ಬೆಂಗಳೂರಲ್ಲಿ ಕೊಹ್ಲಿ ರೀತಿ ಬೌಲಿಂಗ್ ಮಾಡಿ ಮೊದಲ ವಿಕೆಟ್ ಕಬಳಿಸಿದ ಸ್ಮೃತಿ ಮಂಧನಾ..! ವಿಡಿಯೋ ವೈರಲ್
ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ, ಬುಧವಾರ ಅಂ.ರಾ. ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲ್ ಮಾಡಿದರು. ಅವರ ಬೌಲಿಂಗ್ ಶೈಲಿಯೂ ಕೊಹ್ಲಿಯ ಬೌಲಿಂಗ್ ಶೈಲಿಯನ್ನೇ ಹೋಲುತ್ತಿದ್ದು ಸಾಮಾಜಿಕ ತಾಣಗಳಲ್ಲಿ ಇವರಿಬ್ಬರ ಬೌಲಿಂಗ್‌ನ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಸ್ಮೃತಿ ತಾವೆಸೆದ ಮೊದಲ ಓವರ್‌ನ 2ನೇ ಎಸೆತದಲ್ಲೇ ವಿಕೆಟ್ ಕಿತ್ತರು ಎನ್ನುವುದು ವಿಶೇಷ.
ಬೆಂಗಳೂರು: ‘ವಿರಾಟ್ ಕೊಹ್ಲಿಗೆ ಬೌಲಿಂಗ್ ಕೊಡಿ’ ಎಂದು ಪಂದ್ಯಗಳ ವೇಳೆ ಕ್ರೀಡಾಂಗಣಗಳಲ್ಲಿ ನೆರೆದಿರುವ ಅಭಿಮಾನಿಗಳು ಆಗಾಗ ಕೇಳುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣ, ಅವರ ಬೌಲಿಂಗ್ ಶೈಲಿ ವಿಭಿನ್ನವಾಗಿರುವುದು. ಜೊತೆಗೆ ಕೋಚ್ ದ್ರಾವಿಡ್ 2023ರ ಏಕದಿನ ವಿಶ್ವಕಪ್ ವೇಳೆ ಕೊಹ್ಲಿಯ ಅರೆಕಾಲಿಕ ಬೌಲಿಂಗ್ ಬಗ್ಗೆ ಎದುರಾಳಿಗಳು ಎಚ್ಚರದಿಂದಿರಬೇಕು ಎಂದಿದ್ದನ್ನು ನೆನಪಿಸಿಕೊಳ್ಳಬಹುದು.
ಇದೀಗ ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ, ಬುಧವಾರ ಅಂ.ರಾ. ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲ್ ಮಾಡಿದರು. ಅವರ ಬೌಲಿಂಗ್ ಶೈಲಿಯೂ ಕೊಹ್ಲಿಯ ಬೌಲಿಂಗ್ ಶೈಲಿಯನ್ನೇ ಹೋಲುತ್ತಿದ್ದು ಸಾಮಾಜಿಕ ತಾಣಗಳಲ್ಲಿ ಇವರಿಬ್ಬರ ಬೌಲಿಂಗ್‌ನ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಸ್ಮೃತಿ ತಾವೆಸೆದ ಮೊದಲ ಓವರ್‌ನ 2ನೇ ಎಸೆತದಲ್ಲೇ ವಿಕೆಟ್ ಕಿತ್ತರು ಎನ್ನುವುದು ವಿಶೇಷ.
ಹೀಗಿತ್ತು ನೋಡಿ ಸ್ಮೃತಿ ಮಂಧನಾ ಪಡೆದ ಮೊದಲ ವಿಕೆಟ್:
SMRITI MANDHANA HAS TAKEN A WICKET IN INTERNATIONAL CRICKET...!!!! 🔥 pic.twitter.com/AhHgdteVjJ
— Johns. (@CricCrazyJohns) June 19, 2024
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ಬಗ್ಗೆ ಹೇಳುವುದಾರೇ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಹೈಸ್ಕೋರಿಂಗ್ ಪಂದ್ಯದಲ್ಲಿ 4 ರನ್ ರೋಚಕ ಜಯ ಸಾಧಿಸುವುದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಂ ಇಂಡಿಯಾ 2-0 ಅಂತರದಲ್ಲಿ ಏಕದಿನ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ.
ಮೊದಲು ಬ್ಯಾಟ್ ಮಾಡಿದ ಭಾರತ, 50 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 3ನೇ ವಿಕೆಟ್‌ಗೆ ಸ್ಮೃತಿ ಹಾಗೂ ಹರ್ಮನ್‌ಪ್ರೀತ್ ನಡುವೆ 171 ರನ್ ಜೊತೆಯಾಟ ಮೂಡಿಬಂತು. ಸ್ಮೃತಿ ಸತತ 2ನೇ ಶತಕ ಸಿಡಿಸಿದರು. 120 ಎಸೆತದಲ್ಲಿ 18 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 136 ರನ್ ಕಲೆಹಾಕಿದರು. ಸ್ಫೋಟಕ ಆಟವಾಡಿದ ಹರ್ಮನ್‌ಪ್ರೀತ್ 88 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 103 ರನ್ ಸಿಡಿಸಿ ಔಟಾಗದೆ ಉಳಿದರು.
ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ, 15ನೇ ಓವರಲ್ಲಿ 67 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ 4ನೇ ವಿಕೆಟ್‌ಗೆ ನಾಯಕಿ ಲಾರಾ ವೂಲ್ವಾರ್ಟ್ ಹಾಗೂ ಮಾರಿಯಾನೆ ಕಾಪ್ 184 ರನ್ ಸೇರಿಸಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಕಾಪ್ 94 ಎಸೆತದಲ್ಲಿ 114 ರನ್ ಸಿಡಿಸಿ ಔಟಾದ ಬಳಿಕವೂ ವೂಲ್ವಾರ್ಟ್ ಹೋರಾಟ ಮುಂದುವರಿಸಿದರು. ಕೊನೆ 4 ಎಸೆತದಲ್ಲಿ ಗೆಲ್ಲಲು 6 ರನ್ ಬೇಕಿದ್ದಾಗ, ಪೂಜಾ ಅದ್ಭುತ ದಾಳಿ ನಡೆಸಿ ದಕ್ಷಿಣ ಆಫ್ರಿಕಾವನ್ನು 321 ರನ್‌ಗೆ ನಿಯಂತ್ರಿಸಿದರು.
4 ಶತಕ: ಇದೇ ಮೊದಲು!
ಬೆಂಗಳೂರು: ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ನಾಲ್ವರು ಬ್ಯಾಟರ್‌ಗಳು ಶತಕ ಬಾರಿಸಿದ್ದಾರೆ. ಭಾರತದ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಕೌರ್, ದಕ್ಷಿಣ ಆಫ್ರಿಕಾದ ಮಾರಿಯಾನೆ ಕಾಪ್ ಹಾಗೂ ಲಾರಾ ವೂಲ್ವಾರ್ಟ್ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು.