17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕಳೆದ ಐದು ಪಂದ್ಯಗಳಿಂದ ಏಕಾಂಗಿಯಾಗಿ 316 ರನ್ ಬಾರಿಸಿದ್ದಾರೆ. ಇನ್ನುಳಿದ ಆರ್‌ಸಿಬಿಯ ಎಲ್ಲಾ ಆಟಗಾರರು ಸೇರಿ ಇದುವರೆಗೂ 496 ರನ್ ಬಾರಿಸಿದ್ದಾರೆ.
ಜೈಪುರ(ಏ.07): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೀನಾಯ ಸೋಲು ಅನುಭವಿಸಿತು. ಇದರ ಬೆನ್ನಲ್ಲೇ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೌದು, ಇಲ್ಲಿನ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎಂಟನೇ ಶತಕ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಅಜೇಯ 113 ರನ್ ಸಿಡಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದರು. ಇನ್ನು ಇದೇ ಪಂದ್ಯದಲ್ಲಿ ಐಪಿಎಲ್‌ನಲ್ಲಿ 7500 ರನ್ ಗಡಿ ದಾಟುವ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನ್ನುವ ಅಪರೂಪದ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
IPL 2024: ಗುಜರಾತ್ ಟೈಟಾನ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್ ಸನ್ನದ್ದ
ವಿರಾಟ್ ಕೊಹ್ಲಿ ಒಂದು ತುದಿಯಲ್ಲಿ 72 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ 113 ರನ್ ಸಿಡಿಸಿದರು. ಆದರೆ ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ದೊರೆಯಲಿಲ್ಲ. ಪರಿಣಾಮ ಆರ್‌ಸಿಬಿ ಮೂರು ವಿಕೆಟ್ ಕಳೆದುಕೊಂಡು 183 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಈ ಸ್ಪರ್ಧಾತ್ಮಕ ಮೊತ್ತವನ್ನು ರಕ್ಷಿಸಿಕೊಳ್ಳಲು ಆರ್‌ಸಿಬಿ ಬೌಲರ್‌ಗಳು ವಿಫಲವಾದರು. ಹೀಗಾಗಿ ಆರ್‌ಸಿಬಿ ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಜತೆಗೆ ಒಟ್ಟಾರೆ ನಾಲ್ಕನೇ ಸೋಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದೆ.
ವಿರಾಟ್ ಕೊಹ್ಲಿಯನ್ನು ಆರ್‌ಸಿಬಿಯಿಂದ ಕೈಬಿಡಲು ಆಗ್ರಹ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಆವೃತ್ತಿಗಳನ್ನು ಆಡಿದ್ದರೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿ ತಂಡದ ಭಾಗವಾಗಿದ್ದು, ಪ್ರತಿ ಬಾರಿಯೂ ತಂಡದ ಗೆಲುವಿಗೆ ಶಕ್ತಿ ಮೀರಿ ಹೋರಾಡುತ್ತಲೇ ಇದ್ದಾರೆ. ಹೀಗಿದ್ದೂ ಉಳಿದ ಆಟಗಾರರ ವೈಫಲ್ಯತೆಯಿಂದಾಗಿ ಆರ್‌ಸಿಬಿ ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಪ್ರೀತಿಯ ಆರ್‌ಸಿಬಿ, ದಯವಿಟ್ಟು ನೀವು ಮುಂದಿನ ವರ್ಷಕ್ಕೆ ವಿರಾಟ್ ಕೊಹ್ಲಿಯನ್ನು ರೀಟೈನ್ ಮಾಡಿಕೊಳ್ಳಬೇಡಿ. ನಾವು ಅವರನ್ನು ಈ ರೀತಿ ಇರುವುದನ್ನು ನೋಡಲು ಬಯಸುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು
ಮತ್ತೋರ್ವ ನೆಟ್ಟಿಗ, ವಿರಾಟ್ ಕೊಹ್ಲಿ ಇನ್ನೂ ಒಳ್ಳೆಯ ಫ್ರಾಂಚೈಸಿಯಲ್ಲಿ ಆಡುವುದು ಉತ್ತಮ. ಈ ರೀತಿ ನೋವಿನಲ್ಲಿರುವುದು ನೋಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕಳೆದ ಐದು ಪಂದ್ಯಗಳಿಂದ ಏಕಾಂಗಿಯಾಗಿ 316 ರನ್ ಬಾರಿಸಿದ್ದಾರೆ. ಇನ್ನುಳಿದ ಆರ್‌ಸಿಬಿಯ ಎಲ್ಲಾ ಆಟಗಾರರು ಸೇರಿ ಇದುವರೆಗೂ 496 ರನ್ ಬಾರಿಸಿದ್ದಾರೆ.
