ರೋಹಿತ್ ಶರ್ಮಾ ವಾರ್ನಿಂಗ್ ನೀಡಿದ್ದರಿಂದಲೇ ಉಳಿಯಿತು ಟೀಂ ಇಂಡಿಯಾ ಕ್ರಿಕೆಟಿಗನ ಪ್ರಾಣ..!
ತಮ್ಮ ಕಾಳಜಿಯಿಂದ ತಂಡದ ಯುವ ಆಟಗಾರನ ಪ್ರಾಣ ಕಾಪಾಡಿದ್ದಾರೆ. ಅವ್ರ, ತಂದೆಗೆ ಕೊಟ್ಟ ಮಾತಿನಂತೆ ಆ ಆಟಗಾರನಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದಾರೆ.
ಬೆಂಗಳೂರು(ಮಾ.11) ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಯುವ ಆಟಗಾರನ ಪ್ರಾಣ ಉಳಿಸಿದ್ದಾರೆ. ಆವತ್ತು ರೋಹಿತ್ ಅದೊಂದು ವಾರ್ನಿಂಗ್ ನೀಡದೇ ಇದ್ರೆ, ಇವತ್ತು ಈ ಆಟಗಾರ ಆಸ್ಪತ್ರೆಯ ಡೆತ್‌ಬೆಡ್ನಲ್ಲಿ ಮಲಗಿರುತ್ತಿದ್ದ. ಅಷ್ಟಕ್ಕೂ ಏನದು ಮ್ಯಾಟರ್ ಅಂತೀರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ...!
ಟೀಂ ಇಂಡಿಯಾ ಆಟಗಾರನ ಪ್ರಾಣ ಉಳಿಸಿದ ರೋಹಿತ್..!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿಗೆ ರೋಹಿತ್ ಶರ್ಮಾ ನಾಯಕತ್ವವೂ ಪ್ರಮುಖ ಕಾರಣ. ಮೊದಲ ಟೆಸ್ಟ್ ಸೋತಾಗ, ಹಿಟ್‌ಮ್ಯಾನ್ ಕ್ಯಾಪ್ಟೆನ್ಸಿಯ ಬಗ್ಗೆ ಟೀಕೆಗಳು ಕೇಳಿಬಂದಿದ್ವು. ಆದ್ರೆ, ಸತತ 4 ಟೆಸ್ಟ್ ಗೆದ್ದು ಟೀಕೆಗಳಿಗೆ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ. ತಮ್ಮ ನಾಯಕತ್ವದ ಸಾಮರ್ಥ್ಯ ವನ್ನ ಪ್ರೂವ್ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾಳಜಿಯಿಂದ ತಂಡದ ಯುವ ಆಟಗಾರನ ಪ್ರಾಣ ಕಾಪಾಡಿದ್ದಾರೆ. ಅವ್ರ, ತಂದೆಗೆ ಕೊಟ್ಟ ಮಾತಿನಂತೆ ಆ ಆಟಗಾರನಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದಾರೆ.
RCB ಫ್ರಾಂಚೈಸಿಗೆ ದುಡ್ಡೇ ದೊಡ್ಡಪ್ಪ..! CSK ನೋಡಿ ಕಲಿಯಬೇಕಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಯೆಸ್, ನೀವು ಕೇಳುತ್ತಿರೋದು ನಿಜ..! ರೋಹಿತ್ ಯಂಗ್‌ಸ್ಟರ್ ಸರ್ಫರಾಜ್ ಖಾನ್ ಪ್ರಾಣ ಕಾಪಾಡಿದ್ದಾರೆ. ಅದ್ಹೇಗೆ ಅಂದ್ರೆ, ಸರ್ಫರಾಜ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ರು. ಈ ವೇಳೆ ಶೋಯೆಬ್ ಬಶೀರ್ ಹೊಡೆದ ಶಾಟ್ನಿಂದ ಬಾಲ್, ರಾಕೆಟ್ ವೇಗದಲ್ಲಿ ಸರ್ಫರಾಜ್ ತಲೆಗೆ ತಗುಲಿತು. ಅದೃಷ್ಟವಶಾತ್, ಸರ್ಫರಾಜ್ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಾಯದಿಂದ ಪಾರಾದರು.
