Asianet Suvarna News Asianet Suvarna News

ವಿಕ್ಟರಿ ಪರೇಡ್‌ನಲ್ಲಿ ಹೃದಯ ಗೆದ್ದ ಟೀಂ ಇಂಡಿಯಾ, ನೂಕು ನುಗ್ಗಲಿನಲ್ಲಿ ಫ್ಯಾನ್ಸ್ ಚಪ್ಪಲಿ ಅನಾಥ!

ಟೀಂ ಇಂಡಿಯಾ ವಿಕ್ಟರಿ ಪರೇಡ್‌ನಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ಒಂದೆಡೆ ಜನಸಾಗರದ ನಡುವೆ ಟೀಂ ಇಂಡಿಯಾ ಯಾತ್ರೆ ನಡೆಸಿದರೆ ಮತ್ತೊಂದಡೆ ಸಾವಿರಾರು ಅಭಿಮಾನಿಗಳು ತಮ್ಮ ಚಪ್ಪಲಿ ಕಳೆದುಕೊಂಡಿದ್ದಾರೆ. ಇಂದು ಮರಿನ್ ಡ್ರೈವ್ ಸುತ್ತ ಮುತ್ತ ಚಪ್ಪಲಿಗಳ ರಾಶಿ ತುಂಬಿದೆ. 
 

Fans lost slippers who gathered along Team India victory parade route mumbai ckm
Author
First Published Jul 5, 2024, 11:55 AM IST

ಮುಂಬೈ(ಜು.05) ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಹಿಡಿದು ಮುಂಬೈನಲ್ಲಿ ವಿಜಯ ಯಾತ್ರೆ ನಡೆಸಿದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಲಕ್ಷಾಂತರ ಅಭಿಮಾನಿಗಳು ಮುಂಬೈನ ಮರಿನ್ ಡ್ರೈವ್ ಇಕ್ಕೆಲಗಳಲ್ಲಿ ಸೇರಿದ್ದರು. ವಿಜಯಿ ಯಾತ್ರೆಯಲ್ಲಿ ಟೀಂ ಇಂಡಿಯಾ ಎಲ್ಲರ ಮನಗೆದ್ದರೆ, ವಿಕ್ಟರಿ ಪರೇಡ್ ನೋಡಲು ಸೇರಿದ್ದ ಅಭಿಮಾನಿಗಳು ತಮ್ಮ ಚಪ್ಪಲಿ ಕಳೆದುಕೊಂಡಿದ್ದಾರೆ. ಜೂನ್ 4ರ ಸಂಜೆ ವಿಕ್ಟರಿ ಪರೇಡ್ ಅದ್ದೂರಿಯಾಗಿ ನಡೆದರೆ, ಜೂನ್ 5ರ ಬೆಳಗ್ಗೆ ಮರೀನ್ ಡ್ರೈವ್ ಸುತ್ತ ಮುತ್ತ ಚಪ್ಪಳಿಗಳ ರಾಶಿ ತುಂಬಿದೆ.

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನೂಕು ನುಕ್ಕಲುಗಳಲ್ಲಿ ಹಲವರ ಚಪ್ಪಲಿಗಳು ಕಿತ್ತು ಹೋಗಿದೆ. ಮತ್ತೆ ಕೆಲವರು ಮರ ಏರಲು ಚಪ್ಪಳಿಗಳನ್ನು ದಾರಿಯಲ್ಲೇ ಬಿಟ್ಟಿದ್ದಾರೆ. ಜನಸಾಗರದಲ್ಲಿ ಹಲವು ಅಭಿಮಾನಿಗಳ ಚಪ್ಪಲಿ ಕಳೆದುಹೋಗಿದೆ. ನಿನ್ನೆ ತಡ ರಾತ್ರಿ ಮರೀನ್ ಡ್ರೈವ್ ಸುತ್ತ ಮುತ್ತ ಚಪ್ಪಲಿಗಳೇ ತುಂಬಿ ಹೋಗಿತ್ತು. ಇಂದು ಮುಂಬೈ ಪಾಲಿಗೆ ಶುಚಿ ಕಾರ್ಯದಲ್ಲಿ ನಿರತವಾಗಿದೆ. ಸಾವಿರಾರು ಚಪ್ಪಳಿಗಳು ಬೀದಿಯಲ್ಲೇ ಅನಾಥವಾಗಿ ಬಿದ್ದಿದೆ.

