸಾಕ್ಷ್ಯ ನಾಶ ಮಾಡಿದ್ದ ಆರೋಪಿ ಬಂಧಿಸಿದ ಎಸ್‌ಐಟಿ/ 18ನೇ ಆರೋಪಿಯನ್ನು ಜಾರ್ಖಂಡ್ ನಲ್ಲಿ  ಬಂಧನ

1 more arrested in Gauri Lankesh murder case jharkhand
Author
Bengaluru, First Published Jan 9, 2020, 10:57 PM IST

ಬೆಂಗಳೂರು[ಜ. 09]  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 18ನೇ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ನಡೆದು ಎರಡೂವರೆ ವರ್ಷದ ಬಳಿಕ ಬಂಧನ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‌ಗಳನ್ನ ನಾಶ ಮಾಡಿದ್ದ ಆರೋಪಿಯನ್ನು ಜಾರ್ಖಂಡ್‌ನಲ್ಲಿ  SIT ಬಂಧಿಸಿದೆ.

ರಿಶಿಕೇಷ್ ದೇವಾಡಿಕರ್ ಎಂಬಾತನ ಬಂಧನ ಮಾಡಲಾಗಿದ್ದು  ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಬಳಿಕ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ  ಕರೆತರಲಾಗುತ್ತದೆ.

ಕುಟುಂಬಕ್ಕೆ ಗೊತ್ತಿಲ್ಲದೆ ಗೌರಿ ಹೆಸರಲ್ಲಿ 7 ಕೋಟಿ ರೂ. ಸಂಗ್ರಹ

ಕೃತ್ಯಕ್ಕೆ ಬಳಸಿದ್ದ ನಾಲ್ಕು ಪಿಸ್ತೂಲ್‌ಗಳ ನಾಶ ಮಾಡಿದ್ದ ಆರೋಪ ಈತನ ಮೇಲಿದೆ. ಪಿಸ್ತೂಲ್‌ಗಳ ಬ್ಯಾರಲ್ & ಸ್ಲೈಡ್ ಬದಲಿಸಿ ನೀರಿಗೆ ಎಸೆದಿದ್ದಾನೆ ಎಂದು ಹೇಳಲಾಗಿದೆ. ಮುಂಬೈ-ನಾಸಿಕ್ ಹೈವೆಯ ಉಲ್ಲಾಸ್ ನದಿಗೆ ಎಸೆದು ಸಾಕ್ಷ್ಯ ನಾಶ ಮಾಡಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.

ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಮುಂದೆಯೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು ಒಬ್ಬಬ್ಬರೇ ಆರೋಪಿಗಳ ಬಂಧನ ಮಾಡುತ್ತಿದೆ.

Follow Us:
Download App:
  • android
  • ios