And that’s why Rohit Bhai said “Hero banne ki zaroorat naheen hai” pic.twitter.com/41tsvFUXrg
— Vishal Misra (@vishalmisra) March 9, 2024
4ನೇ ಟೆಸ್ಟ್‌ನಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಸರ್ಫರಾಜ್ ಖಾನ್ ಸಿಲ್ಲಿ ಪಾಯಿಂಟ್ನಲ್ಲಿ ಹೆಲ್ಮೆಟ್ ಇಲ್ಲದೇ ಫೀಲ್ಡಿಂಗ್ ಮಾಡಲು ರೆಡಿಯಾಗಿದ್ರು. ಈ ವೇಳೆ ರೋಹಿತ್ ಇಲ್ಲಿ ಹೀರೋಗಿರಿ ಎಲ್ಲಾ ಬೇಡ, ಹೆಲ್ಮೆಟ್ ಹಾಕೋ ಅಂತ ಖಡಕ್ ಆಗಿ ವಾರ್ನಿಂಗ್ ಮಾಡಿದ್ರು. ಅಂದು ರೋಹಿತ್ ಶರ್ಮಾ ನೀಡಿದ ವಾರ್ನಿಂಗ್‌ನಿಂದಲೇ, 5ನೇ ಟೆಸ್ಟ್‌ನಲ್ಲಿ ಸರ್ಫರಾಜ್ ಹೆಲ್ಮೆಟ್ ಧರಿಸಲು ಕಾರಣವಾಯ್ತು ಅಂದ್ರೆ ತಪ್ಪಿಲ್ಲ.
🔊 Hear this! Rohit does not want Sarfaraz to be a hero?🤔#INDvsENG #IDFCFirstBankTestSeries #BazBowled #JioCinemaSports pic.twitter.com/ZtIsnEZM67
— JioCinema (@JioCinema) February 25, 2024
ಅಪ್ಪಟ ಕನ್ನಡ ಮಾತಾಡಿದ RCB ಮನೆ ದೇವ್ರು ಎಬಿ ಡಿವಿಲಿಯರ್ಸ್..! ವಿಡಿಯೋ ವೈರಲ್
ಸರ್ಫರಾಜ್ ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ರೋಹಿತ್..!
ಸರ್ಫರಾಜ್ ಖಾನ್ ತಂದೆ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ರೋಹಿತ್ ಉಳಿಸಿಕೊಂಡಿದ್ದಾರೆ. ಸರ್ಫರಾಜ್ ಇದೇ ಸರಣಿಯ 3ನೇ ಟೆಸ್ಟ್ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ರು. ಈ ವೇಳೆ ಸರ್ಫರಾಜ್ ತಂದೆ ನೌಷದ್ ಖಾನ್, ನನ್ನ ಮಗನ ಜವಾಬ್ದಾರಿ ನಿಮ್ದೇ ಅಂತ ಹೇಳಿದ್ರು. ಆ ವೇಳೆ ರೋಹಿತ್ ನೀವೇನು ಚಿಂತೆ ಮಾಡ್ಬೇಡಿ ನಾನಿದ್ದೀನಿ ಅಂತ ಮಾತು ಕೊಟ್ಟಿದ್ರು. ಆ ಮಾತನ್ನ ರೋಹಿತ್ ಸರಣಿಯುದ್ಧಕ್ಕೂ ಚಾಚೂ ತಪ್ಪದೇ ಪಾಲಿಸಿದ್ರು. ಪ್ರತಿ ಹಂತದಲ್ಲೂ ಸರ್ಫರಾಜ್ ಖಾನ್ ಬಗ್ಗೆ ಕಾಳಜಿವಹಿಸಿದ್ರು.
'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್
ಪಾದಾರ್ಪಣೆ ಟೆಸ್ಟ್‌ನಲ್ಲಿ ಸರ್ಫರಾಜ್ ಅರ್ಧಶತಕ ಸಿಡಿಸಿದಾಗ ರೋಹಿತ್ ಚಪ್ಪಾಳೆ ತಟ್ಟಿ ಅಭಿನಂದಿಸಿದ್ರು. ರನೌಟ್ ಆದಾಗ ಡ್ರೆಸ್ಸಿಂಗ್ ರೂಮ್ನಲ್ಲಿ ಕ್ಯಾಪ್ ಬಿಸಾಡಿ, ಬೇಸರ ಹೊರಹಾಕಿದ್ರು. ಒಟ್ಟಿನಲ್ಲಿ ರೋಹಿತ್‌ನಂತ ನಾಯಕ ಸಿಕ್ಕಿರೋದು, ಟೀಂ ಇಂಡಿಯಾ ಯಂಗ್ಸ್ಟರ್ಗಳ ಅದೃಷ್ಟ. ಈ ಯಂಗ್‌ಸ್ಟರ್ಸ್ ರೋಹಿತ್ ನಾಯಕತ್ವದಲ್ಲಿ ಹಿಂಗೆ ಅಬ್ಬರಿಸಲಿ ತಂಡದ ಗೆಲುವಿನಲ್ಲಿ ಮಿಂಚಲಿ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್