Rishabh Pant offers cash reward ರಿಷಭ್ ಪಂತ್, ತಮ್ಮ ಅಭಿಮಾನಿಗಳಿಗೆ ಒಂದು ಲಕ್ಷ ರುಪಾಯಿ ಬಹುಮಾನ ಗೆಲ್ಲಲು ಬಂಪರ್ ಆಫರ್ ಘೋಷಿಸಿದ್ದಾರೆ. ಆದರೆ ‍‍‍ಷರತ್ತುಗಳು ಅನ್ವಯ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಲಂಬೊ: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇದೀಗ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ವಿನೂತನವಾಗಿ ಬೆಂಬಲ ಸೂಚಿಸಿದ್ದಾರೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಭರವಸೆಯ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಚಿನ್ನ ಗೆಲ್ಲಬಲ್ಲ ನೆಚ್ಚಿನ ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗಲೇ ರಿಷಭ್ ಪಂತ್ ತಮ್ಮ ಅಭಿಮಾನಿಗಳಿಗೊಂದು ಅಪರೂಪದ ಆಫರ್ ನೀಡಿದ್ದಾರೆ. ಆದರೆ ಅದಕ್ಕೊಂದು ಕಂಡೀಷನ್ ಕೂಡಾ ಹಾಕಿದ್ದಾರೆ.

ಹೌದು, ಈಗಾಗಲೇ ನೀರಜ್ ಚೋಪ್ರಾ, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದೀಗ ಆಗಸ್ಟ್ 08ರಂದು ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ನೀರಜ್ ಚೋಪ್ರಾ, ಚಿನ್ನದ ಪದಕ ಜಯಿಸಿದರೇ ಓರ್ವ ಅದೃಷ್ಟಶಾಲಿಗೆ ₹1,00,089(ಒಂದು ಲಕ್ಷದ ಎಂಬತ್ತೊಂಬತ್ತು ರುಪಾಯಿ) ನೀಡುತ್ತೇನೆ. ಇದಷ್ಟೇ ಅಲ್ಲದೇ ಇನ್ನು 10 ಮಂದಿಗೆ ಉಚಿತ ವಿಮಾನಯಾನದ ಟಿಕೆಟ್ ನೀಡುತ್ತೇನೆ ಎಂದು ಸಾಮಾಜಿಕ ಜಾಲತಾಣವಾದ 'ಎಕ್ಸ್‌'(ಖಾತೆಯ) ಮೂಲಕ ಘೋಷಿಸಿದ್ದಾರೆ. ಆದರೆ ಇದಕ್ಕೊಂದು ಷರತ್ತನ್ನು ವಿಧಿಸಿದ್ದಾರೆ.

'100 ಗ್ರಾಮ್ ಲೆಕ್ಕವೇ ಅಲ್ಲ..!': ವಿನೇಶ್ ಅನರ್ಹತೆ ಬಗ್ಗೆ ತುಟಿಬಿಚ್ಚಿದ ಬಾಕ್ಸಿಂಗ್ ಹೀರೋ ವಿಜೇಂದರ್ ಸಿಂಗ್

ಎಕ್ಸ್‌ ಖಾತೆಯಲ್ಲಿ ರಿಷಭ್ ಪಂತ್, "ಒಂದು ವೇಳೆ ನಾಳೆ ರಿಷಭ್ ಪಂತ್ ಚಿನ್ನದ ಪದಕ ಜಯಿಸಿದರೆ, ಯಾರು ನನ್ನ ಟ್ವೀಟ್‌ ಅನ್ನು ಲೈಕ್ ಹಾಗೂ ಅತಿ ಹೆಚ್ಚು ಕಮೆಂಟ್‌ ಮಾಡುತ್ತಾರೋ ಆ ಪೈಕಿ ಒಬ್ಬರಿಗೆ ನಾನು ಒಬ್ಬ ಅದೃಷ್ಟಶಾಲಿಗೆ ₹1,00,089 ರುಪಾಯಿ ನೀಡುತ್ತೇನೆ. ಇದರ ಜತೆಗೆ ಇನ್ನು 10 ಮಂದಿಗೆ ವಿಮಾನಯಾನದ ಟಿಕೆಟ್ ನೀಡಲಿದ್ದೇನೆ. ಭಾರತದಲ್ಲಿರುವ ನಾವೆಲ್ಲರೂ ಭಾರತದಾಚೆ ಇರುವ ನಮ್ಮ ಸಹೋದರನನ್ನು ಬೆಂಬಲಿಸೋಣ" ಎಂದು ಬರೆದುಕೊಂಡಿದ್ದಾರೆ.

Scroll to load tweet…

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೀರಜ್ ಚೋಪ್ರಾ, 89.34 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನಿಯಾಗಿ ಫೈನಲ್‌ಗೆ ಅರ್ಹತೆ ಪಡೆಯಲು ಯಶಸ್ವಿಯಾಗಿದ್ದಾರೆ. ಈಗಾಗಲೇ ಹಾಲಿ ಒಲಿಂಪಿಕ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ, ಇದೀಗ ಆಗಸ್ಟ್‌ 8ರ ರಾತ್ರಿ 11.55ರಿಂದ ಆರಂಭವಾಗಲಿದೆ.