ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು, ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಭರ್ಜರಿ ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ: ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಿದ್ದ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲೂ ಜಯಭೇರಿ ಭಾರಿಸಿದೆ. ಭಾರತದ ಸಂಪೂರ್ಣ ಅಧಿಕತ್ಯಕ್ಕೆ ಒಳಗಾದ ಪಂದ್ಯದಲ್ಲಿ ಹರಿಣ ಪಡೆ 10 ವಿಕೆಟ್‌ ಹೀನಾಯ ಸೋಲನುಭವಿಸಿತು.

ಗೆಲುವಿಗೆ 37 ರನ್‌ಗಳ ಸುಲಭ ಗುರಿ ಪಡೆದಿದ್ದ ಹರ್ಮನ್‌ಪ್ರೀತ್ ಕೌರ್‌ ಬಳಗ 9.2 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ 24, ಶುಭಾ ಸತೀಶ್‌ 13 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

Scroll to load tweet…

ಇನ್ನಿಂಗ್ಸ್‌ ಸೋಲಿನಿಂದ ಪಾರು: ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್‌ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ 337 ರನ್‌ ಹಿನ್ನಡೆಯೊಂದಿಗೆ ಫಾಲೋ ಆನ್‌ಗೆ ತುತ್ತಾಗಿದ್ದ ದ.ಆಫ್ರಿಕಾ 2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿತು. 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 232 ರನ್‌ ಗಳಿಸಿದ್ದು ತಂಡ ಸೋಮವಾರ 373ಕ್ಕೆ ಆಲೌಟಾಯಿತು.

'ಟಿ20ಗೆ ವಿದಾಯ ಹೇಳುವ ಮನಸ್ಸಿರಲಿಲ್ಲ, ಆದ್ರೆ...': ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಸ್ಪೋಟಕ ಹೇಳಿಕೆ..!

93 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ನಾಯಕಿ ಲಾರಾ ವೊಲ್ವಾರ್ಟ್‌ 122ಕ್ಕೆ ನಿರ್ಗಮಿಸಿದರೆ, ನ್ಯಾಡಿನ್ ಡೆ ಕ್ಲೆರ್ಕ್‌ ಹೋರಾಟದ 61 ರನ್‌ ಗಳಿಸಿ ರಾಜೇಶ್ವರಿ ಗಾಯಕ್ವಾಡ್‌ಗೆ ವಿಕೆಟ್‌ ಒಪ್ಪಿಸಿದರು. 264ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ ಆ ಬಳಿಕ ಕುಸಿತಕ್ಕೊಳಗಾದರೂ ಇನ್ನಿಂಗ್ಸ್‌ ಸೋಲಿನ ಮುಖಭಂಗದಿಂದ ಪಾರಾಯಿತು. ಸ್ನೇಹ ರಾಣಾ, ರಾಜೇಶ್ವರಿ, ದೀಪ್ತಿ ಶರ್ಮಾ ತಲಾ 2 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 603 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದರೆ, ದ.ಆಫ್ರಿಕಾ 266ಕ್ಕೆ ಆಲೌಟಾಗಿತ್ತು.

ಟೀಂ ಇಂಡಿಯಾ ಕೋಚ್ ಹುದ್ದೆಗೆ ಇಬ್ಬರ ಹೆಸರು ಶಾರ್ಟ್‌ಲಿಸ್ಟ್ ಆಗಿದೆ: BCCI ಕಾರ್ಯದರ್ಶಿ ಜಯ್ ಶಾ ಅಚ್ಚರಿ ಹೇಳಿಕೆ

ಸ್ಕೋರ್‌: ಭಾರತ 603/6 ಡಿ. ಮತ್ತು 37/0(ಶಫಾಲಿ 24*, ಶುಭಾ 13*), ದ.ಆಫ್ರಿಕಾ 266/10 ಮತ್ತು 373/10 (ವೊಲ್ವಾರ್ಟ್‌ 122, ಕ್ಲೆರ್ಕ್‌ 61, ಗಾಯಕ್ವಾಡ್‌ 2-55)

ಪಂದ್ಯಶ್ರೇಷ್ಠ: ಸ್ನೇಹ ರಾಣಾ

ಪಂದ್ಯದಲ್ಲಿ 10 ವಿಕೆಟ್‌: ಸ್ನೇಹ 2ನೇ ಭಾರತೀಯ ಬೌಲರ್

ಸ್ಪಿನ್ನರ್‌ ಸ್ನೇಹ ರಾಣಾ ಪಂದ್ಯದಲ್ಲಿ 10 ವಿಕೆಟ್‌ ಪಡೆದರು. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಸ್ಪಿನ್ನರ್‌, 2ನೇ ಬೌಲರ್‌ ಎನಿಸಿಕೊಂಡರು. 2006ರಲ್ಲಿ ಇಂಗ್ಲೆಂಡ್‌ ವಿರುದ್ಧ ಜೂಲನ್‌ ಗೋಸ್ವಾಮಿ 10 ವಿಕೆಟ್‌ ಕಬಳಿಸಿದ್ದರು.

ಜು.5ರಿಂದ ಟಿ20: ಇತ್ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಜು.5ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿದೆ. ಕೊನೆ 2 ಪಂದ್ಯಗಳು ಜು.7 ಮತ್ತು 9ರಂದು ನಿಗದಿಯಾಗಿದೆ.