ಹಾಲ್ ಆಫ್ ಫೇಮ್ ಪ್ರಶಸ್ತಿ ಸ್ವೀಕರಿಸಿದ ಎಬಿ ಡಿವಿಯರ್ಸ್ ಇದೀಗ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಎಬಿಡಿ ಕ್ರಿಕೆಟ್‌ಗೆ ನೀಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಎಬಿಡಿಗೆ ಪ್ರತಿಷ್ಠಿತ ಗೌರವ ದೊರಕಿರುವುದಕ್ಕೆ ಹಲವು ದಿಗ್ಗಜ ಕ್ರಿಕೆಟಿಗರು, ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದೆಲ್ಲದರ ನಡುವೆ ಆರ್‌ಸಿಬಿ ಮಾಡಿದ ಒಂದು ಟ್ವೀಟ್‌ಗೆ ಮಿಸ್ಟರ್ 360 ಖ್ಯಾತಿಯ ಎಬಿಡಿ ಕನ್ನಡದಲ್ಲೇ ಧನ್ಯವಾದ ಹೇಳುವ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಎಬಿ ಡಿವಿಲಿಯರ್ಸ್ ಮೂರು ಮಾದರಿಯಿಂದ ಸೇರಿ 20 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಹಲವಾರು ಬಾರಿ ಏಕಾಂಗಿಯಾಗಿ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಹಾಲ್ ಆಫ್ ಫೇಮ್ ಪ್ರಶಸ್ತಿ ತನ್ನದಾಗಿಸಿಕೊಂಡ ಜಗತ್ತಿನ 115ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ
ಪುಣೆ ಸ್ಟೇಡಿಯಂನಲ್ಲಿ ನೀರಿಲ್ಲ: ಫ್ಯಾನ್ಸ್ ಪರದಾಟ, ಹಿಡಿಶಾಪ! 100 ಮಿ.ಲೀ. ನೀರಿನ ಬಾಟಲಿಗೆ ₹80 ಸುಲಿಗೆ!
ಇನ್ನು ಎಬಿ ಡಿವಿಲಿಯರ್ಸ್ ಈ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿನೂತನವಾಗಿ ಶುಭಹಾರೈಸಿದೆ. "ಗೌರವಗಳು ಬರುತ್ತವೇ, ಹೋಗುತ್ತವೆ. ಆದರೆ ಈ ಫ್ರೇಮ್ ಇದೆಯಲ್ಲ, ಇದು ಎಂದೆಂದಿಗೂ ಅಜರಾಮರ. ಎಬಿಡಿ ನೀವಿದಕ್ಕೆ ಅರ್ಹರಾದವರು. ಎಂದು ಆರ್‌ಸಿಬಿ ಫ್ರಾಂಚೈಸಿಯು ಎಬಿಡಿ ಫೋಟೋ ಜತೆಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿತ್ತು.
ಇನ್ನು ಇದಕ್ಕೆ ಪ್ರತಿಯಾಗಿ ಎಬಿ ಡಿವಿಲಿಯರ್ಸ್, ಕನ್ನಡದಲ್ಲಿಯೇ "ಧನ್ಯವಾದಗಳು" ಎಂದು ಕೈಮುಗಿದು ಹಾರ್ಟ್ ಎಮೋಜಿಯನ್ನು ಬಳಸಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದು ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ಆಪತ್ಬಾಂದವ ಎಬಿಡಿ: 2011ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಎಬಿಡಿ ಹಲವಾರು ಬಾರಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಅದ್ಭುತ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಎಬಿಡಿಗೆ ಆರ್‌ಸಿಬಿ ಹಾಗೂ ಬೆಂಗಳೂರಿನ ಜತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.
Pune Test: ವಾಷಿಂಗ್ಟನ್ ಸುಂದರ್ ದಾಳಿಗೆ ಕಿವೀಸ್ ಛಿದ್ರ; ಮೊದಲ ದಿನವೇ ನ್ಯೂಜಿಲೆಂಡ್ ಆಲೌಟ್
ಇನ್ನು ಈ ಬಾರಿ ಎಬಿ ಡಿವಿಲಿಯರ್ಸ್ ಜತೆಗೆ ಭಾರತದ ಮಾಜಿ ಮಹಿಳಾ ಸ್ಪಿನ್ನರ್ ನೀತು ಡೇವಿಡ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಸರ್ ಅಲಿಸ್ಟರ್ ಕುಕ್ ಅವರಿಗೂ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
