ಬಿಸಿಸಿಐ ಈ ಹೃದಯಸ್ಪರ್ಶಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಅವರನ್ನು ಭೇಟಿ ಮಾಡಿ, "ಸರ್ಫರಾಜ್ ಖಾನ್ ಈ ಹಂತಕ್ಕೇರಲು ನೀವು ಏನೆಲ್ಲಾ ತ್ಯಾಗ ಮಾಡಿದ್ದೀರಾ, ಕಠಿಣ ಪರಿಶ್ರಮಪಟ್ಟಿದ್ದೀರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದು ರೋಹಿತ್ ಶರ್ಮಾ ಹೇಳುತ್ತಾರೆ.
ರಾಜ್‌ಕೋಟ್(ಫೆ.16): ಕಳೆದ ಎರಡು-ಮೂರು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ರನ್ ರಾಶಿಯನ್ನೇ ಗುಡ್ಡೆ ಹಾಕಿ ಕೊನೆಗೂ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಸರ್ಫರಾಜ್ ಖಾನ್ ಯಶಸ್ವಿಯಾಗಿದ್ದಾರೆ. ರಾಜ್‌ಕೋಟ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮುಂಬೈ ಮೂಲದ ಸರ್ಫರಾಜ್ ಖಾನ್ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ, ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಇನ್ನು ರಾಜ್‌ಕೋಟ್ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಕ್ಯಾಪ್ ನೀಡುವ ಮೂಲಕ ಸರ್ಫರಾಜ್ ಖಾನ್ ಅವರನ್ನು ಟೆಸ್ಟ್ ತಂಡಕ್ಕೆ ಸ್ವಾಗತಿಸಿಕೊಂಡರು. ಇದನ್ನು ಹತ್ತಿರದಲ್ಲೇ ನಿಂತು ಅವರ ತಂದೆ ಹಾಗೂ ಪತ್ನಿ ಕಣ್ತುಂಬಿಕೊಂಡರು ಹಾಗೂ ಆನಂದ ಭಾಷ್ಪ ಸುರಿಸಿದರು. ಇನ್ನು ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಪೋಷಕರ ಜತೆ ಆಪ್ತವಾಗಿ ಮಾತನಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಫರಾಜ್ ಖಾನ್ ರನೌಟ್ ಮಾಡಿದ್ದಕ್ಕೆ ಕೈಮುಗಿದು ಕ್ಷಮೆ ಕೋರಿದ ರವೀಂದ್ರ ಜಡೇಜಾ..!
ಬಿಸಿಸಿಐ ಈ ಹೃದಯಸ್ಪರ್ಶಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಅವರನ್ನು ಭೇಟಿ ಮಾಡಿ, "ಸರ್ಫರಾಜ್ ಖಾನ್ ಈ ಹಂತಕ್ಕೇರಲು ನೀವು ಏನೆಲ್ಲಾ ತ್ಯಾಗ ಮಾಡಿದ್ದೀರಾ, ಕಠಿಣ ಪರಿಶ್ರಮಪಟ್ಟಿದ್ದೀರ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ನಿಮ್ಮಿಬ್ಬರಿಗೂ ಅಭಿನಂದನೆಗಳು ಎಂದು ರೋಹಿತ್ ಶರ್ಮಾ ಹೇಳುತ್ತಾರೆ.
ಆಗ ಕೃತಜ್ಞತೆಯಿಂದ ಸರ್ಫರಾಜ್ ಖಾನ್ ತಂದೆ ರೋಹಿತ್ ಉದ್ದೇಶಿಸಿ, "ಸರ್ಫರಾಜ್ ಖಾನ್ ಬಗ್ಗೆ ಗಮನವಿರಲಿ ಸರ್" ಎಂದು ಕೇಳಿಕೊಳ್ಳುತ್ತಾರೆ. ಆಗ ರೋಹಿತ್ 'ಅಯ್ಯೋ ಖಂಡಿತವಾಗಿಯೂ' ಎನ್ನುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಫರಾಜ್ ಖಾನ್ 66 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 62 ರನ್ ಬಾರಿಸಿ ಮಾರ್ಕ್ ವುಡ್ ಡೈರೆಕ್ಟ್ ಹಿಟ್‌ಗೆ ಪೆವಿಲಿಯನ್ ಸೇರಬೇಕಾಯಿತು. ಸರ್ಫರಾಜ್ ರನೌಟ್ ಮಾಡಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದರು.
ರವಿಚಂದ್ರನ್ ಅಶ್ವಿನ್ 500 ಟೆಸ್ಟ್ ವಿಕೆಟ್..! ದಿಗ್ಗಜರ ಸಾಲಿಗೆ ಸೇರಿದ ಸ್ಪಿನ್ ಮಾಂತ್ರಿಕ
