Asianet Suvarna News Asianet Suvarna News

T20 World Cup 2024: ಪಾಕಿಗಳ ಕರಾರುವಕ್ಕಾದ ದಾಳಿ, ಸಾಧಾರಣ ಮೊತ್ತ ಕಲೆಹಾಕಿದ ಭಾರತ

ಇಲ್ಲಿನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಮರು ಯೋಚನೆಯಿಲ್ಲದೇ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಓವರ್ ಮುಗಿಯುತ್ತಿದ್ದಂತೆಯೇ ಮಳೆ ಸುರಿದ ಪರಿಣಾಮ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

T20 World Cup 2024 Haris Rauf Naseem Shah Help Pakistan Bundle Out India For 119
Author
First Published Jun 9, 2024, 11:13 PM IST

ನ್ಯೂಯಾರ್ಕ್‌: ಮಳೆ ಅಡಚಣೆಯ ಹೊರತಾಗಿಯೂ ತಾಳ್ಮೆ ಕಳೆದುಕೊಳ್ಳದ ಪಾಕಿಸ್ತಾನ ವೇಗಿಗಳು ಕರಾರುವಕ್ಕಾದ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ 119 ರನ್‌ಗಳಿಸಿ ಸರ್ವಪತನ ಕಂಡಿದೆ. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ದಾಖಲಿಸಿದ ಕನಿಷ್ಠ ಮೊತ್ತ ಎನಿಸಿಕೊಂಡಿದೆ. ಈ ಮೂಲಕ ಪಾಕಿಸ್ತಾನ ಈ ಪಂದ್ಯ ಗೆಲ್ಲಲು ಸಾಧಾರಣ ಗುರಿ ಪಡೆದಿದೆ.

ಇಲ್ಲಿನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಮರು ಯೋಚನೆಯಿಲ್ಲದೇ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಓವರ್ ಮುಗಿಯುತ್ತಿದ್ದಂತೆಯೇ ಮಳೆ ಸುರಿದ ಪರಿಣಾಮ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ನಸೀಂ ಶಾಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಕೇವಲ 13 ರನ್ ಗಳಿಸಿ ಶಾಹಿನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಕೇವಲ 19 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಟೀಂ ಇಂಡಿಯಾಗೆ ಮೂರನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಅಕ್ಷರ್ ಪಟೇಲ್ ಆಸರೆಯಾದರು. ಅಕ್ಷರ್ ಪಟೇಲ್ 20 ರನ್ ಸಿಡಿಸಿ ನಸೀಂ ಶಾಗೆ ವಿಕೆಟ್ ಒಪ್ಪಿಸಿದರು.

ದಿಢೀರ್ ಕುಸಿದ ಭಾರತ: 58 ರನ್‌ಗಳವರೆಗೂ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಅಕ್ಷರ್ ಪಟೇಲ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಸೂರ್ಯಕುಮಾರ್ ಯಾದವ್(7), ಶಿವಂ ದುಬೆ(3), ಹಾರ್ದಿಕ್ ಪಾಂಡ್ಯ(7), ರವೀಂದ್ರ ಜಡೇಜಾ(0) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಇನ್ನು ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಕೇವಲ 31 ಎಸೆತಗಳನ್ನು ಎದುರಿಸಿ 42 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

Latest Videos
Follow Us:
Download App:
  • android
  • ios