ತೆಲಂಗಾಣದ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

ಟೀಂ ಇಂಡಿಯಾ ಮಾರಕ ವೇಗಿ ಮೊಹಮ್ಮದ್ ಸಿರಾಜ್ ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 

Indian Cricketer Mohammed Siraj Takes Charge As DSP At Telangana DGP Office kvn

ತೆಲಂಗಾಣ: ಟೀಂ ಇಂಡಿಯಾ ಮಾರಕ ವೇಗಿ ಹಾಗೂ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಮೊಹಮ್ಮದ್ ಸಿರಾಜ್, ಇದೀಗ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ತೆಲಂಗಾಣದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಡಿಜಿಪಿ) ಅವರಿಂದ ಸಿರಾಜ್ ಡಿಸಿಪಿಯಾಗಿ ಚಾರ್ಜ್ ಪಡೆದುಕೊಂಡಿದ್ದಾರೆ.

ಕಳೆದ ಆಗಸ್ಟ್ 02ರಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಬಾಕ್ಸರ್ ನಿಖಾತ್ ಝರೀನ್ ಹಾಗೂ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ಗೆ ತಮ್ಮ ತಮ್ಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಸಿರಾಜ್, ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್‌ಗೆ ಸಂಸದ ಎಂ ಅನಿಲ್ ಕುಮಾರ್ ಯಾದವ್, ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಹಾಜರಿದ್ದರು. 

ಈ 8 ವಿಶ್ವದಾಖಲೆಗಳೇ ಸಾಕು ರೋಹಿತ್ ಶರ್ಮಾ ನಿಜವಾದ ಹಿಟ್‌ಮ್ಯಾನ್ ಅನ್ನೋಕೆ!

ಈ ಕುರಿತಂತೆ ಟ್ವೀಟ್‌ ಮಾಡಿರುವ ತೆಲಂಗಾಣ ಪೊಲೀಸರು, "ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ತೆಲಂಗಾಣದ ಡಿಎಸ್‌ಪಿಯಾಗಿ ನೇಮಕವಾಗಿದ್ದಾರೆ. ಅವರು ಕ್ರಿಕೆಟ್‌ನಲ್ಲಿ ತೋರಿದ ಸಾಧನೆ ಹಾಗೂ ನಮ್ಮ ರಾಜ್ಯವು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ಅವರು ಕ್ರಿಕೆಟಿಗರಾಗಿ ಮುಂದುವರೆಯಲಿದ್ದು, ಈ ಹೊಸ ಪಾತ್ರದ ಮೂಲಕ ಹಲವರಿಗೆ ಸ್ಪೂರ್ತಿಯಾಗಲಿದ್ದಾರೆ" ಎಂದು ಶುಭ ಹಾರೈಸಿದೆ.

ಇದೆಂಥಾ ದುಸ್ಥಿತಿ: 500+ ರನ್ ದಾಖಲಿಸಿಯೂ ಇಂಗ್ಲೆಂಡ್ ಎದುರು ಇನ್ನಿಂಗ್ಸ್‌ ಸೋಲು ಕಂಡ ಪಾಕಿಸ್ತಾನ!

ಇನ್ನು ಇದೇ ವೇಳೆ ಮೊಹಮ್ಮದ್ ಸಿರಾಜ್ ಕೂಡಾ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೊಹಮ್ಮದ್ ಸಿರಾಜ್, ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು

Latest Videos
Follow Us:
Download App:
  • android
  • ios