ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗೆಲುವಿನ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. ರಿಷಭ್ ಪಂತ್ ಮಾಡಿದ ಮಾಸ್ಟರ್ ಪ್ಲಾನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ
ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದು ಕೆಲವು ತಿಂಗಳುಗಳೇ ಕಳೆದರೂ ಅದರ ನೆನಪುಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ವಿರಾಟ್ ಕೊಹ್ಲಿ ಬಾರಿಸಿದ ಕೆಚ್ಚೆದೆಯ ಶತಕದಿಂದ ಹಿಡಿದು ಬೌಂಡರಿ ಗೆರೆಯಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಬುತ ಕ್ಯಾಚ್‌ವರೆಗೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಆ ನೆನಪುಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿಯೇ ಉಳಿದಿದೆ.
ಹೌದು, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಫೈನಲ್ ಪಂದ್ಯ ಗೆಲ್ಲಲು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾಡಿದ ಮಾಸ್ಟರ್ ಮೈಂಡ್ ಗೇಮ್ ಪ್ಲಾನ್ ಬಿಚ್ಚಿಟ್ಟಿದ್ದಾರೆ. ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ನಾಯಕ ರೋಹಿತ್ ಶರ್ಮಾ, ಆ ಘಟನೆಯನ್ನು ಮೆಲುಕು ಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್ ಗೆಲ್ಲಲು 30 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ಈ ನಡುವೆ ಒಂದು ಸಣ್ಣ ಬ್ರೇಕ್ ಸಿಕ್ಕಿತು. ಆಗ ರಿಷಭ್ ಪಂತ್ ಬುದ್ದಿವಂತಿಕೆ ಉಪಯೋಗಿಸಿ ಪಂದ್ಯದ ಗತಿ ನಿಧಾನವಾಗಿಸಲು ಮಾಸ್ಟರ್ ಪ್ಲಾನ್ ಮಾಡಿದರು. ಯಾಕೆಂದರೆ ಈ ಸಂದರ್ಭದಲ್ಲಿ ಎದುರಾಳಿ ತಂಡದ ಬ್ಯಾಟರ್‌ಗಳು ವೇಗವಾಗಿ ರನ್ ಗಳಿಸುತ್ತಿದ್ದರು. ಆದರೆ ನಾವು ಅವರ ಲಯ ತಪ್ಪುವಂತೆ ಮಾಡಿದೆವು. ಬೌಲರ್‌ಗಳು ಬೌಲಿಂಗ್ ಮಾಡುವ ಮುನ್ನ ನಾನು ಆ ಬ್ರೇಕ್‌ನಲ್ಲಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದೆ. ಆಗ ರಿಷಭ್ ಪಂತ್ ದಿಢೀರ್ ಎನ್ನುವಂತೆ ರಿಷಭ್ ಪಂತ್ ಮೈದಾನದಲ್ಲಿ ಕುಳಿತುಕೊಂಡಿರುವುದನ್ನು ನೋಡಿದೆ. ಆಗ ಫಿಸಿಯೋಥೆರಪಿಸ್ಟ್ ಮೈದಾನಕ್ಕೆ ಓಡಿಬಂದು ಮೊಣಕಾಲಿಗೆ ಟೇಪ್ ಸುತ್ತಿದರು. ಕ್ಲಾಸೆನ್ ಬ್ಯಾಟಿಂಗ್ ಆರಂಭವಾಗುವುದನ್ನೇ ಕಾಯುತ್ತಿದ್ದರು. ರಿಷಭ್ ಪಂತ್ ತಡ ಮಾಡಿದ್ದಕ್ಕೆ ಅವರು ಲಯ ಕಳೆದುಕೊಂಡರು ಎಂದು ಹೇಳಲಾರೇ, ಆದರೆ ನಮ್ಮ ಗೆಲುವಿಗೆ ಅದು ಕೂಡಾ ಒಂದು ಕಾರಣವಾಯಿತು ಎಂದು ರಿಷಭ್ ಪಂತ್ ಅವರ ಚುರುಕುತನವನ್ನು ರೋಹಿತ್ ಶರ್ಮಾ ಗುಣಗಾನ ಮಾಡಿದ್ದಾರೆ.
ಬಾಂಗ್ಲಾದೇಶ ಎದುರಿನ ಟಿ20 ಸರಣಿಗೂ ಮುನ್ನ ಭಾರತಕ್ಕೆ ಶಾಕ್; ಬಿಗ್ ಹಿಟ್ಟರ್ ಟೂರ್ನಿಯಿಂದ ಔಟ್
ಕೊನೆಯ 24 ಎಸೆತಗಳಿಗೆ 26 ರನ್ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಕ್ಲಾಸೆನ್, ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಆರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸಿದರು. ಪರಿಣಾಮ ಕೊನೆಯ ಓವರ್‌ನಲ್ಲಿ ಅಪಾಯಕಾರಿ ಬ್ಯಾಟರ್ ಡೇವಿಡ್ ಮಿಲ್ಲರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು.
ಇಂದಿನಿಂದ ಭಾರತ vs ಬಾಂಗ್ಲಾ ಟಿ20 ಕದನ ಆರಂಭ
"ಕ್ಲಾಸೆನ್ ವಿಕೆಟ್ ಪತನದ ಬಳಿಕ ಒತ್ತಡ ದಕ್ಷಿಣ ಆಫ್ರಿಕಾದ ಮೇಲೆ ಬಿದ್ದಿತು. ಆಗ ನಾನು ನಮ್ಮ ಹುಡುಗರನ್ನು ಕರೆದು, ಎದುರಾಳಿ ಬ್ಯಾಟರ್‌ಗಳನ್ನು ಸ್ಲೆಡ್ಜ್ ಮಾಡಿ ಎಂದು ಸಲಹೆ ಕೊಟ್ಟೆ. ಏನೆಲ್ಲಾ ಸ್ಲೆಡ್ಜ್ ಮಾಡಿದೆವು ಎಂದು ಇಲ್ಲಿ ಹೇಳಲಾರೆ. ಆದರೆ ಸ್ಲೆಡ್ಜ್ ಮಾಡುವುದು ನಮಗೆ ಅನಿವಾರ್ಯವಾಗಿತ್ತು, ಯಾಕೆಂದರೆ ನಾವು ಗೆಲ್ಲಲೇಬೇಕಾಗಿತ್ತು. ಈ ಗೆಲುವಿಗಾಗಿ ನಾವು ಕೊಂಚ ಫೈನ್ ಕಟ್ಟಲೂ ತಯಾರಿದ್ದೆವು. ಆ ಕಾರಣಕ್ಕಾಗಿಯೇ ನಿಮಗೆ ಏನು ಸ್ಲೆಡ್ಜ್ ಮಾಡಬೇಕು ಅನಿಸುತ್ತದೆಯೋ ಅದನ್ನು ಮಾಡಿ ಅಂಪೈರ್‌ಗಳು ಅಥವಾ ರೆಫ್ರಿಗಳಿಂದ ಸಮಸ್ಯೆ ಎದುರಾದರೇ ಪಂದ್ಯ ಮುಗಿದ ಮೇಲೆ ನೋಡಿಕೊಳ್ಳೋಣ ಎಂದು ಹೇಳಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