ಮಣ್ಣಿನ ರುಚಿ ಹೇಗಿತ್ತು? ಟೀಂ ಇಂಡಿಯಾ ಜೊತೆ ಸಂವಾದದಲ್ಲಿ ರೋಹಿತ್‌ಗೆ ಮೋದಿ ಗೂಗ್ಲಿ!

ಮೂಲಗಳ ಪ್ರಕಾರ ಟೀಂ ಇಂಡಿಯಾ ವಿಕ್ಟರಿ ಪರೇಡ್ ವೀಕ್ಷಿಸಲು 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಂಡಿದ್ದರು. ಭದ್ರತೆಗಾಗಿ 5,000 ಪೋಲೀಸರ ನಿಯೋಜನೆ ಮಾಡಲಾಗಿತ್ತು. 

ಬಾರ್ಬಡೋಸ್‌ನಿಂದ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಆಗಮಿಸಿದ ಟೀಂ ಇಂಡಿಯಾ ನೇರವಾಗಿ ಪ್ರಧಾನಿ ನಿವಾಸಕ್ಕೆ ತೆರಳಿತ್ತು. ಪ್ರಧಾನಿ ಮೋದಿ ಜೊತೆ ಉಪಹಾರ ಸವಿದ ಆಟಗಾರರು ಬಳಿಕ ಸಂವಾದದಲ್ಲಿ ಪಾಲ್ಗೊಂಡರು. ಪ್ರಧಾನಿ ಸನ್ಮಾನ ಸ್ವೀಕರಿಸಿದ ಕ್ರಿಕೆಟಿಗರ ದೆಹಲಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಸಂಜೆ  ವೇಳೆ ಮುಂಬೈಗೆ ಆಗಮಿಸಿದ ಕ್ರಿಕೆಟಿಗರು ವಾಂಖೆಡೆಯಲ್ಲಿ ಆಯೋಜಿಸಿದ್ದ ಅದ್ಧೂರಿ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

 

 

ಕ್ರೀಡಾಂಗಣದ ಸುತ್ತ ಗೆಲವಿನ ವಿಜಯ ಯಾತ್ರೆ ನಡೆಸಿದ್ದಾರೆ. ವಾಂಖೆಡೆ ಕ್ರಿಡಾಂಗಣ ಮಳೆಯಲ್ಲೂ ಭರ್ತಿಯಾಗಿತ್ತು. ವಾಂಖೆಡೆಯಿಂದ ಟೀಂ ಇಂಡಿಯಾ ವಿಜಯಿ ಯಾತ್ರೆಗೆ ಲಕ್ಷಾಂತರ ಜನ ಸೇರಿದ್ದರು. ಮರೀನ್ ಡ್ರೈವ್ ರಸ್ತೆಯಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು. ರಸ್ತೆ, ಕಟ್ಟಡ, ಮರಗಳಲ್ಲಿ ಅಭಿಮಾನಿಗಳು ಹತ್ತಿಕುಳಿತಿದ್ದರು. 

ಸಂಭ್ರಮ ಯಾತ್ರೆಯಲ್ಲಿ ಕೊಹ್ಲಿ ಟ್ರೋಫಿ ನೀಡುತ್ತಿದ್ದಂತೆ ಭಾವುಕರಾದ ರಿಷಬ್ ಪಂತ್!

ಭಾರತೀಯ ಆಟಗಾರರಿದ್ದ ವಿಮಾನ ಮುಂಬೈ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆಯೇ ‘ವಾಟರ್‌ ಸಲ್ಯೂಟ್‌’ ಗೌರವ ಸಲ್ಲಿಸಲಾಯಿತು. ಅಗ್ನಿಶಾಮಕ ದಳದ ವಾಹನದ ಮೂಲಕ ವಿಮಾನದ ಮೇಲೆ ಎರಡೂ ಕಡೆಗಳಿಂದ ನೀರು ಹಾಯಿಸಲಾಯಿತು.


 

Latest Videos
Follow Us:
Download App:
  • android
  • ios