ಹಾರ್ದಿಕ್‌ ಪಾಂಡ್ಯ ಟಿ20ಯಲ್ಲಿ ವಿಶ್ವ ನಂ.1 ಆಲ್ರೌಂಡರ್‌..! ಈ ಸಾಧನೆ ಮಾಡಿದ ಮೊದಲ ಭಾರತೀಯ

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಇದೀಗ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Hardik Pandya becomes first Indian to be ranked No 1 T20I allrounder kvn

ದುಬೈ: ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತದ ಹಾರ್ದಿಕ್‌ ಪಾಂಡ್ಯ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಜಂಟಿ ನಂಬರ್‌ 1 ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಐಪಿಎಲ್‌ ವೇಳೆ ತಮ್ಮ ನಾಯಕತ್ವ, ಪ್ರದರ್ಶನದಿಂದಾಗಿ ಭಾರಿ ಟೀಕೆಗೊಳಗಾಗಿದ್ದ 30ರ ಹಾರ್ದಿಕ್‌, ಭಾರತದ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 2 ಸ್ಥಾನ ಪ್ರಗತಿ ಸಾಧಿಸಿ, ಶ್ರೀಲಂಕಾದ ಹಸರಂಗ ಜೊತೆ ಜಂಟಿ ನಂ.1 ಸ್ಥಾನದಲ್ಲಿದ್ದಾರೆ. ಅಕ್ಷರ್‌ ಪಟೇಲ್‌ 7 ಸ್ಥಾನ ಮೇಲಕ್ಕೇರಿ 12ನೇ ಸ್ಥಾನಕ್ಕೇರಿದ್ದಾರೆ.

ಇನ್ನು, ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ 12 ಸ್ಥಾನ ಜಿಗಿತ ಕಂಡು 12ನೇ ಸ್ಥಾನಕ್ಕೇರಿದ್ದಾರೆ. ಅಕ್ಷರ್‌ ಪಟೇಲ್‌ 7ನೇ, ಕುಲ್ದೀಪ್‌ ಯಾದವ್ ಜಂಟಿ 8ನೇ ಸ್ಥಾನಗಳಲ್ಲಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ ಯಾದವ್‌ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 40 ಪಂದ್ಯ!

ನವದೆಹಲಿ: 2024ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡ ಇದೇ ವಾರದಿಂದ 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲಿದೆ. ಹಿರಿಯ ಆಟಗಾರರಾದ ರೋಹಿತ್‌, ಕೊಹ್ಲಿ, ಜಡೇಜಾ ನಿವೃತ್ತಿಯಿಂದಾಗಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ಗೆ ಹೊಸ ತಂಡ ಕಟ್ಟುವ ಸವಾಲು ಎದುರಾಗಿದ್ದು, ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಿದ್ಧಗೊಳಿಸುವ ಕೆಲಸ ಆಗಬೇಕಿದೆ.

ಪ್ರಧಾನಿ ಮೋದಿ ಮೀಟ್ ಮಾಡಿದ ಟೀಂ ಇಂಡಿಯಾ, ಮುಂಬೈಗೆ ಮುಂದಿನ ಪಯಣ!

2023-2027ರ ಐಸಿಸಿ ಭವಿಷ್ಯದ ವೇಳಾಪಟ್ಟಿಯ ಪ್ರಕಾರ, 2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ತಂಡ 34 ಟಿ20 ಪಂದ್ಯ ನಿಗದಿಯಾಗಿದೆ. ಇದರ ಜೊತೆಗೆ ಸಮಯಾವಕಾಶ ನೋಡಿಕೊಂಡು ಮತ್ತಷ್ಟು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐಗೆ ಅವಕಾಶ ಇರಲಿದೆ. ಹೀಗಾಗಿ, ಮುಂದಿನ ವಿಶ್ವಕಪ್‌ ಸಿದ್ಧತೆಗೆ ಭಾರತ ತಂಡಕ್ಕೆ ಕನಿಷ್ಠ 40 ಪಂದ್ಯಗಳು ಸಿಗುವ ನಿರೀಕ್ಷೆ ಇದೆ.

2024-26ರ ವರೆಗಿನ ವೇಳಾಪಟ್ಟಿ (ಟಿ20)

* ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024

* ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿ (ತವರಿನಾಚೆ) - ಜುಲೈ 2024

* ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿ (ತವರಿನಲ್ಲಿ)- ಸೆಪ್ಟೆಂಬರ್‌ 2024

* ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ-ಫೆಬ್ರವರಿ 2025

* ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಸರಣಿ (ತವರಿನಾಚೆ) - ಆಗಸ್ಟ್‌ 2025

* ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿ (ತವರಿನಾಚೆ) - ಅಕ್ಟೋಬರ್‌ 2025

* ದ.ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ನವೆಂಬರ್‌ 2025

* ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ (ತವರಿನಲ್ಲಿ) - ಜನವರಿ 2026
 

Latest Videos
Follow Us:
Download App:
  • android
  • ios