ಬಿಗ್ ಹಿಟ್ಟರ್ ರಿಂಕು ಸಿಂಗ್ ಕೆಕೆಆರ್ ನೂತನ ಕ್ಯಾಪ್ಟನ್? ಇಲ್ಲಿದೆ ನೋಡಿ ಹೊಸ ಅಪ್‌ಡೇಟ್

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

IPL 2025 Mega Auction KKR look at Rinku Singh as Shreyas Iyer replacement in  Captain role kvn

ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಯಾಕೆಂದರೆ ಮೆಗಾ ಹರಾಜಿಗೂ ಮುನ್ನವೇ ಕೆಕೆಆರ್ ಫ್ರಾಂಚೈಸಿಯು, ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಿಂಕು ಸಿಂಗ್ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಒಂದೊಂದೇ ಅಚ್ಚರಿಗಳು ಹೊರಬೀಳಲಾರಂಭಿಸಿವೆ. ಇದೀಗ ಶ್ರೇಯಸ್ ಅಯ್ಯರ್ ಅವರಿಂದ ತೆರವಾದ ಕೆಕೆಆರ್ ತಂಡದ ನಾಯಕ ಹುದ್ದೆಗೆ ಬಿಗ್ ಹಿಟ್ಟರ್ ರಿಂಕು ಸಿಂಗ್ ನೇಮಕವಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಲಾರಂಭಿಸಿದೆ. ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ರಿಲೀಸ್ ಮಾಡಿದ ಬೆನ್ನಲ್ಲೇ ಕೆಕೆಆರ್ ತಂಡವು ರಿಂಕು ಅವರಿಗೆ ನಾಯಕ ಪಟ್ಟ ಕಟ್ಟುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆಸ್ಟ್ರೇಲಿಯಾದ ಪತ್ರಿಕೆಗಳಲ್ಲಿ ವಿರಾಟ್ ಕೊಹ್ಲಿಯದ್ದೇ ಕಾರುಬಾರು!

ಎಡಗೈ ಸ್ಪೋಟಕ ಬ್ಯಾಟರ್ ಆಗಿರುವ ರಿಂಕು ಸಿಂಗ್, ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್ ತಂಡದ ಪರವೇ ಕಣಕ್ಕಿಳಿಯುತ್ತಾ ಬಂದಿದ್ದಾರೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿ ಕೂಡಾ ರಿಂಕು ಸಿಂಗ್ ಅವರ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದೆ. ಈ ಕಾರಣಕ್ಕಾಗಿಯೇ ಈ ಹಿಂದಿನ ಆವೃತ್ತಿಯಲ್ಲಿ 55 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಿದ್ದ ರಿಂಕು ಸಿಂಗ್ ಅವರಿಗೆ ಇದೀಗ ಕೆಕೆಆರ್ ಫ್ರಾಂಚೈಸಿ ಬರೋಬ್ಬರಿ 13 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. ಇನ್ನು ರಿಂಕು ಸಿಂಗ್ ಯುಪಿ ಟಿ20 ಲೀಗ್‌ ಟೂರ್ನಿಯಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸಿದ ಅನುಭವನನ್ನು ಹೊಂದಿದ್ದಾರೆ. ಹೀಗಾಗಿ ರಿಂಕು ಸಿಂಗ್ ಕೆಕೆಆರ್ ತಂಡದ ಸಂಭಾವ್ಯ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ರಿಂಕು ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಇದುವರೆಗೂ 46 ಪಂದ್ಯಗಳನ್ನಾಡಿದ್ದು, 30ರ ಸರಾಸರಿಯಲ್ಲಿ 893 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಸ್ಪೋಟಕ ಅರ್ಧಶತಕಗಳು ಸೇರಿವೆ. ಕಳೆದ ಆರು ವರ್ಷಗಳಿಂದಲೂ ರಿಂಕು ಸಿಂಗ್ ಕೆಕೆಆರ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ರಿಂಕು ಮೇಲೆ ಕೆಕೆಆರ್ ಮ್ಯಾನೇಜ್‌ಮೆಂಟ್‌ ಅಪಾರ ನಂಬಿಕೆ ಇಟ್ಟುಕೊಂಡಿದೆ. 

ಶಾರುಖ್ ಖಾನ್ ಯಾರಂದೇ ಪ್ಯಾಟ್ ಕಮಿನ್ಸ್‌ಗೆ ಗೊತ್ತಿರಲಿಲ್ಲವಂತೆ!

ಕೆಕೆಆರ್ ತಂಡದ ಪರ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದ ರಿಂಕು ಸಿಂಗ್, ಟೀಂ ಇಂಡಿಯಾಗೂ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.  ಇದುವರೆಗೂ ಭಾರತ ಪರ 28 ಟಿ20 ಪಂದ್ಯಗಳನ್ನಾಡಿರುವ ರಿಂಕು ಸಿಂಗ್ 50ರ ಸರಾಸರಿಯಲ್ಲಿ 499 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಸದ್ಯ ರಿಂಕು ಸಿಂಗ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, 4 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.
 

Latest Videos
Follow Us:
Download App:
  • android
  • ios