ಭಾನುವಾರದ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿಕೊಡುವ ಪ್ರಯತ್ನದಲ್ಲಿದ್ದರು. ವಿರಾಟ್ ಕೊಹ್ಲಿ ಮೊದಲ 6 ಎಸೆತದಲ್ಲೇ ಸ್ಪೋಟಕ 18 ರನ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದರು.
ಕೋಲ್ಕತಾ(ಏ.22): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಆತಿಥೇಯ ಕೆಕೆಆರ್ ತಂಡವು ಒಂದು ರನ್ ರೋಚಕ ಜಯ ಸಾಧಿಸಿದೆ. ಇನ್ನು ಇದೇ ಪಂದ್ಯದ ಮೂರನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟ್ ಆದ ರೀತಿ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಭಾನುವಾರದ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ಒದಗಿಸಿಕೊಡುವ ಪ್ರಯತ್ನದಲ್ಲಿದ್ದರು. ವಿರಾಟ್ ಕೊಹ್ಲಿ ಮೊದಲ 6 ಎಸೆತದಲ್ಲೇ ಸ್ಪೋಟಕ 18 ರನ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದರು. ಆದರೆ ಹರ್ಷಿತ್ ರಾಣಾ ಎಸೆದ ಮೂರನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಚಿತ್ರ ರೀತಿಯಲ್ಲಿ ವಿಕೆಟ್ ಒಪ್ಪಿಸಿದರು. ಹರ್ಷಿತ್ ರಾಣಾ ಎಸೆದ ನಿಧಾನಗತಿಯ ಲೋ ಫುಲ್ ಟಾಸ್ ಗತಿಯನ್ನು ಗ್ರಹಿಸದ ವಿರಾಟ್ ಕೊಹ್ಲಿ, ಕಾಟ್ ಅಂಡ್ ಬೌಲ್ಡ್ ಆಗಿ ವಿಕೆಟ್ ಕೈಚೆಲ್ಲಿದರು.
'ನಿಮ್ಮ ಮೇಲಾಣೆ, ಪ್ಲೀಸ್ ನಾನ್ಯಾವತ್ತು....': ವಿರಾಟ್ ಕೊಹ್ಲಿ ಬಳಿ ಅಮೂಲ್ಯ ಗಿಫ್ಟ್‌ಗೆ ಅಂಗಲಾಚಿದ ರಿಂಕು ಸಿಂಗ್
ಹರ್ಷಿತ್ ರಾಣಾ ಎಸೆದ ಫುಲ್‌ಟಾಸ್ ಚೆಂಡಿನ ಗತಿಯನ್ನು ವಿರಾಟ್ ಕೊಹ್ಲಿ ಗ್ರಹಿಸಲಿಲ್ಲ. ಹೀಗಾಗಿ ಕೊಹ್ಲಿಯ ಬ್ಯಾಟ್ ಅಂಚನ್ನು ಸವರಿದ ಚೆಂಡು ಬೌಲರ್ ರಾಣಾ ಕೈಸೇರಿತು. ತಕ್ಷಣ ಕೊಹ್ಲಿ ಪೆವಿಲಿಯನ್‌ಗೆ ಹೋಗಲಿಲ್ಲ. ನೋಬಾಲ್ ವಿಚಾರವಾಗಿ ಅಂಪೈರ್ ಜತೆ ಚರ್ಚಿಸಿದರು. ಆಗ ಆನ್‌ಫೀಲ್ಡ್ ಅಂಪೈರ್ ತೀರ್ಮಾನಕ್ಕಾಗಿ ಥರ್ಡ್ ಅಂಪೈರ್ ಮೊರೆ ಹೋದರು. ಆಗ ಅಂಪೈರ್, ವಿರಾಟ್ ಕೊಹ್ಲಿ ಪಾಪಿಂಗ್ ಕ್ರೀಸ್‌ನಿಂದ ಹೊರಗೆ ನಿಂತುಕೊಂಡಿದ್ದರಿಂದ ಹಾಗೂ ಬಾಲ್ ಟ್ರ್ಯಾಕಿಂಗ್ ಟೆಕ್ನಾಲಜಿಯಲ್ಲೂ ವಿರಾಟ್ ಕೊಹ್ಲಿ ಪಾಪಿಂಗ್ ಕ್ರೀಸ್‌ನೊಳಗಿದ್ದಿದ್ದರೇ, ಅದು ಫುಲ್ ಟಾಸ್ ಚೆಂಡು ಎಂದು ಸ್ಪಷ್ಟವಾಗಿ ಗೋಚರಿಸುತ್ತಿದ್ದಿದ್ದರಿಂದ ಥರ್ಡ್ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು.
