ಈ ವೇಳೆ ಕಚೇರಿಯಲ್ಲಿ ಇಟ್ಟಿರುವ ವಿಶ್ವಕಪ್‌ ಟ್ರೋಫಿಯನ್ನು ಮುಟ್ಟಿ ಧೋನಿ ಭಾವುಕರಾದರು ಎಂದು ತಿಳಿದುಬಂದಿದೆ. ಧೋನಿ ಟ್ರೋಫಿಯನ್ನು ಮುಟ್ಟುತ್ತಿರುವ ಫೋಟೋಗಳನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿವೆ.

ಮುಂಬೈ(ಏ.14): 2011ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಎಂ.ಎಸ್‌.ಧೋನಿ, ಶನಿವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ ಪಂದ್ಯವನ್ನು ಆಡಲಿದೆ. ಶನಿವಾರ ಎಂ.ಎಸ್‌.ಧೋನಿ, ವಾಂಖೇಡೆ ಕ್ರೀಡಾಂಗಣಕ್ಕೆ ಅಭ್ಯಾಸ ನಡೆಸಲು ಆಗಮಿಸಿದ್ದರು.

ಈ ವೇಳೆ ಕಚೇರಿಯಲ್ಲಿ ಇಟ್ಟಿರುವ ವಿಶ್ವಕಪ್‌ ಟ್ರೋಫಿಯನ್ನು ಮುಟ್ಟಿ ಧೋನಿ ಭಾವುಕರಾದರು ಎಂದು ತಿಳಿದುಬಂದಿದೆ. ಧೋನಿ ಟ್ರೋಫಿಯನ್ನು ಮುಟ್ಟುತ್ತಿರುವ ಫೋಟೋಗಳನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿವೆ. ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದು 28 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಟ್ಟಿತ್ತು.

IPL 2024 ಪಂಜಾಬ್ ಎದುರು ಕೊನೆ ಓವರ್‌ ಥ್ರಿಲ್ಲರ್‌ ಗೆದ್ದ ರಾಜಸ್ಥಾನ ರಾಯಲ್ಸ್‌!

Scroll to load tweet…
Scroll to load tweet…

ನುವಾನ್‌ ಕುಲಶೇಖರ ಅವರ ಎಸೆತವನ್ನು ಸಿಕ್ಸರ್‌ಗಟ್ಟಿದ್ದ ಧೋನಿ, ಭಾರತವನ್ನು ವಿಶ್ವ ಚಾಂಪಿಯನ್‌ಪಟ್ಟಕ್ಕೇರಿಸಿದ್ದರು. ಧೋನಿಯ ಆ ಸಿಕ್ಸರ್‌ ಅನ್ನು ಕ್ರಿಕೆಟ್‌ ಅಭಿಮಾನಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ.

ಒಂದು ದಶಕದಿಂದ ಗೆದ್ದಿಲ್ಲ ಐಸಿಸಿ ಟ್ರೋಫಿ:

ಭಾರತ ಕ್ರಿಕೆಟ್‌ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿಯನ್ನು ಜಯಿಸಿತ್ತು. ಇದಾಗಿ ಒಂದು ದಶಕದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಫಲವಾಗಿಲ್ಲ. 2013ರಲ್ಲಿ ಇಂಗ್ಲೆಂಡ್‌ನಲ್ಲಿಯೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಅಚ್ಚರಿ ಮಾಹಿತಿ ಬಿಚ್ಚಿಟ್ಟ ಪತ್ನಿ ಸಂಜನಾ

ಇದಾದ ಬಳಿಕ 2014ರ ಟಿ20 ವಿಶ್ವಕಪ್, 2015ರ ಏಕದಿನ ವಿಶ್ವಕಪ್, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2019ರ ಏಕದಿನ ವಿಶ್ವಕಪ್, 2021ರ ಟಿ20 ವಿಶ್ವಕಪ್ ಸೇರಿದಂತೆ ಐಸಿಸಿ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡರೂ ಸಹಾ ಟೀಂ ಇಂಡಿಯಾ ನಾಕೌಟ್ ಹಂತದಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