ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮೂರು ವರ್ಷಗಳ ಹಿಂದೆ ಗ್ರೇಡ್ ಕ್ರಿಕೆಟರ್ ಪಾಡ್‌ಕಾಸ್ಟ್‌ನಲ್ಲಿ ಕೊಹ್ಲಿ ಕುರಿತಾಗಿ ಮಾತನಾಡಿದ್ದರು. ಆದರೆ ಅದು ಹೇಗೆ ತಮಗೆ ತಿರುಗುಬಾಣವಾಯಿತು ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ.
ನ್ಯೂಯಾರ್ಕ್: ಸದ್ಯ ಅಮೆರಿಕದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಹೀಗಿರುವಾಗಲೇ ಈ ಹಿಂದೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ವಿರಾಟ್ ಕೊಹ್ಲಿಯನ್ನು ಕೆಣಕಿದ ವಿಡಿಯೋವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮೂರು ವರ್ಷಗಳ ಹಿಂದೆ ಗ್ರೇಡ್ ಕ್ರಿಕೆಟರ್ ಪಾಡ್‌ಕಾಸ್ಟ್‌ನಲ್ಲಿ ಕೊಹ್ಲಿ ಕುರಿತಾಗಿ ಮಾತನಾಡಿದ್ದರು. ಆದರೆ ಅದು ಹೇಗೆ ತಮಗೆ ತಿರುಗುಬಾಣವಾಯಿತು ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ.
"ನೀವು ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಬದುಕಿತ್ತಿದ್ದೀರಾ ಅಂದರೆ ನಿಮಗೆ ಇದರ ಅರಿವಾಗಿರಬೇಕು. ವಿರಾಟ್ ಕೊಹ್ಲಿ ಬಗ್ಗೆ ನೀವು ಏನೆನ್ನಾದರೂ ಹೇಳಿ ನೋಡಿ, ನನ್ನದೇ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. "ಅವರೊಬ್ಬ ಅತ್ಯುತ್ತಮ ಆಟಗಾರ. ಆದರೆ ಈ ಬಾರಿ ಅವರು ಶತಕ ಬಾರಿಸುವುದಿಲ್ಲ. ಏಕೆಂದರೆ ಅವರೊಬ್ಬ ಗನ್ ಪ್ಲೇಯರ್" ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದರು. ಇದಾಗಿ ಆರು ತಿಂಗಳೊಳಗಾಗಿ ವಿರಾಟ್ ಕೊಹ್ಲಿ ಒಂದು ಶತಕ ಬಾರಿಸಿದ್ದರು. ಆಗ ನನ್ನ ಫೋನ್ ಮೆಸೇಜ್‌ಗಳಿಂದ ತುಂಬಿ ಹೋಗಿತ್ತು ಎಂದು ಹೇಳಿದ್ದರು.
ಧೋನಿಗೆ ತಂತ್ರಗಾರಿಕೆ ಇಲ್ಲ ಎಂದು ನಿತೀಶ್ ರೆಡ್ಡಿ..! ವಿವಾದ ಮೈಮೇಲೆ ಎಳೆದುಕೊಂಡು 'ಉದಯೋನ್ಮುಖ ಕ್ರಿಕೆಟಿಗ'
ಪ್ಯಾಟ್ ಕಮಿನ್ಸ್ ತಾವು 2018ರಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ನೀಡಿದ್ದ ಹೇಳಿಕೆಯನ್ನು ಮೆಲುಕು ಹಾಕಿದ್ದಾರೆ. ಭಾರತ ಕ್ರಿಕೆಟ್ ತಂಡವು 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮುನ್ನ ಕೊಹ್ಲಿ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿದ್ದರು. ಆದರೆ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಕೊಹ್ಲಿ ಶತಕದ ಹೊರತಾಗಿಯೂ ಆಸೀಸ್ ಎದುರು ಭಾರತ 146 ರನ್ ಅಂತರದ ಸೋಲು ಕಂಡಿತ್ತು. ಆದರೆ ಕೊಹ್ಲಿ ಶತಕ ಬಾರಿಸಲು ಬಿಡಲ್ಲ ಎಂದಿದ್ದ ಕಮಿನ್ಸ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು.
2018-19ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪೈಕಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪರ್ತ್ ಟೆಸ್ಟ್‌ನಲ್ಲಿ ಮಾತ್ರ ಸೋಲು ಕಂಡಿತ್ತು. ಆ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಯಿತು. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 31 ರನ್ ಅಂತರದ ಗೆಲುವು ಸಾಧಿಸಿತ್ತು. ಇದಾದ ಬಳಿಕ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 137 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಸಿಡ್ನಿಯಲ್ಲಿ ನಡೆದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿತ್ತು.
ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು. ಇನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಮಿನ್ಸ್ ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುವುದನ್ನು ಕಂಗೆಟ್ಟ ಅವರು, ನನ್ನ ಪ್ರಕಾರ ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಮಾಡಲು ಕೆಲಸವಿಲ್ಲ ಅನಿಸುತ್ತೆ ಎಂದು ಬೇಸರ ಹೊರಹಾಕಿದ್ದರು.