IPL 2024 ಗುಜರಾತ್ ಟೈಟಾನ್ಸ್ ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಶರಣು
ಥರ್ಡ್ ಅಂಪೈರ್ ತೀರ್ಪು ಔಟ್ ಎಂದು ಸ್ಕ್ರೀನ್ ಮೇಲೆ ಬಿತ್ತರವಾದ ಬೆನ್ನಲ್ಲೇ ಮೈದಾನದಲ್ಲೇ ಅಂಪೈರ್ ಮೇಲೆ ಕೊಹ್ಲಿ ಅಸಮಾಧಾನ ಹೊರಹಾಕುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಅಷ್ಟಕ್ಕೂ ವೈಸ್ಟ್ ಹೈ ನೋಬಾಲ್ ಬಗ್ಗೆ ಐಸಿಸಿ ರೂಲ್ಸ್ ಏನು..?
ಐಸಿಸಿ ರೆಗ್ಯುಲೇಷನ್ 41.7 ರೂಲ್ ಪ್ರಕಾರ, "ಸೊಂಟದ ಮೇಲೆ ಚೆಂಡು ನೆಲಕ್ಕೆ ಪಿಚ್ ಬೀಳದೇ ಅಪಾಯಕಾರಿ ಹಾಗೂ ಕ್ರಮವಲ್ಲದ ಎಸೆತವನ್ನು ನೋಬಾಲ್ ಎಂದು ತೀರ್ಮಾನಿಸಬೇಕು" ಎಂದು ರೂಲ್‌ನಲ್ಲಿದೆ. ಆದರೆ ಚೆಂಡು ಸೊಂಟದ ಮೇಲಿನ ಫುಲ್ ಟಾಸ್ ನೋಬಾಲ್ ಎಂದು ಘೋಷಿಸಬೇಕಿದ್ದರೇ, ಬ್ಯಾಟರ್ ಪಾಪಿಂಗ್ ಕ್ರೀಸ್‌ನೊಳಗೆ ಇರಬೇಕು. ಒಂದು ವೇಳೆ ಬೌಲರ್ ಬೌಲಿಂಗ್ ಮಾಡುವ ಮುನ್ನ ಬ್ಯಾಟರ್ ಪಾಪಿಂಗ್ ಕ್ರೀಸ್‌ನಿಂದ ಹೊರಗೆ ಬಂದರೆ ಸೊಂಟದ ಮೇಲೆ ಚೆಂಡು ಇದ್ದರೂ ಅದನ್ನು ನೋ ಬಾಲ್ ಎಂದು ಪರಿಗಣಿಸಲಾಗುವುದಿಲ್ಲ. ಕೊಹ್ಲಿ ಪಾಪಿಂಗ್ ಕ್ರೀಸ್‌ನಿಂದ ಹೊರಗೆ ನಿಂತು ಬ್ಯಾಟ್ ಮಾಡುತ್ತಿದ್ದರಿಂದ ಅವರನ್ನು ಅಂಪೈರ್ ಔಟ್ ಎಂದು ಘೋಷಿಸಿದರು.
