6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಕಪ್‌ನಿಂದ ಔಟ್‌! 15 ವರ್ಷಗಳ ಬಳಿಕ ಬಿಗ್ ಶಾಕ್

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಡುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

South Africa secures first ever T20 World Cup win over Australia to qualify for final kvn

ದುಬೈ: 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ 9ನೇ ಆವೃತ್ತಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಸೀಸ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ ಹೀನಾಯ ಸೋಲು ಎದುರಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ಸತತ 2ನೇ ಬಾರಿ ಫೈನಲ್‌ಗೆ ಪ್ರವೇಶಿಸಿತು. ಜೊತೆಗೆ, ಕಳೆದ ಬಾರಿ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 5 ವಿಕೆಟ್‌ಗೆ 134 ರನ್‌ ಕಲೆಹಾಕಿತು. ಬೆಥ್‌ ಮೂನಿ 44, ಎಲೈಸಿ ಪೆರ್ರಿ 31, ತಹಿಲಾ ಮೆಗ್ರಾಥ್‌ 27 ಹಾಗೂ ಫೋಬೆ ಲಿಚ್‌ಫೀಲ್ಡ್ 16 ರನ್‌ ಕೊಡುಗೆ ನೀಡಿದರು. ಅಯಾಬೊಂಗಾ ಖಾಕ 2 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ದ.ಆಫ್ರಿಕಾ ಕೇವಲ 17.2 ಓವರ್‌ಗಳಲ್ಲೇ ಬೆನ್ನತ್ತಿ ಜಯಭೇರಿ ಮೊಳಗಿಸಿತು. ಅನ್ನೆಕೆ ಬಾಶ್‌ ಕೇವಲ 48 ಎಸೆತಗಳಲ್ಲಿ 74 ರನ್‌ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ನಾಯಕಿ ಲಾರಾ ವೊಲ್ವಾರ್ಟ್‌ 42 ರನ್‌ ಗಳಿಸಿದರು. ಫೈನಲ್‌ ಪಂದ್ಯ ಭಾನುವಾರ ನಡೆಯಲಿದೆ.

ಇಂದಿನಿಂದ ಬೆಂಗಳೂರಿನಲ್ಲಿ ಕರ್ನಾಟಕ vs ಕೇರಳ ರಣಜಿ ಫೈಟ್

15 ವರ್ಷಗಳಲ್ಲಿ ಮೊದಲ ಬಾರಿಗೆ ಆಸೀಸ್‌ ಫೈನಲ್‌ನಿಂದ ಔಟ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಬರೋಬ್ಬರಿ 15 ವರ್ಷಗಳ ಬಳಿಕ ಫೈನಲ್‌ಗೇರಲು ವಿಫಲವಾಗಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು 2009ರಲ್ಲಿ ಕೊನೆಯ ಬಾರಿಗೆ ಸೆಮೀಸ್‌ನಲ್ಲಿ ಸೋಲು ಅನುಭವಿಸಿತ್ತು. ಇದಾದ ಬಳಿಕ ಸತತವಾಗಿ 7 ಬಾರಿ ಆಸೀಸ್ ಫೈನಲ್ ಪ್ರವೇಶಿಸುತ್ತಲೇ ಬಂದಿತ್ತು. ಆದರೆ ಇದೀಗ ಹರಿಣಗಳ ಪಡೆ ಕಾಂಗರೂ ಪಡೆಯ ಫೈನಲ್ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.

ಇಂದು ವಿಂಡೀಸ್‌-ಕಿವೀಸ್‌ ಸೆಮೀಸ್‌

ಟೂರ್ನಿಯ 2ನೇ ಸೆಮಿಫೈನಲ್‌ ಪಂದ್ಯ ಶುಕ್ರವಾರ ನಡೆಯಲಿದ್ದು, ವೆಸ್ಟ್‌ಇಂಡೀಸ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಾಡಲಿವೆ. ವಿಂಡೀಸ್‌ 2ನೇ ಬಾರಿ, ಕಿವೀಸ್‌ 3ನೇ ಬಾರಿ ಫೈನಲ್‌ ಪ್ರವೇಶಿಸುವ ಕಾತರದಲ್ಲಿವೆ.

Latest Videos
Follow Us:
Download App:
  • android
  • ios